DCP North East retweeted
ಠಾಣ ಮೊ ನo- 237/26 ರಲ್ಲಿ ಸುರದೇನುಪುರ ಗ್ರಾಮದ ಮನೆ ಒಂದರಲ್ಲಿ ಚಿನ್ನ ಹಾಗೂ ಬೆಳ್ಳಿ ಒಡವೆ ಗಳು ಕಳ್ಳತನ ವಾಗಿ ಪ್ರಕರಣ ದಾಖಲಾಗಿದ್ದು , ಆರೋಪಿಯನ್ನು ಪತ್ತೆ ಮಾಡಿ ಒಡವೆಗಳನ್ನು ವಶಪಡಿಸಿಕೊಂಡು ಈ ದಿನ ಒಡವೆಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. @BlrCityPolice @DgpKarnataka @KarnatakaCops @DCPNEBCP @DcpComdCentre
DCP North East retweeted
ರಾಜಾನುಕುಂಟೆ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್ ನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಲಾಯಿತು. @BlrCityPolice @DgpKarnataka @DCPNEBCP
On the directions of the Hon’ble Chief Commissioner of Police, Bengaluru City, and under the guidance of the Hon’ble Commissioner of Police, North Commissionerate, an awareness programme was conducted for students at Vijaya Jyothi PU College, within the jurisdiction of Bagalur Police Station, NorthEast Division.
The programme focused on the POCSO Act, the harmful effects of drug abuse, women’s safety, personal safety and the safe use of social media. Students were educated about child protection, legal provisions under the POCSO Act and the importance of staying away from narcotic substances.
Information was also provided about the 112 emergency helpline, highlighting that students and members of the public can dial 112 to seek immediate assistance during emergencies. They were also briefed about the Safety Island initiative, its purpose and the use of its SOS facility to seek immediate police assistance during emergencies.
The programme aimed to create awareness among students about legal provisions, social responsibility and personal safety.
ಮಾನ್ಯ ಮುಖ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಹಾಗೂ ಮಾನ್ಯ ಪೊಲೀಸ್ ಆಯುಕ್ತರು, ಉತ್ತರ ಕಮಿಷನರೇಟ್ ರವರ ಮಾರ್ಗದರ್ಶನದಲ್ಲಿ, ಈಶಾನ್ಯ ವಿಭಾಗದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಜ್ಯೋತಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳು ಹಾಗೂ ಮಹಿಳಾ ಸುರಕ್ಷತೆ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪೋಕ್ಸೋ ಕಾಯ್ದೆಯ ಉದ್ದೇಶ ಮತ್ತು ಮಕ್ಕಳ ಸುರಕ್ಷತೆ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಮಹಿಳೆಯರ ಸುರಕ್ಷತೆ, ವೈಯಕ್ತಿಕ ಸುರಕ್ಷತೆ ಹಾಗೂ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ಮಾಹಿತಿ ನೀಡಲಾಯಿತು.
ಅಲ್ಲದೆ, ಯಾವುದೇ ತುರ್ತು ಪರಿಸ್ಥಿತಿ ಅಥವಾ ಅಪಾಯದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತಕ್ಷಣವೇ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಪಡೆಯುವ ಕುರಿತು ತಿಳಿಸಲಾಯಿತು. ಮಹಿಳೆಯರು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸ್ಥಾಪಿಸಿರುವ ಸೇಫ್ಟಿ ಐಲ್ಯಾಂಡ್ (Safety Island) ವ್ಯವಸ್ಥೆಯ ಉದ್ದೇಶ, ಅದರ ಬಳಕೆ ಹಾಗೂ ತುರ್ತು ಸಂದರ್ಭದಲ್ಲಿ SOS ಸೌಲಭ್ಯದ ಮೂಲಕ ಪೊಲೀಸ್ ಸಹಾಯ ಪಡೆಯುವ ವಿಧಾನದ ಬಗ್ಗೆಯೂ ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು, ಸಾಮಾಜಿಕ ಜವಾಬ್ದಾರಿ ಹಾಗೂ ವೈಯಕ್ತಿಕ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
#DcpNorthEast #CopNorth #BengaluruCityPolice
@BlrCityPolice @CCP_Blr @DgpKarnataka – at Bengaluru, India
147
ತಮ್ಮ ಅಮೂಲ್ಯ ಕೀರ್ತನೆಗಳು ಹಾಗೂ ಬೋಧನೆಗಳ ಮೂಲಕ ಸಮಾನತೆ, ಭಕ್ತಿ, ಕರುಣೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಶ್ರೀ ಕನಕದಾಸರನ್ನು ಸ್ಮರಿಸುತ್ತಾ ಗೌರವ ನಮನಗಳನ್ನು ಸಲ್ಲಿಸುತ್ತೇವೆ.
ಶಾಂತಿ, ಏಕತೆ ಮತ್ತು ಪರಸ್ಪರ ಗೌರವದ ತಳಹದಿಯ ಮೇಲೆ ಸಮಾಜ ನಿರ್ಮಾಣವಾಗಲು ಅವರ ಉದಾತ್ತ ಚಿಂತನೆಗಳು ಸದಾ ನಮಗೆ ಸ್ಫೂರ್ತಿಯಾಗಲಿ.
ಶ್ರೀ ಕನಕದಾಸರ ಜಯಂತಿಯಂದು ಹೃತ್ಪೂರ್ವಕ ನಮನಗಳು.
#ಕನಕದಾಸಜಯಂತಿ #DcpNorthEast #CpNorth #BengaluruCityPolice
@BlrCityPolice @CCP_Blr @DgpKarnataka – at Bengaluru, India
1
148
As per the directions of the Hon’ble Chief Commissioner of Police, Bengaluru City, and under the guidance of the Hon’ble Commissioner of Police, North Commissionerate, Awareness programmes were organised for school and college students at various schools within the jurisdiction of Yelahanka, Kothanur, Chikkaja, Kodigehalli and Vidyaranyapura Police Stations of the NorthEast Division, to educate them about the harmful effects of drug abuse and the provisions of the POCSO Act.
During the programmes, students were sensitised about the harmful consequences of drug abuse, Good Touch and Bad Touch, child safety and the provisions of the POCSO Act. Awareness was also created regarding the use of the KSP App, safe use of social media, precautions to be taken while sharing personal information online, personal safety, and the importance of confidently reporting any form of harassment or untoward incidents.
Furthermore, students were advised to safeguard their personal privacy, exercise caution while interacting with strangers, and immediately bring any issues or concerns to the attention of their parents, teachers or the police.
Through such awareness initiatives, Bengaluru City Police remains committed to promoting safety awareness among children and contributing towards building a safer society.
ಮಾನ್ಯ ಮುಖ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಹಾಗೂ ಮಾನ್ಯ ಪೊಲೀಸ್ ಆಯುಕ್ತರು, ಉತ್ತರ ಕಮಿಷನರೇಟ್ ರವರ ಮಾರ್ಗದರ್ಶನದಲ್ಲಿ, ಈಶಾನ್ಯ ವಿಭಾಗದ ಯಲಹಂಕ, ಕೊತ್ತನೂರು, ಚಿಕ್ಕಜಾಲ, ಕೊಡಿಗೇಹಳ್ಳಿ ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳು ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಗುಡ್ ಟಚ್ ಮತ್ತು ಬ್ಯಾಡ್ ಟಚ್, ಮಕ್ಕಳ ಸುರಕ್ಷತೆ ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಅರಿವು ಮೂಡಿಸಲಾಯಿತು. ಇದರೊಂದಿಗೆ KSP App ಬಳಕೆ, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ, ಆನ್ಲೈನ್ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ವಹಿಸಬೇಕಾದ ಎಚ್ಚರಿಕೆ, ವೈಯಕ್ತಿಕ ಸುರಕ್ಷತೆ ಹಾಗೂ ಯಾವುದೇ ರೀತಿಯ ಕಿರುಕುಳ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಧೈರ್ಯದಿಂದ ದೂರು ನೀಡುವ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.
ಅಲ್ಲದೆ, ಮಕ್ಕಳ ವೈಯಕ್ತಿಕ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು, ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸುವುದು ಹಾಗೂ ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಪೋಷಕರು, ಶಿಕ್ಷಕರು ಅಥವಾ ಪೊಲೀಸರ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಸುರಕ್ಷತೆಯ ಅರಿವು ಮೂಡಿಸಿ, ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿದೆ.
#Awareness #DcpNorthEast #CpNorth #BengaluruCityPolice
@BlrCityPolice @CCP_Blr @DgpKarnataka – at Bengaluru, India
Ku.Basira Wakarad, serving at Devanahalli Police Station, Bengaluru City Police, North Commissionerate, has been honoured with the Karnataka Sadhakaru Season 2 Award by Today News Kannada for her outstanding achievements in wrestling.
The NorthEast Division extends its warm congratulations to her on this well-deserved recognition and wishes her continued success and many more accomplishments in the years ahead.
ಬೆಂಗಳೂರು ನಗರ ಪೊಲೀಸ್ ಉತ್ತರ ಕಮಿಷನರೇಟ್ನ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕು.ಬಸೀರಾ ವಕಾರದ ರವರು ಕುಸ್ತಿ (Wrestling) ಕ್ಷೇತ್ರದಲ್ಲಿ ತೋರಿರುವ ಸಾಧನೆಯನ್ನು ಗುರುತಿಸಿ, Today News ಕನ್ನಡ ವಾಹಿನಿಯ ವತಿಯಿಂದ ಕರ್ನಾಟಕ ಸಾಧಕರು ಸೀಸನ್–2 ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.
ಕುಸ್ತಿ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಈ ಗಮನಾರ್ಹ ಸಾಧನೆಗೆ ಈಶಾನ್ಯ ವಿಭಾಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಸಾಧನೆಗಳನ್ನು ಮಾಡಿ ಯಶಸ್ಸಿನ ಹೊಸ ಎತ್ತರಗಳನ್ನು ತಲುಪಲಿ ಎಂದು ಶುಭ ಹಾರೈಸುತ್ತೇವೆ.
@BlrCityPolice @CCP_Blr @DgpKarnataka – at Bengaluru, India
1
308
Upon receiving information from the Hoysala Control Room about a person who had lost earphones and other belongings worth approximately ₹40,000 within the limits of Kothanur Police Station, NorthEast Division, Bengaluru City Police, North Commissionerate, the Hoysala 177 patrol team acted swiftly.
Shri Raghavendra, ASI, and Shri Mahadev promptly reached the spot, traced the missing belongings and handed them over to their rightful owner, demonstrating prompt response, dedication and commitment to public service.
ಬೆಂಗಳೂರು ನಗರ ಪೊಲೀಸ್ ಉತ್ತರ ಕಮಿಷನರೇಟ್ನ ಈಶಾನ್ಯ ವಿಭಾಗದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಸುಮಾರು ₹40,000 ಮೌಲ್ಯದ ಇಯರ್ಫೋನ್ ಹಾಗೂ ಇತರೆ ವಸ್ತುಗಳನ್ನು ಕಳೆದುಕೊಂಡಿರುವ ಬಗ್ಗೆ ಹೊಯ್ಸಳ ಕಂಟ್ರೋಲ್ ರೂಂಗೆ ಮಾಹಿತಿ ಬಂದಿರುತ್ತದೆ.
ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ 177ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ರಾಘವೇಂದ್ರ, ASI ಮತ್ತು ಶ್ರೀ ಮಹಾದೇವ ಅವರು ಸ್ಥಳಕ್ಕೆ ಧಾವಿಸಿ, ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಕರ್ತವ್ಯನಿಷ್ಠೆ ಮತ್ತು ಸಾರ್ವಜನಿಕ ಸೇವಾ ಬದ್ಧತೆಯನ್ನು ಮೆರೆದಿರುತ್ತಾರೆ.
#GoodWork #KotthanuruPs #DcpNorthEast #CpNorth #BengaluruCityPolice
@BlrCityPolice
@CCP_Blr @DgpKarnataka – at Bengaluru, India
4
378
On the occasion of Constitution Day, officers and staff at the DCP Office, NorthEast Division, Bengaluru City Police, North Commissionerate, took the constitutional pledge by reading the Preamble to the Constitution of India.
The occasion served as a reminder of the core constitutional values of Justice, Liberty, Equality and Fraternity, reaffirming the commitment of the police personnel to uphold the Constitution, respect citizens' rights and discharge their duties with impartiality and dedication.
ಸಂವಿಧಾನ ದಿನಾಚರಣೆಯ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಉತ್ತರ ಕಮಿಷನರೇಟ್ನ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನದ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಭೂತ ಸಂವಿಧಾನಿಕ ಮೌಲ್ಯಗಳನ್ನು ಸ್ಮರಿಸಲಾಯಿತು. ಸಂವಿಧಾನವನ್ನು ಎತ್ತಿಹಿಡಿಯುವುದು, ನಾಗರಿಕರ ಹಕ್ಕುಗಳನ್ನು ಗೌರವಿಸುವುದು ಹಾಗೂ ನಿಷ್ಪಕ್ಷಪಾತ ಮತ್ತು ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ಬದ್ಧತೆಯನ್ನು ಪುನರುಚ್ಚರಿಸಲಾಯಿತು.
#ConstitutionDay #DcpNorthEast #CopNorth #BengaluruCityPolice
@BlrCityPolice @CCP_Blr @DgpKarnataka @KarnatakaCops – at Bengaluru, India
As part of the Open House programme, students of Samskruthi Montessori School visited Vidyaranyapura Police Station, NorthEast Division, North Commissionerate, Bengaluru City Police.
During the visit, police officers briefed the students on the functioning of the police station, day-to-day policing activities, maintenance of law and order, and various measures undertaken to ensure public safety.
The students were also familiarised with the procedures for receiving and addressing public complaints, the roles and responsibilities of police personnel, the procedure for contacting the police during emergencies, and the use of the emergency helpline 112.
The programme aimed to provide students with first-hand exposure to the functioning of a police station and create awareness about the importance of law-abiding behaviour, discipline and civic responsibility.
ಬೆಂಗಳೂರು ನಗರ ಪೊಲೀಸ್ ಉತ್ತರ ಕಮಿಷನರೇಟ್ನ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಸಂಸ್ಕೃತಿ ಮಾಂಟೆಸ್ಸರಿ ಶಾಲೆಯ ವಿದ್ಯಾರ್ಥಿಗಳು ತೆರೆದ ಮನೆ (Open House) ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಆಡಳಿತಾತ್ಮಕ ಕಾರ್ಯವೈಖರಿ, ದಿನನಿತ್ಯದ ಕರ್ತವ್ಯಗಳು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವ ಮತ್ತು ಅವುಗಳ ಮೇಲೆ ಕೈಗೊಳ್ಳುವ ಕ್ರಮಗಳು, ಪೊಲೀಸ್ ಸಿಬ್ಬಂದಿಯ ಜವಾಬ್ದಾರಿಗಳು, ತುರ್ತು ಸಂದರ್ಭಗಳಲ್ಲಿ ಪೊಲೀಸರನ್ನು ಸಂಪರ್ಕಿಸುವ ವಿಧಾನ ಹಾಗೂ ತುರ್ತು ಸಹಾಯವಾಣಿ 112ರ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ಕುರಿತು ಪ್ರತ್ಯಕ್ಷ ಅರಿವು ಮೂಡಿಸುವುದರ ಜೊತೆಗೆ, ಕಾನೂನು ಪಾಲನೆ, ಶಿಸ್ತು ಮತ್ತು ನಾಗರಿಕ ಜವಾಬ್ದಾರಿಗಳ ಮಹತ್ವವನ್ನು ತಿಳಿಸಲಾಯಿತು.
#DcpNorthEast #CpNorth #BengaluruCityPolice
@BlrCityPolice @CCP_Blr @DgpKarnataka @KarnatakaCops – at Bengaluru, India
1
222
🇮🇳 ಸಂವಿಧಾನ ದಿನ | ನವೆಂಬರ್ 26
ನ್ಯಾಯಯುತ, ಸಮಾನತೆಯ ಮತ್ತು ಐಕ್ಯತೆಯ ಭಾರತ ನಿರ್ಮಾಣದತ್ತ ನಮ್ಮ ಸಂವಿಧಾನದ ಆಶಯಗಳು ನಮಗೆ ಸದಾ ಮಾರ್ಗದರ್ಶನ ನೀಡಲಿ.
ಕಾನೂನನ್ನು ಗೌರವಿಸಿ. ಹಕ್ಕುಗಳನ್ನು ರಕ್ಷಿಸಿ. ಮೌಲ್ಯಗಳನ್ನು ಉಳಿಸಿ.
#ConstitutionDay #DcpNorthEast #CpNorth #BengaluruCityPolice
The Hon’ble Commissioner of Police, North, visited the Office of the Deputy Commissioner of Police, NorthEast Division, today and received the Guard of Honour. Subsequently, Meeting was held with all DCPs, ACPs and Police Inspectors of the North Commissionerate, during which several important instructions were issued to improve policing, maintain law and order, prevent crime and enhance the quality of public service.
During the meeting, the Commissioner emphasised the importance of police discipline and professional conduct. All officers and staff must strictly adhere to the prescribed police dress code and maintain discipline. They must interact with the public politely and respectfully, demonstrate leadership qualities, and discharge their duties with professionalism and accountability. Officers were also instructed to delegate responsibilities to subordinate staff based on their capabilities and ensure proper supervision of their work.
The Commissioner directed that Weekly Roll Call must be conducted compulsorily at every police station. The duties and performance of police personnel must be reviewed regularly. Police Inspectors must have complete knowledge of pending Non-Bailable Warrants (NBWs) and take necessary steps for their prompt execution.
To strengthen crime prevention, greater priority must be given to Area Domination operations. Crime-prone and sensitive locations must be identified and subjected to special patrolling and inspections. The beat system must be effectively implemented, and Naka Points must be established at necessary locations. Special attention must be given to robbery, chain snatching, eve-teasing, drug trafficking and consumption, and wheeling activities.
The Commissioner stressed that women's safety must be accorded the highest priority. Awareness programmes on women's safety, cybercrime and the harmful effects of drugs must be conducted in schools, colleges and companies. Strict legal action must be taken against those involved in harassing women and eve-teasing. Patrolling arrangements must also be strengthened to ensure the safe movement of women and female students.
Continuous surveillance must be maintained over the activities and movements of rowdy-sheeters. Technical surveillance must be effectively utilised to monitor their activities. Wherever necessary, preventive measures such as registering PAR cases, externment proceedings, bail cancellation and bond forfeiture must be initiated in accordance with the law.
Strict action must be taken against the sale, transportation and consumption of narcotic substances. NDPS cases must be investigated thoroughly, focusing on identifying the source of drugs, supply networks and other persons involved. Scientific methods must be adopted for collecting necessary evidence. Coordination with prosecution officers must also be ensured for effective prosecution of cases.
The Commissioner instructed that continuous monitoring of social media must be undertaken to identify hate speech and the circulation of provocative content. The Social Media Monitoring Cell must effectively monitor online activities, and appropriate legal action must be initiated against those involved in unlawful activities.
In cases involving serious offences such as robbery, dacoity and chain snatching, officers must immediately visit the crime scene and initiate prompt investigation. Priority must be given to identifying the accused at the earliest, collecting evidence and maintaining high standards of investigation. Officers were also instructed to effectively utilise technological platforms such as NATGRID, ITPSO and e-Sakshya for crime detection, investigation and the collection and preservation of digital evidence.
(1) – at Bengaluru, India
To strengthen public relations, officers must organise public interaction and awareness meetings, address public grievances and provide appropriate solutions. Awareness must be created among the public regarding cybercrime, women's safety and the harmful effects of drugs. Community policing initiatives must be strengthened through effective public engagement. Additionally, necessary training programmes and workshops must be organised to enhance the investigative skills, technical knowledge and legal awareness of police officers and staff.
At the conclusion of the meeting, the Hon’ble Commissioner of Police directed all officers to work with mutual coordination and a strong team spirit, uphold discipline, dedication and accountability, and maintain the reputation of the department while giving utmost priority to public safety and crime prevention.
ಮಾನ್ಯ ಪೊಲೀಸ್ ಆಯುಕ್ತರು, ಉತ್ತರ ಕಮಿಷನರೇಟ್ ರವರು ಇಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರ (DCP) ಕಚೇರಿಗೆ ಭೇಟಿ ನೀಡಿ ಗೌರವ ವಂದನೆ ಸ್ವೀಕರಿಸಿದರು. ನಂತರ ಉತ್ತರ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಡಿಸಿಪಿ, ಎಸಿಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ರವರೊಂದಿಗೆ ಸಭೆ ನಡೆಸಿ, ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಕುರಿತು ಮಹತ್ವದ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪೊಲೀಸ್ ಸಮವಸ್ತ್ರ ಸಂಹಿತೆ (Dress Code) ಹಾಗೂ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ಮತ್ತು ಗೌರವದಿಂದ ವರ್ತಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಾಯಕತ್ವದ ಗುಣ, ವೃತ್ತಿಪರತೆ ಹಾಗೂ ಜವಾಬ್ದಾರಿಯನ್ನು ಬೆಳೆಸಿಕೊಂಡು ಕಾರ್ಯನಿರ್ವಹಿಸಬೇಕು. ಅಧೀನ ಸಿಬ್ಬಂದಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಹಂಚಿಕೆ ಮಾಡಿ, ಕಾರ್ಯನಿರ್ವಹಣೆಯ ಮೇಲೆ ಸೂಕ್ತ ಮೇಲ್ವಿಚಾರಣೆ ವಹಿಸಬೇಕು ಎಂದು ಸೂಚಿಸಿದರು.
ಪ್ರತಿ ಪೊಲೀಸ್ ಠಾಣೆಯಲ್ಲಿ ವಾರಕ್ಕೊಮ್ಮೆ ಕಡ್ಡಾಯವಾಗಿ Weekly Roll Call ನಡೆಸಬೇಕು. ಸಿಬ್ಬಂದಿಯ ಕರ್ತವ್ಯ ಹಾಗೂ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು. ಬಾಕಿ ಇರುವ ಜಾಮೀನು ರಹಿತ ವಾರಂಟ್ಗಳ (NBW) ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ರವರು ಸಂಪೂರ್ಣ ಮಾಹಿತಿ ಹೊಂದಿದ್ದು, ಅವುಗಳ ತ್ವರಿತ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅಪರಾಧ ನಿಯಂತ್ರಣಕ್ಕಾಗಿ ಏರಿಯಾ ಡಾಮಿನೇಷನ್ (Area Domination) ಕಾರ್ಯಾಚರಣೆಗಳಿಗೆ ಆದ್ಯತೆ ನೀಡಬೇಕು. ಅಪರಾಧ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವಿಶೇಷ ಗಸ್ತು ಮತ್ತು ತಪಾಸಣೆ ನಡೆಸಬೇಕು. ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅಗತ್ಯವಿರುವ ಸ್ಥಳಗಳಲ್ಲಿ ನಾಕಾ ಪಾಯಿಂಟ್ಗಳನ್ನು (Naka Points) ಸ್ಥಾಪಿಸಬೇಕು. ದರೋಡೆ, ಸರಗಳ್ಳತನ, ಈವ್ ಟೀಸಿಂಗ್, ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಹಾಗೂ ವೀಲಿಂಗ್ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ, ಶಾಲಾ-ಕಾಲೇಜುಗಳು ಹಾಗೂ ಕಂಪನಿಗಳಲ್ಲಿ ಮಹಿಳಾ ಸುರಕ್ಷತೆ, ಸೈಬರ್ ಅಪರಾಧ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಹಿಳೆಯರಿಗೆ ಕಿರುಕುಳ ನೀಡುವವರು ಹಾಗೂ ಈವ್ ಟೀಸಿಂಗ್ನಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷಿತ ಸಂಚಾರಕ್ಕೆ ಅಗತ್ಯ ಗಸ್ತು ವ್ಯವಸ್ಥೆ ಬಲಪಡಿಸಬೇಕು ಎಂದು ಸೂಚಿಸಿದರು.
ರೌಡಿ ಶೀಟರ್ಗಳ ಚಟುವಟಿಕೆ ಮತ್ತು ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಬೇಕು. ತಾಂತ್ರಿಕ ಕಣ್ಗಾವಲು (Technical Surveillance) ವ್ಯವಸ್ಥೆಯನ್ನು ಬಳಸಿಕೊಂಡು ಅವರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬೇಕು. ಅಗತ್ಯವಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ PAR ದಾಖಲಿಸುವುದು, ಗಡಿಪಾರು (Externment), ಜಾಮೀನು ರದ್ದತಿ (Bail Cancellation) ಹಾಗೂ ಬಾಂಡ್ ಜಪ್ತಿ (Bond Forfeiture) ಕ್ರಮಗಳನ್ನು ಕಾನೂನುಬದ್ಧವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಮಾದಕ ವಸ್ತುಗಳ ಮಾರಾಟ, ಸಾಗಣೆ ಮತ್ತು ಸೇವನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. NDPS ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಮಾದಕ ವಸ್ತುಗಳ ಮೂಲ, ಪೂರೈಕೆ ಜಾಲ ಹಾಗೂ ಇತರ ಸಂಪರ್ಕಿತರ ಕುರಿತು ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಪ್ರಾಸಿಕ್ಯೂಷನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಕರಣಗಳ ಪರಿಣಾಮಕಾರಿ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಭಾಷಣ (Hate Speech) ಹಾಗೂ ಪ್ರಚೋದನಕಾರಿ ವಿಷಯಗಳನ್ನು ಹರಡುವ ಚಟುವಟಿಕೆಗಳ ಮೇಲೆ Social Media Monitoring Cell ಮೂಲಕ ನಿರಂತರ ನಿಗಾ ವಹಿಸಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
(2) – at Bengaluru, India
1
2
81
ದರೋಡೆ, ಡಕಾಯಿತಿ ಹಾಗೂ ಸರಗಳ್ಳತನದಂತಹ ಗಂಭೀರ ಅಪರಾಧಗಳು ಸಂಭವಿಸಿದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತ್ವರಿತ ತನಿಖೆ ಕೈಗೊಳ್ಳಬೇಕು. ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚುವುದರ ಜೊತೆಗೆ ಸಾಕ್ಷ್ಯಾಧಾರಗಳ ಸಂಗ್ರಹಣೆ ಮತ್ತು ತನಿಖೆಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅಪರಾಧ ಪತ್ತೆ ಹಾಗೂ ತನಿಖಾ ಕಾರ್ಯಗಳಲ್ಲಿ NATGRID, ITPSO ಮತ್ತು e-Sakshya ತಂತ್ರಜ್ಞಾನ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಡಿಜಿಟಲ್ ಸಾಕ್ಷ್ಯಾಧಾರಗಳ ಸಂಗ್ರಹಣೆ ಮತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಜನಸಂಪರ್ಕ ಹಾಗೂ ಜಾಗೃತಿ ಸಭೆಗಳನ್ನು ಆಯೋಜಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಬೇಕು. ಸೈಬರ್ ಅಪರಾಧ, ಮಹಿಳಾ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಮೂಲಕ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಬೇಕು. ಅಲ್ಲದೆ, ಅಧಿಕಾರಿಗಳು ಮತ್ತು ಸಿಬ್ಬಂದಿಯವರ ತನಿಖಾ ಕೌಶಲ್ಯ, ತಾಂತ್ರಿಕ ಜ್ಞಾನ ಹಾಗೂ ಕಾನೂನು ಅರಿವು ಹೆಚ್ಚಿಸಲು ಅಗತ್ಯ ತರಬೇತಿ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು.
ಸಭೆಯ ಕೊನೆಯಲ್ಲಿ, ಎಲ್ಲಾ ಹಂತದ ಅಧಿಕಾರಿಗಳು ಪರಸ್ಪರ ಸಮನ್ವಯ ಹಾಗೂ ತಂಡದ ಮನೋಭಾವದಿಂದ ಕಾರ್ಯನಿರ್ವಹಿಸಿ, ಶಿಸ್ತು, ಸಮರ್ಪಣೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆಯ ಗೌರವವನ್ನು ಎತ್ತಿಹಿಡಿಯಬೇಕು ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಅಪರಾಧ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾನ್ಯ ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದರು.
@BlrCityPolice @CCP_Blr @DgpKarnataka @DCPNorthBCP – at Bengaluru, India
1
63
In a significant crackdown on Drug trafficking, Yelahanka New Town Police have apprehended two accused persons who were allegedly attempting to sell the prohibited narcotic substances MDMA/Methamphetamine to the public within the jurisdiction of Yelahanka NewTown Police Station, NorthEast Division, North Commissionerate, Bengaluru City Police.
During the operation, the police seized 5.72 kg of MDMA/Methamphetamine from the accused, with an estimated market value of ₹5.72 crore.
This operation reflects the continued commitment of the police to preventing the illegal sale and transportation of narcotic substances and curbing drug-related activities.
The Hon’ble Chief Police Commissioner and the Hon’ble Police Commissioner, North Commissionerate, appreciated the successful operation and commended the dedication, professionalism and effective efforts of the police officers and personnel involved.
The fight against drugs continues with unwavering determination. Together, let us work towards building a safer and drug-free society.
ಬೆಂಗಳೂರು ನಗರ ಪೊಲೀಸ್ ಉತ್ತರ ಕಮಿಷನರೆಟ್ನ ಈಶಾನ್ಯ ವಿಭಾಗದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ MDMA/Methamphetamine ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಆರೋಪಿಗಳಿಂದ ಸುಮಾರು 5 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ, ಒಟ್ಟು 5.72 ಕೆ.ಜಿ. ತೂಕದ MDMA/Methamphetamine ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ಸಾಗಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆ ಗಮನಾರ್ಹವಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಮಾನ್ಯ ಮುಖ್ಯ ಪೊಲೀಸ್ ಆಯುಕ್ತರು ಪ್ರಶಂಸಿಸಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಕಾರ್ಯಕ್ಷಮತೆಯನ್ನು ಶ್ಲಾಘಿಸಿರುತ್ತಾರೆ.
ಮಾದಕ ವಸ್ತುಗಳ ವಿರುದ್ಧ ನಮ್ಮ ಹೋರಾಟ ನಿರಂತರ. ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.
#DcpNorthEast #CPnorth #BengaluruCityPolice
@BlrCityPolice @CCP_Blr @DgpKarnataka – at Bengaluru, India
ಮಹಿಳೆಯರ ಸುರಕ್ಷತೆ ನಮ್ಮೆಲ್ಲರ ಹೊಣೆ!
ನವೆಂಬರ್ 25 – ಅಂತರರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ದಿನ.
ಪ್ರತಿಯೊಬ್ಬ ಮಹಿಳೆಯೂ ಭಯವಿಲ್ಲದೆ, ಸುರಕ್ಷಿತವಾಗಿ ಮತ್ತು ಗೌರವದಿಂದ ಬದುಕುವಂತಾಗಬೇಕು. ಮಹಿಳೆಯರ ಮೇಲಿನ ಕಿರುಕುಳ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತೋಣ. ಸಂತ್ರಸ್ತರಿಗೆ ಬೆಂಬಲ ನೀಡೋಣ ಹಾಗೂ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.
ಮಹಿಳೆಯರನ್ನು ಗೌರವಿಸಿ, ದೌರ್ಜನ್ಯದ ವಿರುದ್ಧ ನಿಲ್ಲಿ!
#Awareness #CopNorth #DcpNorthEast #BengaluruCityPolice
@BlrCityPolice @CCP_Blr @DgpKarnataka @KarnatakaCops
🤖 Made with AI
⚠️ ಇತರರನ್ನು ಮೆಚ್ಚಿಸಲು ನಿಮ್ಮ ಜೀವವನ್ನು ಅಪಾಯಕ್ಕೆ ತಳ್ಳಬೇಡಿ!
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು Likes ಮತ್ತು Followers ಪಡೆಯಲು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು ಅಥವಾ ಅಪಾಯಕಾರಿ ಸಾಹಸಗಳನ್ನು ಮಾಡುವುದು ನಿಮ್ಮ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟುಮಾಡಬಹುದು. ವಿಡಿಯೋದಲ್ಲಿ ರೋಚಕವಾಗಿ ಕಾಣುವ ಇಂತಹ ಕೃತ್ಯಗಳು ಅಪಘಾತ, ಗಾಯಗಳು ಹಾಗೂ ಕಾನೂನು ಕ್ರಮಗಳಿಗೆ ಕಾರಣವಾಗಬಹುದು.
🚨 ನೆನಪಿರಲಿ:
• ಇತರರನ್ನು ಬೆದರಿಸಲು ಅಥವಾ ಮೆಚ್ಚಿಸಲು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಬೇಡಿ.
• ಅಪಾಯಕಾರಿ ಕೃತ್ಯಗಳನ್ನು ಪ್ರೋತ್ಸಾಹಿಸುವ ವಿಡಿಯೋಗಳನ್ನು ಪೋಸ್ಟ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ.
• ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಯಾರ ಜೀವವನ್ನೂ ಅಪಾಯಕ್ಕೆ ಸಿಲುಕಿಸಬೇಡಿ.
Likes ಮತ್ತು Followers ಇಂದು ಇರಬಹುದು, ನಾಳೆ ಇರದಿರಬಹುದು. ಆದರೆ ಅವುಗಳಿಂದಾಗುವ ಪರಿಣಾಮಗಳು ಜೀವನಪೂರ್ತಿ ಕಾಡಬಹುದು. ಸುರಕ್ಷಿತವಾಗಿರಿ, ಜವಾಬ್ದಾರಿಯಿಂದ ವರ್ತಿಸಿ!
📞 ತುರ್ತು ಸಹಾಯವಾಣಿ: 112
#Awareness #DcpNorthEast #BengaluruCityPolice
@CCP_Blr @BlrCityPolice @DgpKarnataka @KarnatakaCops
🤖 Made with AI
2
271
OLX ವಂಚನೆ – ನಕಲಿ ಆಫರ್ಗಳಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ!
OLX ನಲ್ಲಿ ವಸ್ತುಗಳನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ವಂಚಕರು ನಕಲಿ ಗುರುತು, ಸುಳ್ಳು ಪಾವತಿ ಸ್ಕ್ರೀನ್ಶಾಟ್ಗಳು ಮತ್ತು UPI ಮೂಲಕ ಜನರನ್ನು ವಂಚಿಸುತ್ತಿರುತ್ತಾರೆ.
ನಕಲಿ ಖರೀದಿದಾರರ ವಂಚನೆ:
ವಂಚಕರು ಸೇನಾ ಸಿಬ್ಬಂದಿಯಂತೆ ಅಥವಾ ಖರೀದಿದಾರರಂತೆ ನಟಿಸಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಹಣ ಪಾವತಿಸಿರುವುದಾಗಿ ನಕಲಿ ಸ್ಕ್ರೀನ್ಶಾಟ್ ಕಳುಹಿಸಿ, ಹಣ ಬಂದಿದೆಯೆಂದು ನಂಬಿಸಿ ವಂಚಿಸುತ್ತಾರೆ.
ಮುಂಗಡ ಹಣದ ವಂಚನೆ:
ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದಾಗಿ ಆಕರ್ಷಕ ಜಾಹೀರಾತುಗಳನ್ನು ಹಾಕುತ್ತಾರೆ. ವಸ್ತು ಕಾಯ್ದಿರಿಸಲು ಮುಂಗಡ ಹಣ ಕಳುಹಿಸುವಂತೆ ಹೇಳಿ, ಹಣ ಪಡೆದ ನಂತರ ಸಂಪರ್ಕ ಕಡಿತಗೊಳಿಸುತ್ತಾರೆ.
ಸುರಕ್ಷಿತವಾಗಿರಲು:
• ಹಣ ಬಂದಿದೆಯೇ ಎಂಬುದನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಪರಿಶೀಲಿಸಿ.
• OTP ಅಥವಾ UPI PIN ಅನ್ನು ಯಾರಿಗೂ ತಿಳಿಸಬೇಡಿ.
• ಹಣ ಪಡೆಯಲು QR ಕೋಡ್ ಸ್ಕ್ಯಾನ್ ಮಾಡಬೇಡಿ.
• ಅಪರಿಚಿತರಿಗೆ ಮುಂಗಡ ಹಣ ಕಳುಹಿಸಬೇಡಿ.
ವ್ಯವಹಾರ ಮಾಡುವ ಮೊದಲು ಯೋಚಿಸಿ, ಪರಿಶೀಲಿಸಿ. ವಂಚನೆಗೆ ಬಲಿಯಾಗಬೇಡಿ!
📞 ಸೈಬರ್ ವಂಚನೆ: 1930 | ತುರ್ತು ಸಹಾಯ: 112
#Awareness #DcpNorthEast #BengaluruCityPolice
@CCP_Blr @BlrCityPolice @DgpKarnataka
🤖 Made with AI
⚠️ ತಕ್ಷಣದ ಸಾಲ, ತಕ್ಷಣದ ಬ್ಲ್ಯಾಕ್ಮೇಲ್!
ನಕಲಿ ಸಾಲದ ಆ್ಯಪ್ಗಳು ನಿಮ್ಮ ಮೊಬೈಲ್ನಲ್ಲಿರುವ ಸಂಪರ್ಕ ವಿವರಗಳು ಮತ್ತು ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ನಿಮಗೆ ಬೆದರಿಕೆ ಹಾಕಬಹುದು. ನಿಮ್ಮ ಕುಟುಂಬದವರು ಮತ್ತು ಸ್ನೇಹಿತರಿಗೆ ಕರೆ ಮಾಡಿ ಕಿರುಕುಳ ನೀಡಬಹುದು ಅಥವಾ ಮಾರ್ಫ್ ಮಾಡಿದ ಫೋಟೋಗಳನ್ನು ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಬಹುದು.
ಎಚ್ಚರಿಕೆ ವಹಿಸಿ:
ಮೊಬೈಲ್ನಲ್ಲಿರುವ ಸಂಪರ್ಕ ವಿವರಗಳ ದುರುಪಯೋಗ ಮತ್ತು ಬೆದರಿಕೆ ಕರೆಗಳು.
ಮಾರ್ಫ್ ಮಾಡಿದ ಫೋಟೋಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುವುದು. ಸಾಲ ಮರುಪಾವತಿ ಮಾಡಿದ ನಂತರವೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಡುವುದು.
ಸಾಲದ ಆ್ಯಪ್ಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ಅನಗತ್ಯ ಅನುಮತಿಗಳನ್ನು ನೀಡಬೇಡಿ, ಬೆದರಿಕೆಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಉಳಿಸಿಕೊಳ್ಳಿ ಮತ್ತು ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿ.
📞 ಸೈಬರ್ ವಂಚನೆ ಸಹಾಯವಾಣಿ: 1930 | ತುರ್ತು ಸಹಾಯವಾಣಿ: 112
#Awareness #DcpNorthEast #BengaluruCityPolice
@CCP_Blr @BlrCityPolice @DgpKarnataka @KarnatakaCops
🤖 Made with AI
1
310
ಚೈನ್ ಲಿಂಕ್ ಹಣದ ವಂಚನೆಯು ಕಡಿಮೆ ಮೊತ್ತ ಹೂಡಿಕೆ ಮಾಡಿ, ಹೊಸ ಸದಸ್ಯರನ್ನು ಸೇರಿಸುವ ಮೂಲಕ ಹೆಚ್ಚಿನ ಹಣ ಗಳಿಸಬಹುದು ಎಂಬ ಆಕರ್ಷಕ ಭರವಸೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿಯೊಬ್ಬ ಸದಸ್ಯರೂ ಮತ್ತಷ್ಟು ಜನರನ್ನು ಸೇರಿಸಬೇಕಾಗಿರುತ್ತದೆ. ಹೀಗೆ ಸರಪಳಿಯಂತೆ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಆದರೆ ಹೊಸ ಸದಸ್ಯರು ಸೇರುವುದು ನಿಂತಾಗ ಈ ಸರಪಳಿ ಮುರಿದುಬಿದ್ದು, ಕೊನೆಗೆ ಸೇರಿದ ಅನೇಕರು ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ.
▪️ ಹಣ ಗಳಿಸುವ ಯೋಜನೆಗೆ ಸೇರುವ ಹೆಸರಿನಲ್ಲಿ ಪ್ರವೇಶ ಶುಲ್ಕ ಪಾವತಿಸಬೇಡಿ.
▪️ ಹೊಸ ಸದಸ್ಯರನ್ನು ಸೇರಿಸುವುದರ ಮೇಲೆ ಅವಲಂಬಿತವಾಗಿರುವ ಆದಾಯದ ಭರವಸೆಗಳನ್ನು ನಂಬಬೇಡಿ.
▪️ ನಕಲಿ ಲಾಭದ ಸ್ಕ್ರೀನ್ಶಾಟ್ಗಳು ಮತ್ತು ಹಣ ಪಾವತಿಯ ಪುರಾವೆಗಳನ್ನು ನೋಡಿ ಆಕರ್ಷಿತರಾಗಬೇಡಿ.
▪️ ಪರಿಶೀಲಿಸದ ಹಣ ಗಳಿಸುವ ಯೋಜನೆಗಳಿಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಸೇರಿಸಬೇಡಿ.
ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡುವ ಸರಪಳಿ ಕೊನೆಗೆ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಉಳಿತಾಯಕ್ಕೆ ಕುತ್ತು ತರುವ ಮುನ್ನವೇ ಈ ವಂಚನೆಯ ಸರಪಳಿಯನ್ನು ಮುರಿಯಿರಿ!
📞 ಸೈಬರ್ ವಂಚನೆ ಸಹಾಯವಾಣಿ: 1930 | ತುರ್ತು ಸಹಾಯವಾಣಿ: 112
#Awareness #DcpNorthEast #BengaluruCityPolice
@CCP_Blr @BlrCityPolice @DgpKarnataka @jt_cpeastbcp
🤖 Made with AI
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವನ್ನು ತಡೆಯಲು ಹಾಗೂ ಮಕ್ಕಳನ್ನು ರಕ್ಷಿಸಲು ಪೋಕ್ಸೊ (POCSO) ಕಾಯ್ದೆ, 2012 ಜಾರಿಯಲ್ಲಿದೆ.
⚖️ ಕಾನೂನು ತಿಳಿಯಿರಿ – ಪೋಕ್ಸೊ ಕಾಯ್ದೆ:
• ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಅಪರಾಧದ ಸ್ವರೂಪ ಮತ್ತು ಮಗುವಿನ ವಯಸ್ಸಿಗೆ ಅನುಗುಣವಾಗಿ 3 ವರ್ಷದಿಂದ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಕನಿಷ್ಠ 20 ವರ್ಷದಿಂದ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯನ್ನೂ ವಿಧಿಸಬಹುದು. ಲೈಂಗಿಕ ಕಿರುಕುಳಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಮಗುವಿನ ಹೆಸರು ಮತ್ತು ಗುರುತನ್ನು ಗೌಪ್ಯವಾಗಿಡಿ.
ಮಕ್ಕಳ ಸಹಾಯವಾಣಿ: 1098
ತುರ್ತು ಸಹಾಯವಾಣಿ: 112
@CCP_Blr @BlrCityPolice @DgpKarnataka
🤖 Made with AI





























