🙏 ವಂದೇ ಗೋ ಮಾತರಂ 🙏
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಮಾತೆಗೆ ವಿಶೇಷವಾದ ಸ್ಥಾನವಿದೆ. ಗೋಮಾತೆ ಕೇವಲ ಪ್ರಾಣಿ ಮಾತ್ರವಲ್ಲ, ಕೋಟ್ಯಂತರ ಭಾರತೀಯರ ಭಕ್ತಿ, ನಂಬಿಕೆ ಮತ್ತು ಶ್ರದ್ಧೆಯ ಪ್ರತೀಕ.
ಸಕಲ ದೇವತೆಗಳ ಸ್ವರೂಪವೆಂದು ಪೂಜಿಸಲ್ಪಡುವ ಗೋಮಾತೆಯನ್ನು ಶೃಂಗರಿಸಿ, ಆರತಿ ಬೆಳಗಿ, ಭಕ್ತಿಯಿಂದ ಪೂಜಿಸುವ ಈ ಪವಿತ್ರ ದಿನದಂದು ಗೋಮಾತೆಯ ಮಹತ್ವವನ್ನು ಸ್ಮರಿಸೋಣ.
ಗೋಮಾತೆಯನ್ನು ಪೂಜಿಸುವುದಷ್ಟೇ ಅಲ್ಲ, ಅವುಗಳ ರಕ್ಷಣೆ, ಪೋಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನೂ ಅರಿಯೋಣ.
ಗೋಮಾತೆಯ ಸೇವೆಯೇ ಪುಣ್ಯದ ಕಾರ್ಯ. ಗೋಮಾತೆಯ ಸಂರಕ್ಷಣೆಯೇ ನಮ್ಮೆಲ್ಲರ ಕರ್ತವ್ಯ.
ಗೋಮಾತೆಯ ಆಶೀರ್ವಾದದಿಂದ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ.
ಎಲ್ಲರಿಗೂ ಪವಿತ್ರ ಗೋ ಪೂಜೆಯ ಹಾರ್ದಿಕ ಶುಭಾಶಯಗಳು. 🙏🐄
ವಂದೇ ಗೋ ಮಾತರಂ!
#GouPooje #ಗೋಮಾತೆ #ಗೋಸಂರಕ್ಷಣೆ #ವಂದೇಗೋಮಾತರಂ #IndianCulture
1
95
"ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳು"
"ಬೆಳಕಿನ ಹಬ್ಬವು ಕೆ.ಆರ್.ಪುರ ಕ್ಷೇತ್ರದ ಜನತೆಗೆ ಒಳಿತನ್ನು ಕರುಣಿಸಲಿ,
ಎಲ್ಲರ ಬಾಳಲ್ಲಿ ಕತ್ತಲು ಕರಗಿ, ಬೆಳಕನ್ನು ಚೆಲ್ಲಲಿ ಎಂದು ಹಾರೈಸುತ್ತೆನೆ"
#deepawali
ರಾಷ್ಟ್ರಮಟ್ಟದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭದ್ರ ಬುನಾದಿ ಹಾಕಿ, ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ, ‘ಬಿಜೆಪಿ ಭೀಷ್ಮ’ ಎಂದೇ ಖ್ಯಾತರಾದ, ಭಾರತ ರತ್ನ ಪುರಸ್ಕೃತ, ಮಾಜಿ ಉಪಪ್ರಧಾನಿ ಸನ್ಮಾನ್ಯ ಶ್ರೀ ಎಲ್.ಕೆ. ಅಡ್ವಾಣಿ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 💐
ದೇಶದ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಸಮರ್ಪಣೆ, ಶಿಸ್ತು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿರುವ ಅವರ ಜೀವನಾದರ್ಶಗಳು ಸದಾ ಸ್ಮರಣೀಯ.
ಭಗವಂತನು ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 🙏
ಜನ್ಮದಿನದ ಹಾರ್ದಿಕ ಶುಭಾಶಯಗಳು ಅಡ್ವಾಣಿ ಜೀ! 💐
#LalKrishnaAdvaniJi #LKAdvani #BharatRatna #BirthdayWishes
3
179
ಆತ್ಮೀಯರು, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ
ಶ್ರೀ ಬಿ.ವೈ.ವಿಜಯೇಂದ್ರ Vijayendra Yediyurappa ಅವರಿಗೆ ಜನ್ಮದಿನದ ಶುಭಾಷಯಗಳು.
#VijayendraYediyurappa
ಕೆ.ಆರ್.ಪುರ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಮುಂದುವರಿದಿದೆ!
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಇಂದು ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಸಾಯಿ ಗಾರ್ಡನ್ ಬಡಾವಣೆಯಲ್ಲಿ ಯು.ಜಿ.ಡಿ. ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಬಳಿಕ ಬಸವನಪುರ ವಾರ್ಡಿನ ಸೀಗೆಹಳ್ಳಿಯ ಸೆಲ್ವರಾಜ್ ಬಡಾವಣೆ, ಸ್ವತಂತ್ರ ನಗರ ಹಾಗೂ ಸೃಷ್ಟಿ ಬಡಾವಣೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ದೊಡ್ಡಬಸವಪುರದ ರೈನ್ಬೋ ಬಡಾವಣೆಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ, ಅವುಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕ್ಷೇತ್ರದ ಸಮಗ್ರ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಹಾಗೂ ಉತ್ತಮ ಮೂಲಸೌಕರ್ಯಗಳ ನಿರ್ಮಾಣವೇ ನಮ್ಮ ಆದ್ಯತೆ. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿಯ ಪಯಣ ನಿರಂತರವಾಗಿ ಸಾಗಲಿದೆ.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಆಯಾ ವಾರ್ಡ್ಗಳ ಮಾಜಿ ಬಿಬಿಎಂಪಿ ಸದಸ್ಯರು, ಪ್ರಮುಖ ಮುಖಂಡರು, ಪದಾಧಿಕಾರಿಗಳು, ಬಡಾವಣೆಗಳ ನಿವಾಸಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#KRPura #DevelopmentWorks #UrbanDevelopment #PublicService
ಪ್ರಜಾಪ್ರಭುತ್ವದ ಆಶಯಗಳಿಗಾಗಿ ಜನಜಾಗೃತಿ ಪಾದಯಾತ್ರೆ – ಕೋಲಾರದಲ್ಲಿ ಶಕ್ತಿ ಪ್ರದರ್ಶನ!
ಎಸ್ಐಆರ್ ಪ್ರಕ್ರಿಯೆ ಕುರಿತು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನಗಳು ಹಾಗೂ ಸುಳ್ಳು ಸುದ್ದಿಗಳ ಮೂಲಕ ಅರಾಜಕತೆ ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇಂತಹ ಬೆಳವಣಿಗೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ “ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ” ಪಾದಯಾತ್ರೆಗೆ ಇಂದು ಕೋಲಾರದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ರಾಜ್ಯ ಉಸ್ತುವಾರಿಗಳಾದ ಶ್ರೀ ಹರೀಶ್ ದ್ವಿವೇದಿ ಜೀ, ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಜೀ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಜೀ, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಅಶ್ವತ್ಥ್ ನಾರಾಯಣ, ಮಾಜಿ ಸಂಸದರಾದ ಶ್ರೀ ಮುನಿಸ್ವಾಮಿ, ಶಾಸಕರು ಹಾಗೂ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಧೀರಜ್ ಮುನಿರಾಜು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷರಾದ ಶ್ರೀ ಓಂ ಶಕ್ತಿ ಛಲಪತಿ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ, ಚುನಾವಣಾ ಪ್ರಕ್ರಿಯೆಯ ಕುರಿತು ಜಾಗೃತಿ ಮತ್ತು ಜನರಲ್ಲಿ ಸತ್ಯಾಂಶಗಳ ಅರಿವು ಮೂಡಿಸುವ ಸಂಕಲ್ಪದೊಂದಿಗೆ ಸಾಗಿದ ಈ ಪಾದಯಾತ್ರೆ ಜನಜಾಗೃತಿಯ ಸಂದೇಶ ಸಾರಿತು.
#SaveDemocracyRemoveAnarchy #BJPKarnataka #Kolar #SaveDemocracy
ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
ಕನ್ನಡವೇ ನಮ್ಮ ಹೆಮ್ಮೆ, ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಅಸ್ಮಿತೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! 🚩
ಜೈ ಕರ್ನಾಟಕ ಮಾತೆ! ❤️💛
#ಕನ್ನಡರಾಜ್ಯೋತ್ಸವ #KannadaRajyotsava #ಜೈಕರ್ನಾಟಕ #ಕನ್ನಡಿಗರು
🌟 ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಶ್ರೀ ಎ.ಪಿ. ರಂಗನಾಥ್ ಅವರಿಗೆ ಐತಿಹಾಸಿಕ ಜಯಭೇರಿ! 🌟
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾದ ಶ್ರೀ ಎ.ಪಿ. ರಂಗನಾಥ್ ಅವರು ಅಭೂತಪೂರ್ವ ಗೆಲುವು ಸಾಧಿಸಿರುವುದು ಅತ್ಯಂತ ಸಂತಸದ ಸಂಗತಿ. 💐👏
ಶಿಕ್ಷಕ ಸಮುದಾಯದ ಅಪಾರ ಬೆಂಬಲ, ವಿಶ್ವಾಸ ಹಾಗೂ ಆಶೀರ್ವಾದದಿಂದ ಐತಿಹಾಸಿಕ ಜಯ ದಾಖಲಿಸಿದ ಶ್ರೀ ಎ.ಪಿ. ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಗೆಲುವಿನ ಶುಭಾಶಯಗಳು! 💐
ಈ ಗೆಲುವು ಕೇವಲ ಒಬ್ಬ ಅಭ್ಯರ್ಥಿಯ ಗೆಲುವಲ್ಲ; ಇದು ಶಿಕ್ಷಕರ ಒಗ್ಗಟ್ಟಿನ ಶಕ್ತಿ, ಅವರ ಆಶಯಗಳ ಪ್ರತಿಬಿಂಬ ಹಾಗೂ ಶಿಕ್ಷಣ ಕ್ಷೇತ್ರದ ಹಕ್ಕು ಮತ್ತು ಗೌರವಕ್ಕೆ ಸಂದ ಜಯವಾಗಿದೆ. 📚✊
ಶಿಕ್ಷಕರ ಹಕ್ಕುಗಳ ರಕ್ಷಣೆ, ಅವರ ಗೌರವದ ಹೆಚ್ಚಳ ಹಾಗೂ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿಧಾನ ಪರಿಷತ್ತಿನಲ್ಲಿ ತಮ್ಮ ಧ್ವನಿಯನ್ನು ಇನ್ನಷ್ಟು ಪ್ರಬಲವಾಗಿ ಮೊಳಗಿಸಿ, ಶಿಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲಿ ಎಂದು ಹಾರೈಸುತ್ತೇನೆ.
ಈ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿ, ಸಂಘಟಿತವಾಗಿ ಕಾರ್ಯನಿರ್ವಹಿಸಿ ಎನ್.ಡಿ.ಎ. ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಸಮಸ್ತ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು. 🙏
ನಮ್ಮ ಒಗ್ಗಟ್ಟು, ಸಂಘಟನಾ ಶಕ್ತಿ ಮತ್ತು ನಿರಂತರ ಪರಿಶ್ರಮವೇ ಈ ಯಶಸ್ಸಿನ ಹಿಂದಿನ ಶಕ್ತಿ. ಮುಂದೆಯೂ ಇದೇ ಉತ್ಸಾಹದಿಂದ ಜನಸೇವೆ ಹಾಗೂ ಸಂಘಟನೆಯ ಬಲವರ್ಧನೆಗೆ ನಾವೆಲ್ಲರೂ ಬದ್ಧರಾಗೋಣ.
💐 ಶ್ರೀ ಎ.ಪಿ. ರಂಗನಾಥ್ ಅವರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು!
ಜಯವಾಗಲಿ ಶಿಕ್ಷಕ ಸಮುದಾಯಕ್ಕೆ!
ಜಯವಾಗಲಿ ಎನ್.ಡಿ.ಎ.! 🚩
#APRanganath #BengaluruTeachersConstituency #MLCElection #NDA #byrathibasavaraj
7
369
🚧 ಗುಬ್ಬಿ ಕ್ರಾಸ್ನಿಂದ ವಡ್ಡರಪಾಳ್ಯ ಸಿಗ್ನಲ್ವರೆಗೆ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಕ್ರಮ!
ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರೊಂದಿಗೆ, ಹೆಣ್ಣೂರು–ಬಾಗಲೂರು ರಸ್ತೆಗೆ ಹೊಂದಿಕೊಂಡಿರುವ, ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಗುಬ್ಬಿ ಕ್ರಾಸ್ನಿಂದ ವಡ್ಡರಪಾಳ್ಯ ಸಿಗ್ನಲ್ವರೆಗೆ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
✈️ ವಿಮಾನ ನಿಲ್ದಾಣ ಸಂಪರ್ಕಕ್ಕೆ ಪ್ರಮುಖ ರಸ್ತೆ – ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರದತ್ತ ಹೆಜ್ಜೆ!
ಈ ರಸ್ತೆಯು ಶ್ರೀ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಅಪಾರ್ಟ್ಮೆಂಟ್ಗಳ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪ್ರತಿನಿತ್ಯ ತೀವ್ರ ವಾಹನ ದಟ್ಟಣೆ ಮತ್ತು ಸಂಚಾರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಮಗಾರಿಯ ಪ್ರಗತಿ, ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಸಲಹೆಗಳನ್ನು ಸಚಿವರೊಂದಿಗೆ ಚರ್ಚಿಸಲಾಯಿತು.
ನಮ್ಮ ಮನವಿಗೆ ಸ್ಪಂದಿಸಿದ ಸಚಿವರು, ಈ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಸಾರ್ವಜನಿಕರ ಸಂಚಾರ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜನರ ಸುಗಮ ಸಂಚಾರವೇ ನಮ್ಮ ಆದ್ಯತೆ!
ಈ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ, ಈ ಭಾಗದ ನಿವಾಸಿಗಳಿಗೆ ಹಾಗೂ ಪ್ರತಿನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸವಿದೆ.
ಈ ಸಂದರ್ಭದಲ್ಲಿ GBAಯ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು, ಪ್ರಮುಖ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಜನರ ಸಮಸ್ಯೆಗಳಿಗೆ ಸ್ಪಂದನೆ – ಅಭಿವೃದ್ಧಿಯೇ ನಮ್ಮ ಸಂಕಲ್ಪ!
#KRpura #RoadDevelopment #WhiteTopping #TrafficRelief #Byrathibasavaraja
2
6
315
ಕಲ್ಕೆರೆಯ ಎನ್.ಆರ್.ಐ ಬಡಾವಣೆ ಮೊದಲನೇ ಹಂತದ (NRI LAYOUT PHASE–1) ರಾಜಕಾಲುವೆಯ ಬೃಹತ್ ಮಳೆನೀರು ಕಾಲುವೆ ನಿರ್ಮಾಣ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು.
ಸ್ಥಳೀಯರ ಬಹುದಿನಗಳ ಅಗತ್ಯಕ್ಕೆ ಸ್ಪಂದಿಸಿ, ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ವ್ಯವಸ್ಥೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಊರಿನ ಪ್ರಮುಖ ಮುಖಂಡರು, ಅಸೋಸಿಯೇಷನ್ ಪದಾಧಿಕಾರಿಗಳು, ಬಡಾವಣೆಯ ನಿವಾಸಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜನರ ಆಶಯಗಳಿಗೆ ಸ್ಪಂದನೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ!
#KRpura #NriLayout #Development #PublicWorks #byrathibasavaraj
3
178
ಸಮಸ್ತ ನಾಡಿನ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಷಯಗಳು.
#valmikijayanthi2026
5
153
ಗೆದ್ದಲಹಳ್ಳಿಯಿಂದ ಕೈಗೊಳ್ಳಬೇಕಾಗಿರುವ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಯ ಕುರಿತು ಇಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿ ಹಾಗೂ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸ್ಥಳೀಯ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಜನರ ಅನುಕೂಲವೇ ನಮ್ಮ ಆದ್ಯತೆ, ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಸಂಕಲ್ಪ!
#KRpura #Geddalahalli #WhiteToppingRoad #ಅಭಿವೃದ್ಧಿಯೇ_ಆದ್ಯತೆ #byrathibasavaraj
2
196
ದಕ್ಷ ನಾಯಕಿ, ಜನಸೇವೆಯೇ ತಮ್ಮ ಧ್ಯೇಯವಾಗಿಸಿಕೊಂಡಿರುವ ಕೇಂದ್ರ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಕು. ಶೋಭಾ ಕರಂದ್ಲಾಜೆ Shobha Karandlaje ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎂💐
ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಗೆ ಇನ್ನಷ್ಟು ಶಕ್ತಿ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
ರಾಷ್ಟ್ರದ ಅಭಿವೃದ್ಧಿ ಹಾಗೂ ಜನಕಲ್ಯಾಣದ ಕಾರ್ಯಗಳಲ್ಲಿ ತಮ್ಮ ಸೇವೆ ನಿರಂತರವಾಗಿ ಮುಂದುವರಿಯಲಿ. 🙏🏻
ಭಾರತ ಮಾತಾ ಕೀ ಜೈ! 🇮🇳
#HappyBirthday #ShobhaKarandlaje #BJP #BengaluruNorth #ByrathiBasavaraj
1
99
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಂತಿ.
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಹೆಚ್ಚಿನ ಮತಗಳಿಂದ ಗೆಲ್ಲಿಸೋಣ.
#MLCElection #BJP4Karnataka
112
🇮🇳 ನವ ಭಾರತದ ಚಾಣಕ್ಯ… ರಾಷ್ಟ್ರದ ಸಂಕಲ್ಪದ ಶಕ್ತಿ… ಭಾರತದ ಆಂತರಿಕ ಭದ್ರತೆಯ ಅಪ್ರತಿಮ ರಕ್ಷಕ! 🇮🇳
ದೇಶದ ಏಕತೆ, ಅಖಂಡತೆ ಮತ್ತು ಭದ್ರತೆಯ ವಿಚಾರದಲ್ಲಿ ಅಚಲ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ, ತಮ್ಮ ದಿಟ್ಟ ನಿರ್ಧಾರಗಳು ಹಾಗೂ ಸಂಘಟನಾ ಚಾತುರ್ಯದಿಂದ ರಾಷ್ಟ್ರೀಯ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು! 💐🔥
ರಾಷ್ಟ್ರದ ಹಿತವೇ ಪರಮ ಗುರಿ, ದೇಶದ ಭದ್ರತೆಯೇ ಪ್ರಥಮ ಆದ್ಯತೆ, ಭಾರತಮಾತೆಯ ಸೇವೆಯೇ ಜೀವನದ ಸಂಕಲ್ಪ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ನಿಮ್ಮ ನಾಯಕತ್ವ ದೇಶದ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆ.
💥 ದಿಟ್ಟ ನಿರ್ಧಾರಗಳಿಗೆ ಮತ್ತೊಂದು ಹೆಸರು — ಅಮಿತ್ ಶಾ ಜೀ!
🛡️ ರಾಷ್ಟ್ರದ ಭದ್ರತೆಗೆ ಅಚಲ ಸಂಕಲ್ಪ — ಅಮಿತ್ ಶಾ ಜೀ!
🇮🇳 ದೇಶ ಮೊದಲು, ರಾಷ್ಟ್ರದ ಹಿತವೇ ಸದಾ ಮೊದಲು!
ಭಗವಂತನು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ರಾಷ್ಟ್ರಸೇವೆಯಲ್ಲಿ ಇನ್ನಷ್ಟು ಶಕ್ತಿ ನೀಡಲಿ. ನಿಮ್ಮ ಮಾರ್ಗದರ್ಶನದಲ್ಲಿ ಭಾರತವು ಅಭಿವೃದ್ಧಿ, ಸುರಕ್ಷತೆ ಮತ್ತು ಪ್ರಗತಿಯ ಹೊಸ ಶಿಖರಗಳನ್ನು ತಲುಪಲಿ ಎಂದು ಹಾರೈಸುತ್ತೇನೆ.
ವಂದೇ ಮಾತರಂ! 🇮🇳
ಭಾರತ ಮಾತಾ ಕೀ ಜೈ! 🚩
#HBDayAmitShahji #Bjp #bjpkarnataka #krpura #byrathibasavaraj
3
134
🌺 ದಸರಾ – ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು 🌺
ನಾಡಿನ ಸಮಸ್ತ ಜನತೆಗೆ ಹಾಗೂ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಆತ್ಮೀಯ ಬಂಧುಗಳಿಗೆ ದಸರಾ – ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ನೆಲೆಸಲಿ. ದುಷ್ಟಶಕ್ತಿಯ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾದ ಈ ಪವಿತ್ರ ಹಬ್ಬವು ಎಲ್ಲರ ಬದುಕಿನಲ್ಲಿ ಹೊಸ ಭರವಸೆ ಮತ್ತು ಯಶಸ್ಸನ್ನು ತರಲಿ.
ಸರ್ವರಿಗೂ ವಿಜಯದಶಮಿಯ ಶುಭಾಶಯಗಳು! 🙏
#ದಸರಾ #ವಿಜಯದಶಮಿ #ನಾಡಹಬ್ಬ #KRPURA #byrathibasavaraj
2
211
🌺🙏 ಮಹಾನವಮಿ – ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು 🙏🌺
ಸಮಸ್ತ ನಾಡಿನ ಜನತೆಗೆ ಹಾಗೂ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಪ್ರೀತಿಯ ಬಂಧುಗಳೆಲ್ಲರಿಗೂ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು. 💐
ನಾಡಿನ ಜನರೆಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯವನ್ನು ಕರುಣಿಸಲಿ. ದುಷ್ಟಶಕ್ತಿಗಳ ವಿರುದ್ಧ ಒಳಿತಿನ ವಿಜಯ ಸದಾ ನಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆ.
ಸರ್ವರಿಗೂ ಶುಭವಾಗಲಿ, ವಿಜಯವಾಗಲಿ! 🙏🌼
— ಭೈರತಿ ಬಸವರಾಜ್
ಶಾಸಕರು, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ
ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಕರ್ನಾಟಕ
#ಮಹಾನವಮಿ #ಆಯುಧಪೂಜೆ #ದಸರಾ #KRPura #BharathiBasavaraj
1
126
🚩 ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ! 🚩
ರಾಮಮೂರ್ತಿನಗರದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ಶ್ರೀ ಶಂಕರ್ ಅವರು ತಮ್ಮ ಸಂಗಡಿಗರಾದ ನಾಗರಾಜ್, ಪ್ರವೀಣ್, ರತನ್ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. 💐
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಹಾಗೂ ಶ್ರೀ ಮುನಿಸ್ವಾಮಿ ಮತ್ತು ರಾಮಮೂರ್ತಿನಗರದ ಪ್ರಮುಖ ಮುಖಂಡರು ಉಪಸ್ಥಿತರಿದ್ದು, ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಬಿಜೆಪಿಯ ತತ್ವ, ಸಿದ್ಧಾಂತ ಹಾಗೂ ರಾಷ್ಟ್ರಸೇವೆಯ ಸಂಕಲ್ಪಕ್ಕೆ ಮತ್ತಷ್ಟು ಬಲ! 🚩
#BJP #byrathibasavaraj #RamamurthyNagar #bjpkrpura
205
ಇಂದು ಕೆ.ಆರ್. ಪುರ ಯುವಮೋರ್ಚಾ ವತಿಯಿಂದ ಕೆ.ಆರ್.ಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಯುವಜನತೆಯನ್ನು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ದೂರವಿರಿಸಿ, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಯುವಶಕ್ತಿಯೇ ದೇಶದ ಶಕ್ತಿ ಎಂಬ ಆಶಯದೊಂದಿಗೆ, ಮಾದಕ ವ್ಯಸನಮುಕ್ತ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಈ ಸಂದರ್ಭದಲ್ಲಿ ಮಂಡಲದ ಪದಾಧಿಕಾರಿಗಳು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಪಕ್ಷದ ಕಾರ್ಯಕರ್ತರು, ಮಂಡಲ ಯುವಮೋರ್ಚಾ ತಂಡದ ಪದಾಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಶೆ ಮುಕ್ತ ಯುವಜನತೆ – ಸದೃಢ ಭಾರತ, ಸಮರ್ಥ ಭಾರತ! 🇮🇳
#NashaMuktBharat #BJYM #BJPKarnataka #BengaluruNorth #KRPura
172
ರೈಲ್ವೆ ಉದ್ಯೋಗಿಗಳಿಗೆ ಮೋದಿ ಸರ್ಕಾರದ ದೀಪಾವಳಿ ಉಡುಗೊರೆ : 11.40 ಲಕ್ಷ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ !
ರೈಲ್ವೆ ಉದ್ಯೋಗಿಗಳಿಗೆ ₹2,009.61 ಕೋಟಿಗಳ ಉತ್ಪಾದಕತೆ ಆಧಾರಿತ ಬೋನಸ್ (PLB) ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
11.40 ಲಕ್ಷಕ್ಕೂ ಅಧಿಕ ರೈಲ್ವೆ ಉದ್ಯೋಗಿಗಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ.
#CabinetDecisions
106










































