
Official Twitter account of DCP, South-West Division, Bengaluru City. Dial 112 in case of emergency, Help us to serve you better @BlrCityPolice
Bengaluru City, Karnataka, IND
Joined July 2025
- Tweets350
- Following108
- Followers267
- Likes93
🚨 ಹೊಯ್ಸಳ 246 ಪೊಲೀಸರ ಸಮಯಪ್ರಜ್ಞೆ – ತಪ್ಪಿದ ಭಾರೀ ಅನಾಹುತ! 👏
@kumbalaguduPS ವ್ಯಾಪ್ತಿಯ ಕುಂಬಳಗೋಡು ಟವರ್ ಸಮೀಪದ ಶೆಡ್ನಲ್ಲಿ ಗೋಬಿ ಮಂಚೂರಿ ತಯಾರಿಸುವ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬೆಂಕಿ ಉರಿಯುತ್ತಿದ್ದ ಬಗ್ಗೆ ಕಾರ್ಮಿಕರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು,
ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ 246ರ ಕರ್ತವ್ಯ ನಿರತ ಅಧಿಕಾರಿ ಎ.ಎಸ್.ಐ. ಶಶಿಕುಮಾರ್ ಹಾಗೂ ಸಿಬ್ಬಂದಿ ಖಾಜಾ ಅಮೀನ ವಾಲಿಕಾರ್ ಅವರು ಸ್ಥಳಕ್ಕೆ ಧಾವಿಸಿ, ಒದ್ದೆಯಾದ ಗೋಣಿಚೀಲವನ್ನು ಬಳಸಿ ಸಿಲಿಂಡರ್ನಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿ, ತ್ವರಿತ ಕಾರ್ಯಾಚರಣೆ ಮೂಲಕ ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಯಲ್ಲಿ ಸಮಯಪ್ರಜ್ಞೆ ಮೆರೆದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾಗಿದೆ. 👏🚔 @BlrCityPolice @jt_cpwestbcp @JointCPWest @AcpKengeri
ತುರ್ತು ಸಂಧರ್ಭದಲ್ಲಿ 112ಕ್ಕೆ ಕರೆ ಮಾಡಿ, ನಿಮ್ಮ ಸುರಕ್ಷತೆ ನಮ್ಮ ಆದ್ಯತೆ.
#Hoysala112 #BengaluruCityPolice #DCPsouthwest #PublicSafety
🎮 ಮಕ್ಕಳ ಆನ್ಲೈನ್ ಗೇಮಿಂಗ್ OnlineGaming ಮೇಲೆ ನಿಗಾ ಇರಲಿ!
ಮಕ್ಕಳ ಅತಿಯಾದ ಆನ್ಲೈನ್ ಗೇಮಿಂಗ್ ಅಭ್ಯಾಸವು ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹಣ ಪಾವತಿಸುವ ಆಟಗಳು, ಆನ್ಲೈನ್ ಬೆಟ್ಟಿಂಗ್ ಹಾಗೂ ಸೈಬರ್ ವಂಚನೆಗಳ ಬಗ್ಗೆ ಎಚ್ಚರ ವಹಿಸಿ. ಮಕ್ಕಳ ಆನ್ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ಅವರ ಭವಿಷ್ಯವನ್ನು ಸುರಕ್ಷಿತವಾಗಿರಿಸಿ!
📞 ತುರ್ತು ಸಹಾಯಕ್ಕಾಗಿ 112 ಗೆ ಕರೆ ಮಾಡಿ.
@BlrCityPolice @JointCPWest @CPBlr @DgpKarnataka
#CyberSafety #OnlineGaming #ChildSafety #BengaluruCityPolice #DCPsouthwest
🙏🌿 ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು! 🌿🙏
ಸಮಸ್ತ ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
ಮಹಾಕಾವ್ಯ ರಾಮಾಯಣದ ಮೂಲಕ ಸತ್ಯ, ಧರ್ಮ, ಕರ್ತವ್ಯ, ಮಾನವೀಯತೆ ಹಾಗೂ ಸದಾಚಾರದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ. @BlrCityPolice @JointCPWest
#MaharshiValmikiJayanti #DCPsouthwest #BengaluruCityPolice #SouthWestDivision
🔐 ವೈಯಕ್ತಿಕ ಮಾಹಿತಿ ಹಂಚಿಕೆಯಲ್ಲಿ ಎಚ್ಚರಿಕೆ ವಹಿಸಿ!
ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿವರಗಳು, ಫೋಟೋಗಳು, ವಿಳಾಸ ಹಾಗೂ ಬ್ಯಾಂಕ್ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳಬೇಡಿ. ಸೈಬರ್ ಅಪರಾಧಿಗಳು ನಿಮ್ಮ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ.
🔒 ಗೌಪ್ಯತಾ ಸೆಟ್ಟಿಂಗ್ಗಳನ್ನು ಸಕ್ರಿಯಗೊಳಿಸಿ. ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
🚨 ಸೈಬರ್ ಆರ್ಥಿಕ ವಂಚನೆಗೊಳಗಾದಲ್ಲಿ ತಕ್ಷಣ 1930ಕ್ಕೆ ಕರೆ ಮಾಡಿ ಅಥವಾ cybercrime.gov.in ಮೂಲಕ ದೂರು ದಾಖಲಿಸಿ.
ಎಚ್ಚರಿಕೆ ವಹಿಸಿ – ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ!
@BlrCityPolice @JointCPWest
#CyberAwareness #CyberSafety #StayAlert
🤖 Made with AI
🚔 ನೈಋತ್ಯ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತನಿಖಾ ಕೌಶಲ್ಯ ವೃದ್ಧಿ ತರಬೇತಿ ಕಾರ್ಯಾಗಾರ
ನೈರುತ್ಯ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ತನಿಖಾ ಕೌಶಲ್ಯ ಮತ್ತು ತನಿಖಾ ವಿಧಾನಗಳ ಕುರಿತು 3ನೇ ತರಬೇತಿ ಕಾರ್ಯಾಗಾರವನ್ನು ದಿನಾಂಕ 22.10.2026 ರಂದು ಪ್ರೊ. ವೆಂಕಟಗಿರಿಗೌಡ ಮೆಮೋರಿಯಲ್ ಹಾಲ್, ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾನ್ಯ 2ನೇ ಎ.ಸಿ.ಜೆ.ಎಂ ನ್ಯಾಯಾಲಯ ಬೆಂಗಳೂರು ಗ್ರಾಮಾಂತರದ ಹಿರಿಯ ಸರ್ಕಾರಿ ಅಭಿಯೋಜಕರಾದ ಶ್ರೀ ಮಧುಸೂದನ್ ಹೆಚ್ ಕೆ ರವರು ತನಿಖಾ ನ್ಯೂನತೆಗಳು ತನಿಖೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕಾನೂನು ಮಾರ್ಗಸೂಚಿಗಳು, ತನಿಖೆಯ ಗುಣಮಟ್ಟ ಹೆಚ್ಚಿಸುವ ಕ್ರಮಗಳ ಬಗ್ಗೆ ಮತ್ತು ಮಾನ್ಯ 1ನೇ ಎ.ಸಿ.ಜೆ.ಎಂ ನ್ಯಾಯಾಲಯ ಬೆಂಗಳೂರು ನಗರದ ಹಿರಿಯ ಸರ್ಕಾರಿ ಅಭಿಯೋಜಕರಾದ ಶ್ರೀ ಮುನಿರಾಜು ಎಂ ರವರು ಪ್ರಾಥಮಿಕ ತನಿಖೆ, ಶಂಕಿತರ ವಿಚಾರಣೆ, ತನಿಖೆಯ ಗುಣಮಟ್ಟ ಹೆಚ್ಚಿಸುವ ಕ್ರಮಗಳ ಬಗ್ಗೆ ಹಾಗೂ ಶ್ರೀ ಡಾ. ಪ್ರದೀಪ್ ನಿರ್ದೇಶಕರು ಹಾಗೂ ಮುಖ್ಯಸ್ಥರು ಹಾವೇರಿ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾವೇರಿ ಜಿಲ್ಲೆ ರವರು Medico Legal Examination, Case Studies of Sexual Assualt, Homicide, POCSO, Traffic fatal Case and Other UDR Cases ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ತನಿಖಾ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.
ವಿಶೇಷವಾಗಿ ಸಂತ್ರಸ್ತರ ಹೇಳಿಕೆಗಳನ್ನು ಕಾನೂನುಬದ್ಧವಾಗಿ ದಾಖಲಿಸುವುದು, ಅಗತ್ಯ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದು ಹಾಗೂ ವೈದ್ಯಕೀಯ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸೂಕ್ತವಾಗಿ ಪರಿಗಣಿಸುವುದು ಸೇರಿದಂತೆ ತನಿಖೆಯ ವಿವಿಧ ಹಂತಗಳ ಕುರಿತು ಮಾರ್ಗದರ್ಶನ ನೀಡಿದರು.
ಈ ಕಾರ್ಯಾಗಾರವು ನೈರುತ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯವರ ತನಿಖಾ ಕೌಶಲ್ಯ, ಕಾನೂನು ಜ್ಞಾನ ಮತ್ತು ವೃತ್ತಿಪರ ಜ್ಞಾನಭಿವೃದ್ದಿ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿ, ಪ್ರಕರಣಗಳ ಗುಣಮಟ್ಟದ ಹಾಗೂ ಪರಿಣಾಮಕಾರಿ ತನಿಖೆಗೆ ಸಹಕಾರಿಯಾಗಲಿದೆ. @BlrCityPolice @JointCPWest
DCP South-West Bengaluru City retweeted
ವೀರ ಯೋಧರಿಗೆ ನಮನ. ಅವರ ಪರಮೋಚ್ಛ ತ್ಯಾಗದ ಸ್ಮರಣೆ.
ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನ ಸಿ.ಎ.ಆರ್. (CAR) ಪ್ರಧಾನ ಕಚೇರಿಯಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಗಂಭೀರ ಸಮಾರಂಭದಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಐ.ಎ.ಎಸ್., ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕರಾದ ಡಾ. ಎಂ. ಎ. ಸಲೀಂ, ಐ.ಪಿ.ಎಸ್., ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು.
ಪೊಲೀಸ್ ಹುತಾತ್ಮರ ಧೈರ್ಯ, ಅಚಲ ಸಮರ್ಪಣಾ ಭಾವ ಮತ್ತು ಪರಮೋಚ್ಛ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ಸಮಾರಂಭದಲ್ಲಿ ಗೌರವ ವಂದನೆ (ಜನರಲ್ ಸೆಲ್ಯೂಟ್), ಪುಷ್ಪಗುಚ್ಛ ಸಮರ್ಪಣೆ ಹಾಗೂ ಹುತಾತ್ಮರ ಹೆಸರಿನ ಪಟ್ಟಿ (ರೋಲ್ ಆಫ್ ಆನರ್) ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅವರ ಈ ತ್ಯಾಗವು ಸದಾಕಾಲ ನಮಗೆ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಸ್ಫೂರ್ತಿಯಾಗಲಿದೆ.
Honouring the Brave. Remembering Their Supreme Sacrifice.
On the occasion of Police Commemoration Day, Hon’ble Chief Minister Sri D. K. Shivakumar paid floral tributes to fallen police personnel at Martyrs’ Garden, CAR Headquarters, Bengaluru.
Hon’ble Home Minister Sri Priyank Kharge, Sri Rajendra Kumar Kataria, IAS, Additional Chief Secretary (Home), Dr. M. A. Saleem, IPS, DG & IGP, Karnataka, Sri Seemant Kumar Singh, IPS, Commissioner of Police, Bengaluru City, along with other senior officers and police personnel, joined in paying homage.
The solemn ceremony included a General Salute, wreath-laying and the reading of the Roll of Honour, remembering the courage, dedication and supreme sacrifice of police martyrs.
Their sacrifice will forever inspire us to serve and protect with honour and dedication.
#PoliceCommemorationDay #BengaluruCityPolice #KarnatakaPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP South-West Bengaluru City retweeted
🤖 Made with AI

ALT ದೇಶದ ರಕ್ಷಣೆಗಾಗಿ, ಸಮಾಜದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ಭಾವಪೂರ್ಣ ಶ್ರದ್ಧಾಂಜಲಿ. 🙏 ನಿಮ್ಮ ಧೈರ್ಯ ನಮ್ಮ ಶಕ್ತಿ. ನಿಮ್ಮ ತ್ಯಾಗ ನಮ್ಮ ಹೆಮ್ಮೆ. ನಿಮ್ಮ ಸೇವೆ ಸದಾ ಸ್ಮರಣೀಯ. ಕರ್ತವ್ಯವೇ ಧರ್ಮವೆಂದು ನಾಡಿನ ಶಾಂತಿ ಮತ್ತು ಜನರ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರರ ತ್ಯಾಗ ಎಂದೆಂದಿಗೂ ಅಮರ. ವೀರ ಪೊಲೀಸ್ ಹುತಾತ್ಮರಿಗೆ ಶತಶತ ನಮನಗಳು! 🌹 #PoliceMartyrsDay #PoliceSalute #SaluteToOurHeroes
🚨 ಪಿರಮಿಡ್ ಯೋಜನೆಗಳ ಆಮಿಷಕ್ಕೆ ಒಳಗಾಗಬೇಡಿ!
💰 ಅತಿಯಾದ ಲಾಭದ ಭರವಸೆ, ಹೊಸ ಸದಸ್ಯರನ್ನು ಸೇರಿಸುವ ಆಮಿಷ ಹಾಗೂ ಇತರರನ್ನು ಸದಸ್ಯರನ್ನಾಗಿಸಲು ಒತ್ತಡ ಹೇರುವ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ.
✅ ಹೂಡಿಕೆ ಮಾಡುವ ಮೊದಲು ಯೋಜನೆಯ ಕಾನೂನುಬದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ. @BlrCityPolice
🤖 Made with AI
@DCPSOUTHWESTBCP Div @konanakunteps ವ್ಯಾಪ್ತಿಯಲ್ಲಿಹಳೆಯ ದ್ವೇಷದ ಹಿನ್ನಲೆ ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಗನ್ನಿಂದ ಕಾಲಿಗೆ ಗುಂಡುಹಾರಿಸಿ ತೀವ್ರ ರಕ್ತ ಗಾಯ ಮಾಡಿ ಕೊಲೆಗೆಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. @BlrCityPolice
DCP South-West Bengaluru City retweeted
ಆಪರೇಷನ್ ಆರ್.ಐ.ಎಸ್.ಇ ಹಾಗೂ ಬೇಡ ಬ್ರೋ.
ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧದ ದೊಡ್ಡ ಕಾರ್ಯಾಚರಣೆಯಲ್ಲಿ, ಒಡಿಶಾದಿಂದ ಬೆಂಗಳೂರು ಮೂಲಕ ಕೇರಳಕ್ಕೆ 317 ಕೆ.ಜಿ. ಗಾಂಜಾವನ್ನು ಸಾಗಿಸುತ್ತಿದ್ದ ಇಬ್ಬರನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿರುವ ಈ ಮಾದಕ ದ್ರವ್ಯದ ಮೌಲ್ಯ 1.78 ಕೋಟಿ ರೂ.ಗಳಾಗಿದ್ದು (ಮಾರುಕಟ್ಟೆ ಮೌಲ್ಯ: 3.17 ಕೋಟಿ ರೂ ಆಗಿದೆ), ಇದರೊಂದಿಗೆ ಒಂದು ಇನ್ನೋವಾ ಕಾರನ್ನು ಸಹ ಜಪ್ತಿ ಮಾಡಲಾಗಿದೆ.
ಈ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ
Operation R.I.S.E. | Beda Bro
In a major crackdown on drug trafficking, Bengaluru City Police arrested two persons for transporting 317 kg of ganja from Odisha to Kerala via Bengaluru.
The police seized the contraband, valued at ₹1.78 crore (market value: ₹3.17 crore), along with an Innova car.
Further investigation is underway to identify others involved in the network.
#OperationRISE #BedaBro #BengaluruCityPolice #DrugFreeBengaluru
ಹೆಚ್ಚಿನ ವೇತನದ ಆಮಿಷವೊಡ್ಡಿ, ಮನೆಯಿಂದಲೇ ಕೆಲಸ ನೀಡುವ ನೆಪದಲ್ಲಿ ಸೈಬರ್ ವಂಚಕರು ನಿಮ್ಮನ್ನು ವಂಚಿಸಬಹುದು.
❌ ಉದ್ಯೋಗಕ್ಕಾಗಿ ಹಣ ಪಾವತಿಸಬೇಡಿ.
🔐 OTP ಅಥವಾ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ.
✅ ಉದ್ಯೋಗದ ಆಫರ್ಗಳ ಅಧಿಕೃತತೆಯನ್ನು ಪರಿಶೀಲಿಸಿ.
📞 ಸೈಬರ್ ವಂಚನೆಗೊಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ. @BlrCityPolice
🤖 Made with AI
ದಿನಾಂಕ: 12.10.2026 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ,ನೈಋತ್ಯ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿಕ್ಟೋರಿಯಾ ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊ.ಡಾ.ಗುರುಪ್ರಸಾದ್ ಸಿ.ರವರು ಮಾನಸಿಕ ಆರೋಗ್ಯದಮಹತ್ವ, ಒತ್ತಡನಿರ್ವಹಣೆಹಾಗೂಮಾನಸಿಕ ಆರೋಗ್ಯವನ್ನುಕಾಪಾಡಿಕೊಳ್ಳುವ ಕುರಿತು ಅರಿವು ಮೂಡಿಸಿದರು. @BlrCityPolice
🚨 ವಿಶೇಷ ಗಸ್ತು ಮತ್ತು ಅಚ್ಚರಿ ತಪಾಸಣೆ
ನೈಋತ್ಯವಿಭಾಗದ ಪೊಲೀಸ್ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ನಡೆಸಿ, ಪಬ್ ಮತ್ತು ಬಾರ್ಗಳನ್ನು ತಪಾಸಣೆ ಮಾಡಲಾಯಿತು.ಜೊತೆಗೆ,ಅನುಮಾನಾಸ್ಪದ ವಾಹನಗಳು ಹಾಗೂ ವ್ಯಕ್ತಿಗಳನ್ನುಪರಿಶೀಲಿಸಲಾಯಿತು.ಅಚ್ಚರಿ ತಪಾಸಣೆಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಮೇಲ್ವಿಚಾರಣೆ ನಡೆಸಲಾಯಿತು. @BlrCityPolice
🚨 ಆಫರ್ ಆಕರ್ಷಕವಾಗಿದೆ… ಆದರೆ ಅದು ನಿಜವೇ?
💰 ₹10,000 ಬೆಲೆಯ ಉತ್ಪನ್ನ ₹999ಕ್ಕೆ, ಉಚಿತ ಉಡುಗೊರೆ ಅಥವಾ “ಸೀಮಿತ ಅವಧಿಯ ಭರ್ಜರಿ ರಿಯಾಯಿತಿ” ಕಂಡಾಗ ತಕ್ಷಣ ಖರೀದಿಸಲು ಮುಂದಾಗಬೇಡಿ.
🔐 ಆಫರ್ ಕಂಡಾಗ ಎಚ್ಚರ ವಹಿಸಿ. ಒಂದು ಆಫರ್ಗಾಗಿ ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಅಪಾಯಕ್ಕೆ ಒಳಪಡಿಸಬೇಡಿ. @BlrCityPolice
🤖 Made with AI
DCP South-West Bengaluru City retweeted
ರಾತ್ರಿ ಗಸ್ತು. ಬೆಂಗಳೂರು ಪಶ್ಚಿಮ.
ಸುರಕ್ಷಿತ ಹಾಗೂ ಭದ್ರ ಬೆಂಗಳೂರಿಗಾಗಿ ಪಶ್ಚಿಮ ವಿಭಾಗದಾದ್ಯಂತ ನಿರಂತರ ರಾತ್ರಿ ಗಸ್ತು.
ಡಿಸಿಪಿ (ಸಿಎಆರ್) ಪಶ್ಚಿಮ ವಿಭಾಗದ ಶ್ರೀ ಮಂಜುನಾಥ್ ಶುಕ್ಲಾ, ಕೆ ಎಸ್ ಪಿ ಎಸ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ರಾತ್ರಿ ಗಸ್ತನ್ನು ಖುದ್ದಾಗಿ ಮೇಲ್ವಿಚಾರಣೆ ನಡೆಸಿ, ವಿಭಾಗದಾದ್ಯಂತ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ನಮ್ಮ ತಂಡಗಳು ರಾತ್ರಿಯಿಡೀ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ನಾಗರಿಕರು ಸುರಕ್ಷಿತವಾಗಿ ಮತ್ತು ಶಾಂತಿಯುತವಾಗಿ ಸಂಚರಿಸುವುದನ್ನು ಖಚಿತಪಡಿಸುತ್ತವೆ.
Night Patrol | West Bengaluru
A routine night patrol across the West Division to ensure a safe and secure Bengaluru.
DCP CAR West, Shri Manjunath Shukla, KPS, along with the police staff, personally monitored the night patrolling and reviewed the security arrangements across the division.
Our teams remain alert through the night, ensuring citizens can move safely and peacefully.
#BengaluruCityPolice #NightPatrol #WestDivision #SafeBengaluru #PoliceOnDuty
@CPBlr @seemantsingh96 @DgpKarnataka @KarnatakaCops
🚔 ರಾತ್ರಿ ಗಸ್ತು ಹಾಗೂ ನಾಕಾಬಂದಿ
ನಿನ್ನೆ ದಿನಾಂಕ:04.10.2026 ರಂದು ರಾತ್ರಿ ನೈಋತ್ಯ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಗಸ್ತಿನ ಅಧಿಕಾರಿ ಹಾಗೂ ಸಿಬ್ಬಂದಿಯವರು ನಾಕಾಬಂದಿ ಮೂಲಕ ವಾಹನಗಳ ತಪಾಸಣೆ ನಡೆಸಿ, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಶೋಧ ಮತ್ತು ಪರಿಶೀಲನೆಯನ್ನು ವ್ಯಾಪಕವಾಗಿ ಕೈಗೊಂಡರು. @BlrCityPolice
@DCPSOUTHWESTBCP div @sbpurabcp ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ 11 ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು.
ಕಾನೂನನ್ನು ಗೌರವಿಸಿ, ಸಾರ್ವಜನಿಕ ಶಾಂತಿ ಕಾಪಾಡಲು ಸಹಕರಿಸಿ. @BlrCityPolice @JointCPWest
ಗಾಂಧಿ ಜಯಂತಿ ಅಂಗವಾಗಿ ನೈಋತ್ಯ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಆದರ್ಶಗಳನ್ನು ಸ್ಮರಿಸಿ ಗೌರವಪೂರ್ವಕವಾಗಿ ಆಚರಿಸಲಾಯಿತು. @BlrCityPolice @JointCPWest
ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಶಾಂತಿಯ ಆದರ್ಶಗಳನ್ನು ಪಾಲಿಸುತ್ತಾ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸುರಕ್ಷತೆಯನ್ನು ಕಾಪಾಡೋಣ. 🇮🇳
ಗಾಂಧೀ ಜಯಂತಿಯ ಹಾರ್ದಿಕ ಶುಭಾಶಯಗಳು! 🙏
#ಗಾಂಧೀಜಯಂತಿ #ಸತ್ಯ #ಅಹಿಂಸೆ #DcpSouthwest @BlrCityPolice
🤖 Made with AI























