ಭಾರತದ ಶಕ್ತಿ ಇರುವುದು ಅದರ ವೈವಿಧ್ಯತೆಯಲ್ಲಿ; ಆ ವೈವಿಧ್ಯತೆಯನ್ನು ಒಗ್ಗೂಡಿಸುವ ಅಸ್ತ್ರವೇ ನಮ್ಮ ಏಕತೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕಂಡ ಏಕತೆಯ ಭಾರತದ ಕನಸನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯದೊಂದಿಗೆ ಬಲಿಷ್ಠ ದೇಶದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಭಾಷೆ, ಗಡಿ, ಜಾತಿ-ಮತಗಳ ಬೇಲಿಗಳನ್ನು ಮೀರಿ, ದೇಶದ ಸಮಗ್ರತೆಯನ್ನು ಕಾಪಾಡುವ ಸಂಕಲ್ಪ ನಮ್ಮದಾಗಲಿ. ಒಗ್ಗಟ್ಟಿನ ಶಕ್ತಿಯಿಂದ ಮಾತ್ರವೇ ನವಭಾರತದ ಉಜ್ವಲ ಭವಿಷ್ಯ ಸಾಧ್ಯ.
ಸಮಸ್ತ ಭಾರತೀಯರಿಗೆ ರಾಷ್ಟ್ರೀಯ ಏಕತಾ ದಿನದ ಹಾರ್ದಿಕ ಶುಭಾಶಯಗಳು! 🇮🇳
#NationalUnityDay #UnityInDiversity #EkBharatShreshthaBharat #ರಾಷ್ಟ್ರೀಯಏಕತಾದಿನ #DVH
ಗಾಂಧೀಜಿಯವರ ಆದರ್ಶಗಳ ಬೆಳಕಿನಲ್ಲಿ ದುಶ್ಚಟ ಮುಕ್ತ ಸಮಾಜದ ನಿರ್ಮಾಣವೇ ನಮ್ಮೆಲ್ಲರ ಸಂಕಲ್ಪವಾಗಲಿ.
ದುಶ್ಚಟಗಳಿಂದ ಮುಕ್ತವಾದ ವ್ಯಕ್ತಿ, ಸುಸ್ಥಿರ ಕುಟುಂಬ ಹಾಗೂ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಜನಜಾಗೃತಿಯೇ ಮೊದಲ ಹೆಜ್ಜೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ನವಜೀವನದ ಹಾದಿಯಲ್ಲಿ ಮುನ್ನಡೆಯೋಣ.
ಗಾಂಧಿ ಜಯಂತಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಆಯೋಜಿಸಿರುವ “ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶ”ಕಾರ್ಯಕ್ರಮದಲ್ಲಿ ಭಾಗವಹಿಸಿದೆ ..
ಸತ್ಯ, ಅಹಿಂಸೆ ಮತ್ತು ಸ್ವಾವಲಂಬನೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ದಾರಿ ತೋರಿಸಿದ ರಾಷ್ಟ್ರಪಿತ.
'ಜೈ ಜವಾನ್, ಜೈ ಕಿಸಾನ್' ಎಂಬ ಮಂತ್ರದ ಮೂಲಕ ದೇಶದ ರೈತರು ಮತ್ತು ಯೋಧರಿಗೆ ಹೊಸ ಶಕ್ತಿ ತುಂಬಿದ ಸರಳತೆಯ ರೂವಾರಿ.
ಈ ಇಬ್ಬರೂ ಮಹಾನಾಯಕರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.ದೇಶ ಕಂಡ ಮಹಾನ್ ಚೇತನಗಳಿಗೆ ಗೌರವದ ನಮನಗಳು.
ಪ್ರಾಚೀನ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ನಮ್ಮ ಹೆಮ್ಮೆಯ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಕರ್ನಾಟಕ ರಾಜ್ಯ ಸರಕಾರದ ನಿರ್ಧಾರ ಅತ್ಯಂತ ಶ್ಲಾಘನೀಯ.ತಾಳೆಗರಿಯಿಂದ ಡಿಜಿಟಲ್ ಯುಗದವರೆಗೆ ಸಾಗಿಬಂದಿರುವ ತುಳು ಭಾಷೆ ಮತ್ತು ಲಿಪಿಯ ಉಳಿವಿಗೆ, ಬೆಳವಣಿಗೆಗೆ ಹಾಗೂ ಸಾಹಿತ್ಯಿಕ-ಶೈಕ್ಷಣಿಕ ಪುನರುಜ್ಜೀವನಕ್ಕೆ ಈ ಮಾನ್ಯತೆಯು ಹೊಸ ಬಲವನ್ನು ತುಂಬಲಿದೆ.
ಈ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡ ಮಾನ್ಯ ಮುಖ್ಯಮಂತ್ರಿಗಳಿಗೂ @DKShivakumar @CMofKarnataka ಮತ್ತು ರಾಜ್ಯ ಸಚಿವ ಸಂಪುಟಕ್ಕೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತುಳು ಭಾಷೆಯ ಕಂಪಿನೊಂದಿಗೆ ನಾಡಿನ ಸಾಂಸ್ಕೃತಿಕ ವೈಭವ ಇನ್ನಷ್ಟು ಕಂಗೊಳಿಸಲಿ.
ಶ್ರೀ ಕ್ಷೇತ್ರದ ವತಿಯಿಂದಲೂ ವಿಶ್ವ ತುಳು ಸಮ್ಮೇಳನ, ವಿವಿಧ ಚಳುವಳಿಗಳು ಹಾಗೂ ತುಳು ಲಿಪಿಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ನಿರಂತರ ಪ್ರಯತ್ನಗಳು ನಡೆದುಕೊಂಡು ಬಂದಿವೆ. ಅಲ್ಲದೆ, ಸಂಸತ್ತಿನ ರಾಜ್ಯಸಭೆಯಲ್ಲೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಕುರಿತು ಪ್ರಶ್ನೆಗಳನ್ನು ಪ್ರಸ್ತಾಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಆ ಮಹತ್ವಾಕಾಂಕ್ಷೆಯ ಕನಸೂ ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ.
– ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.
I extend my warmest greetings and heartfelt wishes to Hon’ble Prime Minister Shri Narendra Modi Ji,on the occasion of your birthday,
May Lord Manjunatha Swami bless you with good health, strength to continue your dedicated service to the nation.May the coming year bring you greater strength and fulfilment in your service to the nation.
@narendramodi
@PMOIndia
— Dr. D. Veerendra Heggade
Member of Parliament, Rajya Sabha
ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು!
ವಿಘ್ನ ವಿನಾಶಕ ಶ್ರೀ ಮಹಾಗಣಪತಿಯ ಕೃಪೆಯಿಂದ ನಿಮ್ಮ ಜೀವನದ ಎಲ್ಲಾ ವಿಘ್ನಗಳು ದೂರವಾಗಿ,
ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿ ಸದಾ ನೆಲೆಸಿರಲಿ.
ಸಮಸ್ತ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. 🇮🇳
ಈ ಪವಿತ್ರ ಸಂದರ್ಭದಲ್ಲಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಮಸ್ತ ಭಾರತೀಯರನ್ನು ಒಂದಾಗಿಸಿ, ದೇಶಭಕ್ತಿಯ ಕಿಚ್ಚನ್ನು ಹೊತ್ತಿಸಿದ ‘ವಂದೇ ಮಾತರಂ’ ಗೀತೆಯ ರಚನೆಯಾಗಿ 150 ವರ್ಷಗಳನ್ನು ಪೂರೈಸುತ್ತಿರುವುದು ಈ ವರ್ಷದ ವಿಶೇಷತೆ.
ನಮ್ಮ ಪೂರ್ವಜರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸುವ ಜವಾಬ್ದಾರಿ ನಮ್ಮದು. ಏಕತೆ, ಸೇವೆ ಮತ್ತು ಕರ್ತವ್ಯಪ್ರಜ್ಞೆಯೊಂದಿಗೆ ವಿಕಸಿತ, ಸ್ವಾವಲಂಬಿ ಮತ್ತು ಸಮೃದ್ಧ ಭಾರತದ ನಿರ್ಮಾಣದತ್ತ ಮುನ್ನಡೆಯೋಣ.
🇮🇳 ವಂದೇ ಮಾತರಂ | ಜೈ ಹಿಂದ್
— ಡಾ. ಡಿ. ವೀರೇಂದ್ರ ಹೆಗ್ಗಡೆ
ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡರವರ ಸುದೀರ್ಘ ಸಾರ್ವಜನಿಕ ಹಾಗೂ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ಆದರ್ಶ ಗೃಹಿಣಿಯಾಗಿ, ಅಚಲ ಬೆಂಬಲವಾಗಿ ನಿಂತು ಇಡೀ ಕುಟುಂಬವನ್ನು ಮುನ್ನಡೆಸಿದವರು ಅವರ ಧರ್ಮಪತ್ನಿ ಚೆನ್ನಮ್ಮನವರು.
ಅವರು ಧರ್ಮಸ್ಥಳದ ಅಪಾರ ಭಕ್ತರಾಗಿದ್ದು, ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಿದ್ದರು. ಅವರ ಸರಳತೆ, ಸಂಸ್ಕಾರ, ವ್ಯಕ್ತಿತ್ವ ಸದಾ ಸ್ಮರಣಿಯವಾಗಿರುತ್ತದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಅಗಲುವಿಕೆಯಿಂದ ಉಂಟಾದ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಹೆಚ್.ಡಿ. ದೇವೇಗೌಡರವರಿಗೂ ಹಾಗೂ ಸಮಸ್ತ ಕುಟುಂಬ ವರ್ಗದವರಿಗೂ ಶ್ರೀ ಮಂಜುನಾಥ ಸ್ವಾಮಿ ನೀಡಲೆಂದು ಪ್ರಾರ್ಥಿಸುತ್ತೇನೆ.
ಹೆಸರಾಂತ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ನನ್ನ ತೀವ್ರ ಸಂತಾಪಗಳು.
ತಮ್ಮ ಅಪರೂಪದ ಕಂಠಸಿರಿ, ಭಾವಪೂರ್ಣ ಗಾಯನ ಹಾಗೂ ಸಂಗೀತದ ಮೇಲಿನ ಅಪಾರ ನಿಷ್ಠೆಯ ಮೂಲಕ ಅವರು ಭಾರತೀಯ ಸಂಗೀತ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ ಸಾವಿರಾರು ಗೀತೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿ ಸದಾ ಉಳಿಯಲಿವೆ.
ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಕ್ಷೇತ್ರವು ಒಬ್ಬ ಅಪರೂಪದ ಕಲಾಸಾಧಕಿಯನ್ನು ಕಳೆದುಕೊಂಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರು, ಅಪಾರ ಅಭಿಮಾನಿಗಳು ಮತ್ತು ಸಂಗೀತ ಲೋಕಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
— ಡಾ. ಡಿ. ವೀರೇಂದ್ರ ಹೆಗ್ಗಡೆ
ರಾಜ್ಯಸಭಾ ಸದಸ್ಯರು
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ
ಒಂದು ಸ್ಟೆಥಸ್ಕೋಪ್... ನೂರಾರು ಹೃದಯಗಳ ಭರವಸೆ.
ಒಂದು ಬಿಳಿ ಕೋಟ್... ಸಾವಿರಾರು ಜೀವಗಳ ವಿಶ್ವಾಸ.
ಒಬ್ಬ ವೈದ್ಯ... ಲಕ್ಷಾಂತರ ಕುಟುಂಬಗಳ ಆಶಾಕಿರಣ.
ವೈದ್ಯಕೀಯ ಸೇವೆಯ ಹಿಂದೆ ನಿದ್ರೆಯಿಲ್ಲದ ರಾತ್ರಿಗಳು, ನಿರಂತರ ಕಲಿಕೆ, ಅಪಾರ ತಾಳ್ಮೆ ಮತ್ತು ಅಳತೆಯಿಲ್ಲದ ಸೇವಾ ಮನೋಭಾವ ಅಡಗಿದೆ. ದೇಶದಾದ್ಯಂತ ಸಮಾಜದ ಸ್ವಾಸ್ಥ್ಯಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ವೈದ್ಯಕೀಯ ಲೋಕದ ಎಲ್ಲಾ ದೇವದೂತರಿಗೆ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು.
ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯನಿರ್ವಹಿಸುತ್ತಿರುವ 8 ಆರೋಗ್ಯ ಕಾಲೇಜುಗಳು, 3 ಸಂಶೋಧನಾ ಕೇಂದ್ರಗಳು ಹಾಗೂ 10 ಬೋಧಕ ಆಸ್ಪತ್ರೆಗಳ ಮೂಲಕ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ರೋಗಿಗಳಿಗೆ ನಿಸ್ವಾರ್ಥ ಚಿಕಿತ್ಸೆ ನೀಡಿ ಮರುಜೀವ ನೀಡುತ್ತಿರುವ ನಮ್ಮ ವೈದ್ಯ ವೃಂದದ ಸಾಧನೆ ನಮಗೆ ಹೆಮ್ಮೆಯನ್ನು ತಂದಿದೆ. ನಿಮಗೂ ವಿಶೇಷ ಅಭಿನಂದನೆಗಳು.
ಯೋಗವು ಭಾರತದ ಅಮೂಲ್ಯ ಕೊಡುಗೆ.
"ಆರೋಗ್ಯಪೂರ್ಣ ವೃದ್ಧಾಪ್ಯಕ್ಕೆ ಯೋಗ" ಎಂಬ ಧ್ಯೇಯದಡಿ ಧರ್ಮಸ್ಥಳದಲ್ಲಿ ೧೨ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು. ಈ ಸಂದರ್ಭದಲ್ಲಿ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿನ್ಮಯಿ ಅವರಿಗೆ "ಯೋಗರತ್ನ" ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
Yoga is India's invaluable gift to the world. To build a healthier society, yoga must become an integral part of our daily lives.
The 12th International Yoga Day was observed at Dharmasthala under the theme "Yoga for Healthy Ageing." On this occasion, the "Yogaratna" award was presented to Chinmayi for her achievements in the field of yoga.
#InternationalYogaDay #YogaDay #Dharmasthala #YogaForLife
"ವ್ಯಸನದಿಂದ ಹೊರಬರುವುದು ಕೇವಲ ವ್ಯಕ್ತಿಯ ಗೆಲುವಲ್ಲ, ಕುಟುಂಬ ಮತ್ತು ಸಮಾಜದ ಗೆಲುವು."
ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವ್ಯಸನಮುಕ್ತರ ಸಮ್ಮಿಲನ ಹಾಗೂ ಶತದಿನೋತ್ಸವದಲ್ಲಿ ಭಾಗವಹಿಸಿ, ವ್ಯಸನಮುಕ್ತರ ಕಣ್ಣಲ್ಲಿ ಹೊಸ ಬದುಕಿನ ಆತ್ಮವಿಶ್ವಾಸವನ್ನು ಕಂಡೆ. ಇದುವರೆಗೆ 2,063 ಮದ್ಯವರ್ಜನ ಶಿಬಿರಗಳ ಮೂಲಕ 1,38,000ಕ್ಕೂ ಹೆಚ್ಚು ಜನರು ವ್ಯಸನಮುಕ್ತರಾಗಿ ಹೊಸ ಜೀವನದತ್ತ ಹೆಜ್ಜೆಯಿಟ್ಟಿರುವುದು ಹೆಮ್ಮೆಯ ಸಂಗತಿ.
ವ್ಯಸನಮುಕ್ತರು ತಮ್ಮ ದೃಢಸಂಕಲ್ಪವನ್ನು ಉಳಿಸಿಕೊಂಡು, ಇತರರಿಗೂ ಪ್ರೇರಣೆಯಾಗಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹರಿಕಾರರಾಗಬೇಕು. ಇದೇ ನಮ್ಮ ನಿಜವಾದ ಯಶಸ್ಸು.
The SIRI Mathrushree Industrial Park is more than an industrial facility—it is a catalyst for rural transformation. By promoting local manufacturing, skill development, women-led entrepreneurship, and employment, it advances, sustainable livelihoods, and rural prosperity.
I am delighted that the Hon’ble Vice President of India, C. P. Radhakrishnan ji, inaugurated the SIRI Mathrushree Industrial Park today. This landmark initiative will contribute to the vision of an #AtmanirbharBharat through sustainable rural economic growth.
@VPIndia
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ 724ನೇ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.
ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ದೃಷ್ಟಿಯಿಂದ ನನ್ನ ರಾಜ್ಯಸಭಾ ಸದಸ್ಯರ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 121 ಸರಕಾರಿ ಮತ್ತು ಅನುದಾನಿತ ಶಾಲೆಗೆ 1.50 ಕೋಟಿ ರೂಪಾಯಿ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ಮಂಜೂರು ಮಾಡಲಾಗಿದೆ. ಈ ಮೂಲಕ 12,500 ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣಕ್ಕೆ ಅವಕಾಶ.
The Budget strengthens education and infrastructure in rural and emerging centres to reduce inequality and create livelihoods. Focus on health, Ayurveda, skills and preventive care promotes self-reliance and positions India as a global health tourism hub.
#Budget2026



































