ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಶಿವನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಕ್ಷಣಗಳು.
#Hoktote
15
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿ, ಪಂಚಾಯಿತಿ ಕಚೇರಿ ಎಂದು ಅಲೆದಾಡುವುದನ್ನು ತಪ್ಪಿಸಿ, ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಬೇಕು ಎಂಬುದು ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ಮುಖ್ಯ ಉದ್ದೇಶವಾಗಿದೆ.
ಇದೇ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 'ಪ್ರಜಾಸೇವಾ ಆಂದೋಲನ'ದ ಮೂಲಕ ಸರ್ಕಾರವೇ ನಿಮ್ಮ ಬಳಿ ಬಂದು, ನಿಮ್ಮ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುತ್ತಿದೆ. ನಮ್ಮ ಹೊಸಕೋಟೆ ತಾಲೂಕಿನ ಶಿವನಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನತೆಗೆ ನೇರವಾಗಿ ನೆರವಾಗುತ್ತಿರುವ ಈ ಜನಪರ ಕಾರ್ಯಕ್ರಮಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
@CMofKarnataka @INCKarnataka
#PrajaSeve
16
ನನ್ನ ಆತ್ಮೀಯರು ಹಾಗೂ ರಾಜ್ಯ ಗೃಹ, ಐಟಿ-ಬಿಟಿ ಮತ್ತು ಇ-ಆಡಳಿತ ಸಚಿವರಾದ ಶ್ರೀ @PriyankKharge ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಸಂತೋಷ, ನೆಮ್ಮದಿಯಿಂದ ತುಂಬಿದ ಸುದೀರ್ಘ ಜೀವನ ತಮ್ಮದಾಗಲಿ ಹಾಗೂ ಜನಸೇವೆಯನ್ನು ಮುಂದುವರಿಸಲು ನವಚೈತನ್ಯ ದೊರೆಯಲಿ ಎಂದು ಹಾರೈಸುತ್ತೇನೆ.
@PriyankKharge @INCKarnataka
1
44
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಗಣಗಲೂರು ಗ್ರಾಮದ ಮುಖಂಡರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಮ್ಮರಾಯಪ್ಪ, ಮುಖಂಡರಾದ ನಾಗರಾಜು, ವೇಣುಗೋಪಾಲ್, ಕೃಷ್ಣಪ್ಪ, ಹರೀಶ್, ಉಮೇಶ್, ವೆಂಕಟರಮಣಪ್ಪ ಮತ್ತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ನಾರಾಯಣಸ್ವಾಮಿ ಅವರ ಪುತ್ರರಾದ ಪ್ರತಾಪ್ ಹಾಗೂ ಕುಟುಂಬದವರು ಇಂದು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
#Hoskote
@INCKarnataka
16
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಶಿವನಾಪುರ ಗ್ರಾಮದ ಸುಮಾರು 15 ಕುಟುಂಬಗಳಿಗೆ ಇ-ಸ್ವತ್ತು ಪತ್ರಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ, ಶಿವನಾಪುರ ಗ್ರಾಮವನ್ನು 'ಪೋಡಿ ಮುಕ್ತ' ಮಾಡುವ ಸಲುವಾಗಿ, ಸರ್ವೇ ನಂ. 21 ರಲ್ಲಿ ಸುಮಾರು 72 ಬ್ಲಾಕ್ಗಳ ರೈತರ ಜಮೀನುಗಳ ಪೋಡಿ ಮತ್ತು ಅಳತೆ ಕಾರ್ಯಕ್ಕೆ ಸಂಬಂಧಿಸಿದ ನೋಟಿಸ್ಗಳನ್ನು ವಿತರಣೆ ಮಾಡಲಾಯಿತು.
@INCKarnataka
#Hoskote #eSwathu
23
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ನಿಟ್ಟಿನಲ್ಲಿ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಶಿವನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಆಯೋಜಿಸಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದೆನು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 268 ಅಹವಾಲುಗಳನ್ನು ಸ್ವೀಕರಿಸಿದ್ದು, ಪ್ರತಿಯೊಂದು ಸಮಸ್ಯೆಯನ್ನೂ ಶೀಘ್ರವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಲಾಯಿತು.
#Hoskote
19
From Mysuru Dasara elephants to AI robots. Only Bengaluru can do this!
1,000 startups. 100 cities. 1 big mission
Our biggest cheat code? TALENT.
With Bengaluru ranking 4th globally in AI talent readiness, the future isn't just loading… it's being built right here!
Mission: Make the World See India Through Bengaluru 🚀
Our city, Our pride, Our Bengaluru
#BengaluruTachSummit2026 #GTA6 #Bengaluru #Karnataka #AI #StartupIndia
43
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಗಣಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವನಾಪುರ ಗ್ರಾಮದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ 20 ಲೀಟರ್ ಸಾಮರ್ಥ್ಯದ ವಾಟರ್ ಕ್ಯಾನ್ಗಳನ್ನು ವಿತರಿಸಲಾಯಿತು.
#hoskote
41
ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನೂತನ ನಿರ್ದೇಶಕರಾಗಿ ನೇಮಕಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶ್ರೀ ಸಿ. ಮುನಿಯಪ್ಪ ರವರು ಇಂದು ನನ್ನನ್ನು ಹಾಗೂ ಬಿ.ಎಂ.ಆರ್.ಡಿ.ಎ. ಅಧ್ಯಕ್ಷರಾದ ಶ್ರೀ ಬಿ.ವಿ. ಬೈರೇಗೌಡ ರವರನ್ನು ನಿವಾಸದಲ್ಲಿ ಭೇಟಿ ಮಾಡಿ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಸಿ. ಮುನಿಯಪ್ಪ ರವರಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು.
24
ನಾಳೆ ದಿನಾಂಕ 21/11/2026 (ಶನಿವಾರ) ಬೆಳಗ್ಗೆ 10:30ಕ್ಕೆ, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಶಿವನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ 'ಪ್ರಜಾ ಸೇವಾ ಆಂದೋಲನ' ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಅನುಗೊಂಡನಹಳ್ಳಿ ಹೋಬಳಿಯ ಎಲ್ಲಾ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ನಿಮ್ಮ ಕುಂದುಕೊರತೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವಂತೆ ವಿನಂತಿಸುವೆ.
#PrajaSevaAndolan #PublicGrievances #Karnataka #Hoskote
34
ಬೆಂಗಳೂರು ಟೆಕ್ ಸಮಿಟ್ 2026ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಕಂಪನಿಗಳು ಪ್ರದರ್ಶಿಸಿದ ನವೀನ ತಂತ್ರಜ್ಞಾನಗಳು, ಆವಿಷ್ಕಾರಗಳು ಹಾಗೂ ಭವಿಷ್ಯದ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ಮಳಿಗೆಗಳಿಗೆ ಭೇಟಿ ನೀಡಿ, ಅವುಗಳ ಕಾರ್ಯವೈಖರಿ ಮತ್ತು ವಿಶೇಷತೆಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳು ಹಾಗೂ ಬೆಳವಣಿಗೆಗಳು ಕರ್ನಾಟಕದ ಭವಿಷ್ಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿವೆ.
Participated in the second day of Bengaluru Tech Summit 2026, exploring a diverse range of technological innovations, frontier technologies, and emerging tech solutions showcased by leading companies. Interacted with exhibitors to gain insights into their applications, capabilities, and potential to transform industries.
#BengaluruTechSummit2026 #KarnatakaInnovation #EmergingTechnologies
#FrontierTech
#Bengaluru
1
91
ಬೆಂಗಳೂರು ಟೆಕ್ ಸಮಿಟ್ 2026ರ ಅಂಗವಾಗಿ, ಮಾನ್ಯ ಗೃಹ ಸಚಿವರಾದ ಶ್ರೀ @PriyankKharge ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಿ, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಗೂ ನಗರಾಭಿವೃದ್ಧಿಯ ಕುರಿತು ಚರ್ಚಿಸಿದೆವು.
ಸುಸ್ಥಿರ, ಸುಗಮ ಮತ್ತು ಅಭಿವೃದ್ಧಿಶೀಲ ಬೆಂಗಳೂರಿನ ನಿರ್ಮಾಣಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಲವರ್ಧನೆ ಅತ್ಯಂತ ಅಗತ್ಯವಾಗಿದೆ.
A metro ride with Hon’ble Home Minister Shri Priyank Kharge during Bengaluru Tech Summit 2026, discussing Bengaluru’s public transport, connectivity and urban development.
Building a better Bengaluru begins with stronger public transport and sustainable urban mobility.
#BengaluruTechSummit2026 #BengaluruMetro #SustainableUrbanDevelopment #PublicTransport #NammaBengaluru
ಬೆಂಗಳೂರು ಟೆಕ್ ಸಮ್ಮಿಟ್ 2026ರ ಅಂಗವಾಗಿ ಆಯೋಜಿಸಲಾಗಿದ್ದ ELСIA ಟ್ರಸ್ಟ್ನ ಮಳಿಗೆಯನ್ನು ಉದ್ಘಾಟಿಸಿ, ಶಿಕ್ಷಣ, ಪೌಷ್ಟಿಕತೆ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಸ್ಥೆಯು ಕಳೆದ 23 ವರ್ಷಗಳಿಂದ ಮಾಡುತ್ತಿರುವ ಸೇವಾ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡೆ.
ಸಮಾಜದ ಅಭಿವೃದ್ಧಿ ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ELСIA ಟ್ರಸ್ಟ್ ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯ. ಸಮಾಜಮುಖಿ ಕಾರ್ಯಗಳಿಗೆ ಸದಾ ನಮ್ಮ ಪ್ರೋತ್ಸಾಹ ಮತ್ತು ಸಹಕಾರ ಇರಲಿದೆ.
Investing in children's education and nutrition is an investment in the future of our society. At Bengaluru Tech Summit 2026, I inaugurated the ELCIA Trust stall and appreciated its 23 years of dedicated work towards building stronger communities.
#BengaluruTechSummit2026 #ELCIATrust #EducationForAll #ChildNutrition #CommunityDevelopment
#Bengaluru
ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ 'ಪ್ರಜಾ ಸೇವಾ ಕಾರ್ಯಕ್ರಮ'ವನ್ನು ಉದ್ಘಾಟಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದೆನು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 499 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವೆಲ್ಲವನ್ನೂ ತಕ್ಷಣವೇ ಸಂಬಂಧಪಟ್ಟ ಇಲಾಖೆಗಳ ಪರಿಶೀಲನೆಗೆ ರವಾನಿಸಲಾಗಿದೆ. ನಿಯಮಾನುಸಾರ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
#PrajaSevaAndolan #PublicGrievanceRedressal #GoodGovernance #Karnataka #Hoskote
51
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ 'ಮಕ್ಕಳ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡಿದವು.
#ChildrensDayCelebration #JawaharlalNehru #YoungAchievers #StudentExcellence #Karnataka #FutureOfIndia #Hoskote
1
34
ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ನಡೆದ ಹೋಬಳಿ ಮಟ್ಟದ 'ಪ್ರಜಾ ಸೇವಾ ಕಾರ್ಯಕ್ರಮ'ವನ್ನು ಉದ್ಘಾಟಿಸಿದೆನು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 499 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದು, ಸ್ವೀಕೃತಗೊಂಡ ಎಲ್ಲಾ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಪರಿಶೀಲನೆಗೆ ಕಳುಹಿಸಲಾಗಿದೆ. ನಿಯಮಾನುಸಾರ ಶೀಘ್ರವೇ ಎಲ್ಲರಿಗೂ ನ್ಯಾಯಯುತ ಪರಿಹಾರ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಅನುರಾಧ ಕೆ.ಎನ್. ಅವರು, ಉಪವಿಭಾಗಾಧಿಕಾರಿ ಶ್ರೀ ಮಂಜುನಾಥ್ ಅವರು, ತಹಶೀಲ್ದಾರ್ ಶ್ರೀಮತಿ ಶೀತಲ್ ಟಿ.ಎಸ್. ಅವರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀ ಮುನಿಯಪ್ಪ ಅವರು, ಡಿವೈಎಸ್ಪಿ ಶ್ರೀ ಮಲ್ಲೇಶ್ ಅವರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಗಣ್ಯರು, ಮುಖಂಡರು ಹಾಗೂ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.
#PrajasevaAndolan #PublicGrievances #GoodGovernance #Karnataka #Hoskote
2
56
ಕನ್ನಡ ಚಿತ್ರರಂಗದ ಹೊಸ ಮೆರುಗು, “ರಾಮಾಯಣ” ಚಿತ್ರವನ್ನು ಹೊಸಕೋಟೆ ನಗರದ ರಾಘವೇಂದ್ರ ಸರ್ಕಲ್ನಲ್ಲಿರುವ ಶ್ರೀ ರಾಘವೇಂದ್ರ ಚಿತ್ರಮಂದಿರದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೀಕ್ಷಿಸಿದ ಕ್ಷಣಗಳು.
ಕನ್ನಡದ ಕಲೆಗೆ, ಕನ್ನಡ ಚಿತ್ರರಂಗಕ್ಕೆ ಸದಾ ನಮ್ಮ ಪ್ರೋತ್ಸಾಹ ಮತ್ತು ಬೆಂಬಲ ಇರಲಿ. ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ನಮ್ಮ ಆಶಯ. ❤️💛
@TheNameIsYash
#RamayanaPart1 #SandalWoodPride #Yash #Hoskote
1
31
Participated in CREDTECH – Bangalore Edition 2026, engaging in discussions on Bengaluru’s growth as a leading GCC hub, emerging technology opportunities, AI, skill development and employment generation.
The proposed 500 MW data centre park near Hoskote presents a significant opportunity to attract investments, strengthen the local economy and create new opportunities for our youth.
Our vision is to connect local development with global opportunities.
#GCC #AI #DataCenter #SkillDevelopment #Hoskote
63





























































