ಮಂಡ್ಯ ಜಿ.ಪಂ.ಯಲ್ಲಿ SDA, Sec ಗ್ರೇಡ್-II ಹುದ್ದೆಗಳಿಂದ ಗ್ರೇಡ್-I ಹುದ್ದೆಗೆ ಬಡ್ತಿ ಪಡೆದ ನೌಕರರ 17 ಹುದ್ದೆಗಳನ್ನು ತಾಲೂಕುವಾರು ಹಂಚಿಕೆ ಮಾಡಲಾಗಿದ್ದು, ಸಿಬ್ಬಂದಿ ಕೊರತೆಯಿರುವ GPಗಳಿಗೆ ಆದ್ಯತೆ ನೀಡಲಾಗಿದೆ. ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ಸ್ಥಳ ನಿಯುಕ್ತಿಗೊಳಿಸಿ, ನೌಕರರಿಗೆ ಆದೇಶದ ಪ್ರತಿಗಳನ್ನು ಸಿಇಒ ರವರು ವಿತರಿಸಿದರು.
15
ಮಂಡ್ಯ ಜಿ.ಪಂ.ಯ ಮಿನಿ ಸಭಾಂಗಣದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಸಿಇಒ ರವರು, ಭೂ ಗ್ಯಾರಂಟಿ ಅಭಿಯಾನದಡಿ ಅರ್ಹ ಆಸ್ತಿ ಮಾಲೀಕರಿಗೆ ಇ-ಸ್ವತ್ತು ಸೌಲಭ್ಯ ತಲುಪಿಸಲು ಅರ್ಜಿ ಸ್ವೀಕೃತಿ ಪ್ರಕ್ರಿಯೆ ಚುರುಕುಗೊಳಿಸುವಂತೆ ಸೂಚಿಸಿದರು.
ಡಿ. 5ರೊಳಗೆ 150 ಅರ್ಜಿಗಳ ಗುರಿ ಸಾಧಿಸುವ ಗ್ರಾ.ಪಂ.ಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.
14
ಸಂವಿಧಾನ ದಿನಾಚರಣೆಯ ಶುಭಾಶಯಗಳು
ಸಂವಿಧಾನದ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿಹಿಡಿದು, ಸಶಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ.
ಸಮಸ್ತ ಜನತೆಗೆ ಸಂವಿಧಾನ ದಿನಾಚರಣೆಯ ಶುಭಾಶಯಗಳು.
#ZPMANDYA #ConstitutionDay #SamvidhanDiwas
22
ಮಂಡ್ಯ ಜಿ.ಪಂ.ಯ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಶು ಮರಣ ಪ್ರಮಾಣ ಕಡಿತಕ್ಕೆ ಆಸ್ಪತ್ರೆಗಳ ಮೂಲಸೌಕರ್ಯ, ವೈದ್ಯಕೀಯ ಉಪಕರಣ, ಸಿಬ್ಬಂದಿ ಕೊರತೆ ನಿವಾರಿಸಲು ಸಿಇಒ ರವರು ಸೂಚಿಸಿದರು. ಮಿಮ್ಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು 15 ದಿನಗಳೊಳಗೆ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸುವಂತೆ ನಿರ್ದೇಶಿಸಿದರು.
#InfantMortalityReduction
15
HPV ಲಸಿಕೆ ಅಭಿಯಾನ: ಶೇ.100ರಷ್ಟು ಗುರಿ ಸಾಧನೆಗೆ ಜಿ. ಪಂ.ಸಿಇಒ ಸೂಚನೆ.
ಮಂಡ್ಯ ಜಿ.ಪಂ.ಯ ಮಿನಿ ಸಭಾಂಗಣದಲ್ಲಿ ನಡೆದ HPV ಲಸಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಜಿ. ಪಂ.ಸಿಇಒ ರವರು, ಅರ್ಹ ಬಾಲಕಿಯರಿಗೆ ಶೇ.100ರಷ್ಟು ಲಸಿಕೆ ನೀಡಲು ಹಾಗೂ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿಗೆ ಆದ್ಯತೆ ನೀಡಲು ಸೂಚಿಸಿದರು.
#HPV
16
ಕೃಷಿ ಮೇಳದಲ್ಲಿ SHGsಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಆದ್ಯತೆ ನೀಡಲು ಸಿಇಒ ರವರು ಸೂಚನೆ.
ಜಿ.ಪಂ.ಯ ಮಿನಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಿಇಒ ರವರು, ಸ್ಥಳೀಯ, ಸಾವಯವ ಉತ್ಪನ್ನಗಳ ಪ್ರದರ್ಶನ, ಆಕರ್ಷಕ ಮಳಿಗೆ, ಬ್ರ್ಯಾಂಡಿಂಗ್ ಮೂಲಕ ಮಹಿಳೆಯರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಸೂಚಿಸಿದರು.
#Krishimela
10
ಜಿಲ್ಲಾ ಮಾನವ ಅಭಿವೃದ್ಧಿ ವರದಿ ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಯ ದತ್ತಾಂಶ ವೈಜ್ಞಾನಿಕವಾಗಿ ಪರಿಶೀಲಿಸಿ ಅಂತಿಮಗೊಳಿಸಲು ಸಿಇಒ ಸೂಚನೆ.
ಕೆಸ್ವಾನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಿಇಒ ರವರು ವರದಿಗಳ ದತ್ತಾಂಶ ಮತ್ತು ಸೂಚ್ಯಂಕಗಳನ್ನು ಪರಿಶೀಲಿಸಿ ಜಿಲ್ಲೆಯ ನೈಜ ಅಭಿವೃದ್ಧಿ ಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಅಂತಿಮಗೊಳಿಸಲು ಸೂಚಿಸಿದರು.
18
ಭೂ ಗ್ಯಾರಂಟಿ ಅಭಿಯಾನ ಯಶಸ್ವಿಗೊಳಿಸಿ: ಸಿಇಒ.
ಮಂಡ್ಯ ತಾ.ಪಂ. ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅರ್ಹರಿಗೆ ಕಾಲಮಿತಿಯೊಳಗೆ ಇ-ಸ್ವತ್ತು ವಿತರಣೆ, ಗ್ರಾಮಮಟ್ಟದಲ್ಲಿ ಜಾಗೃತಿ ಹಾಗೂ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ರೋವರ್ ತಂತ್ರಜ್ಞಾನದ ಭೂಮಾಪನ ಪ್ರಾತ್ಯಕ್ಷಿಕೆಗೂ ಚಾಲನೆ ನೀಡಿದರು.
15
ಗ್ರಾಮಠಾಣಾ ಹಾಗೂ ಹಕ್ಕುಪತ್ರ ಆಸ್ತಿಗಳ ಇ-ಸ್ವತ್ತು ವಿತರಣೆಗೆ ವೇಗ ನೀಡಿ: ಜಿ.ಪಂ ಸಿಇಒ
ಡಿಸೆಂಬರ್ 15ರೊಳಗೆ ಪ್ರತಿ ತಾ.ನಲ್ಲಿ 5,000 ಆಸ್ತಿಗಳಿಗೆ ಇ-ಸ್ವತ್ತು ವಿತರಿಸುವ ಗುರಿ ಸಾಧಿಸಬೇಕು. ವಾರಕ್ಕೆ 1,250 ಅರ್ಜಿಗಳ ಪರಿಶೀಲನೆ, ಬಾಕಿ ಅರ್ಜಿಗಳ ವಿಲೇವಾರಿ, ದಾಖಲೆ ಅಪ್ಲೋಡ್, ಡ್ಯಾಶ್ಬೋರ್ಡ್ ಮೂಲಕ ಮೇಲ್ವಿಚಾರಣೆಗೆ ಸೂಚನೆ ನೀಡಿದರು.
11
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
ಬೆಳಕಿನ ಹಬ್ಬವು ನಾಡಿನ ಜನರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಮಣ್ಣಿನ ಹಣತೆಗಳಿಗೆ ಆದ್ಯತೆ ನೀಡಿ, ಮಾಲಿನ್ಯ ನಿಯಂತ್ರಿಸಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಹಸಿರು ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡೋಣ.
#Deepavali2026 #EcoFriendlyDiwali #GreenDiwali #ZPMANDYA
19
ಕೌಶಲ್ಯ ಕರ್ನಾಟಕ ಪ್ರಶಸ್ತಿ: ಮಂಡ್ಯ ಜಿಲ್ಲೆಗೆ ಎರಡು ಪ್ರಶಸ್ತಿಗಳು
ಅರಸಮ್ಮ ಮಹಿಳಾ ಸ್ವಸಹಾಯ ಸಂಘದ ‘ಮತ್ಸ್ಯ ವಾಹಿನಿ’ ಹಾಗೂ ಮಂಡ್ಯ RSETI ಸಂಸ್ಥೆಗೆ 2026ನೇ ಸಾಲಿನ ಕೌಶಲ್ಯ ಕರ್ನಾಟಕ ಪ್ರಶಸ್ತಿ ಲಭಿಸಿದೆ. ಸಿಇಒ ಕೆ.ಆರ್. ನಂದಿನಿ ಅವರ ನೇತೃತ್ವದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಾಯಿತು.
#ZPMANDYA #SkillDevelopment #RSETI
1
24
ಜಿಲ್ಲಾ ವಲಯ ಕಾರ್ಯಕ್ರಮಗಳ ಆರ್ಥಿಕ ಪ್ರಗತಿ ಪರಿಶೀಲಿಸಿದ ಜಿ. ಪಂ.ಸಿಇಒ
2026-27ನೇ ಸಾಲಿನ ಜಿಲ್ಲಾ ವಲಯ ಕಾರ್ಯಕ್ರಮಗಳ ಲಿಂಕ್ ಡಾಕ್ಯುಮೆಂಟ್ ಅನುದಾನದಡಿ ಅಕ್ಟೋಬರ್ ಅಂತ್ಯದ ಆರ್ಥಿಕ ಪ್ರಗತಿ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿನ ಸಮಸ್ಯೆಗಳ ಕುರಿತು ಮಂಡ್ಯ ಜಿ.ಪಂ.ಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
#DevelopmentWorks
18
ನಗುವನಹಳ್ಳಿ ಗ್ರಾ.ಪಂ.ಗೆ ಸಿಇಒ ನಂದಿನಿ ಕೆ.ಆರ್. ಅನಿರೀಕ್ಷಿತ ಭೇಟಿ
ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಇಒ, ಇ-ಸ್ವತ್ತು ಅರ್ಜಿಗಳ ತ್ವರಿತ ವಿಲೇವಾರಿ, ಬಾಕಿ ಆಸ್ತಿ ತೆರಿಗೆ ವಸೂಲಾತಿ ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಮಾನವ ದಿನಗಳ ಸೃಜನೆಗೆ ಸೂಚನೆ ನೀಡಿದರು. ಅಭಿಲೇಖಾಲಯ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
30
ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಇಒ ನಂದಿನಿ ಕೆ.ಆರ್.
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲ್ಲೂಕುಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದ ಜಿ.ಪಂ.ಸಿಇಒ ರವರು ವಿಳಂಬ ಕಾಮಗಾರಿಗಳನ್ನು ಚುರುಕುಗೊಳಿಸಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
#JJM
17
ಮಂಡ್ಯ ಜಿ.ಪಂ.ಸಿಇಒ ರವರು ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಕಾಮಗಾರಿ ವಿಳಂಬ, ಅರಣ್ಯ ಭೂಮಿ ಮಂಜೂರಾತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆ ಹಾಗೂ ಭೂಮಿ ಹಸ್ತಾಂತರದ ಬಾಕಿ ಪ್ರಕರಣಗಳ ಕುರಿತು ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು, ಎಂಜಿನಿಯರ್ಗಳು ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಕಾಮಗಾರಿ ತ್ವರಿತಗೊಳಿಸಲು ಸೂಚಿಸಿದರು.
22
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ನಾಡಿನ ಶ್ರೀಮಂತ ಇತಿಹಾಸ, ಭಾಷಾ ವೈಭವ, ಸಾಹಿತ್ಯ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ. ಕನ್ನಡ ಭಾಷೆಯ ಬಳಕೆ ಮತ್ತು ಬೆಳವಣಿಗೆಗೆ ಸಂಕಲ್ಪ ತೊಟ್ಟು, ಕನ್ನಡ ನಾಡಿನ ಏಕತೆ ಹಾಗೂ ಸಮೃದ್ಧಿಗೆ ಕೈಜೋಡಿಸೋಣ.
#KannadaRajyotsava2026 #ZPMANDYA
19
ದಿನಾಂಕ-28 ರಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಈಶ್ವರ್ ಬಿ. ಖಂಡ್ರೆ ರವರು ಮಂಡ್ಯ ವಿಶ್ವ ವಿದ್ಯಾಲಯಕ್ಕೆ ಬೇಟಿ ನೀಡಿ, ಮೈಸೂರು ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಪಡೆದ ಮಂಡ್ಯ ಜಿಲ್ಲಾ ಪಂಚಾಯತ್ ನ ಸ್ತಬ್ಧಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
#RDPRMinister #EshwarBKhandre
1
24
ಮೈಸೂರು ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಪಡೆದ ಮಂಡ್ಯ ಜಿಲ್ಲಾ ಪಂಚಾಯಿತಿಯ “ಅಸ್ಮಿತೆ – ಶ್ರೀಶಕ್ತಿಯ ಅನಾವರಣ” ಸ್ತಬ್ಧಚಿತ್ರವನ್ನು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ವೀಕ್ಷಣೆಗೆ ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳು ಸ್ತಬ್ಧಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
#Asmithe
33































































