B R Patil (@brpatilmla) header
B R Patil (@brpatilmla) profile picture

ಸಾಮಾಜಿಕ ನ್ಯಾಯದ ಪರಿಪಾಲಕ/Deputy Chairman of Legislative Council, Govt of Karnataka( 1991-94), MLC ( 1988-94) and MLA of Aland ( 1983-85,2004-08,2013-18, 2023 )

Gulbarga, India
Joined November 2015
Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಹೊರಟಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ನೆನ್ನೆ ರಾಯಚೂರು ಜಿಲ್ಲೆಯ ಯರಗೆರಾ ಗ್ರಾಮದ ಹತ್ತಿರ ಎಐಸಿಸಿ ಮಾಜಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಹಾತ್ಮ ಬಸವಣ್ಣನವರ ಮೂರ್ತಿ ಹಾಗೂ ವಚನದ ಪುಸ್ತಕವನ್ನು ನೀಡಿ ಅಭಿನಂದಿಸಿದೆ. @RahulGandhi @bharatjodo @kharge @siddaramaiah
10
33
1
283
ವಿಜ್ಞಾನಕ್ಕೆ ಹೊಸ ಬೆಳಕು ನೀಡಿದ ಮಹಾನ್ ಪ್ರತಿಭೆ, ನೋಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಪುಣ್ಯ ತಿಥಿಯಂದು ಅವರನ್ನು ಗೌರವದಿಂದ ಸ್ಮರಿಸೋಣ. #SirCVRaman
1
3
91
ಹಾರಕೂಡ ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿಯವರಿಗೆ ಜನ್ಮದಿನೋತ್ಸವದ ಹಾರ್ದಿಕ ಶುಭಾಶಯಗಳು. ಶ್ರೀಗಳಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಧಾರ್ಮಿಕ ಮತ್ತು ಸಮಾಜಮುಖಿ ಸೇವೆಯನ್ನು ನಿರಂತರವಾಗಿ ಮುಂದುವರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
1
72
12ನೇ ಶತಮಾನದಲ್ಲೇ ಜಾತಿ, ವರ್ಗ ಮತ್ತು ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿ, ಸಮಾನತೆ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣನವರು ಕನ್ನಡ ನಾಡಿನ ಹೆಮ್ಮೆ ಮಾತ್ರವಲ್ಲ, ಇಡೀ ಮಾನವಕುಲದ ಮಾರ್ಗದರ್ಶಕರು.(1/4)
2
8
34
403
'ಬಸವಮಂಟಪ' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಕಾನೂನುಬದ್ಧ ಕ್ರಮಕ್ಕೆ ಸಚಿವ ಸಂಪುಟ ಸಮ್ಮತಿಸಿರುವುದು ಸ್ವಾಗತಾರ್ಹ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಸಾಮರಸ್ಯ ಮತ್ತು ಮಹನೀಯರ ಗೌರವಕ್ಕೆ ಧಕ್ಕೆ ತರುವುದನ್ನು ಒಪ್ಪಲಾಗದು.(3/4)
1
1
25
ಬಸವಣ್ಣನವರ ಸಮಾನತೆಯ ತತ್ವ, ಸಾಮಾಜಿಕ ನ್ಯಾಯದ ಆಶಯ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದೇ ನಮ್ಮ ಬದ್ಧತೆ. ಬಸವಣ್ಣನವರ ವಿಚಾರಗಳು ನಮ್ಮ ಶಕ್ತಿ, ಅವರ ಆದರ್ಶಗಳು ನಮ್ಮ ದಾರಿ!(4/4)
20
ವಿಶ್ವಗುರು ಬಸವಣ್ಣನವರು ಕೇವಲ ಒಂದು ಸಮುದಾಯದ ಗುರುಗಳಲ್ಲ; ಅವರು ಇಡೀ ಮಾನವಕುಲಕ್ಕೆ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಬೆಳಕು ನೀಡಿದ ಮಹಾನ್ ದಾರ್ಶನಿಕರು. ಅಂತಹ ಮಹಾನ್ ಚೇತನದ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಹಾಗೂ ಲಿಂಗಾಯತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಅವಹೇಳನಕಾರಿ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ.(1/3)
1
3
12
307
ಬಸವಮಂಟಪ' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಸಂಬಂಧಿಸಿದ ಕಾನೂನು ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಮ್ಮತಿಸಿರುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಸಂಪುಟದ ನಿರ್ಧಾರಕ್ಕೆ ನನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.(2/3)
1
1
4
70
ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಹಕ್ಕು. ಆದರೆ ಅದರ ಹೆಸರಿನಲ್ಲಿ ಮಹನೀಯರ ಘನತೆ ಮತ್ತು ಸಮಾಜದ ಭಾವನೆಗಳಿಗೆ ಧಕ್ಕೆ ತರುವುದು ಸಮರ್ಥನೀಯವಲ್ಲ. ಬಸವಣ್ಣನವರ ಗೌರವದ ರಕ್ಷಣೆ ನಮ್ಮೆಲ್ಲರ ಹೊಣೆ. ಅವರ ಸಮಾನತೆಯ ತತ್ವ ಮತ್ತು ಮಾನವೀಯ ಸಂದೇಶವನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವುದು ನಮ್ಮ ಸಂಕಲ್ಪ.(3/3)
1
1
1
57
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ತ್ಯಾಗ ಮತ್ತು ಧೈರ್ಯದ ಹೊಸ ಭಾಷ್ಯ ಬರೆದ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ. ವೀರಮಾತೆಯ ಜನ್ಮ ಜಯಂತಿಯಂದು ಗೌರವಪೂರ್ವಕ ನಮನಗಳು. #JhansiRaniLaxmibai
2
1
84
ಭಾರತದ ಆತ್ಮವಿಶ್ವಾಸಕ್ಕೆ ಹೊಸ ಆಯಾಮ ನೀಡಿದವರು, ಬಡವರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದವರು, ಜಾಗತಿಕ ವೇದಿಕೆಯಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿದವರು, ದೇಶ ಕಂಡ ಅಪ್ರತಿಮ ನಾಯಕಿ, ಭಾರತದ ಪ್ರಥಮ ಮಹಿಳಾ ಪ್ರಧಾನಿ, ಭಾರತರತ್ನ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮ ಜಯಂತಿಯಂದು ಹೃದಯಪೂರ್ವಕ ಗೌರವ ನಮನಗಳು. #IndiraGandhi
1
3
84
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಹೋರಾಟಗಾರ, ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಪುಣ್ಯಸ್ಮರಣೆಯಂದು ಶತಶತ ನಮನಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ತೋರಿದ ಧೈರ್ಯ, ತ್ಯಾಗ ಮತ್ತು ಅಚಲ ದೇಶಭಕ್ತಿ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿಯಾಗಿರಲಿ. #LalaLajpatRai
1
82
ನನ್ನ ಜನ್ಮದಿನದ ಸಂದರ್ಭದಲ್ಲಿ ಪ್ರೀತಿ, ಅಭಿಮಾನ ಹಾಗೂ ಆತ್ಮೀಯತೆಯಿಂದ ಶುಭಾಶಯಗಳನ್ನು ಕೋರಿದ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ನನ್ನ ಆತ್ಮೀಯ ಸಹೋದರರು, ಬಂಧು-ಮಿತ್ರರು ಹಾಗೂ ಅಪಾರ ಅಭಿಮಾನಿ ಬಳಗದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.(1/2) @INCKarnataka
1
1
87
ನೀವು ತೋರಿದ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳು ನನ್ನ ಸಾರ್ವಜನಿಕ ಬದುಕಿನ ಪಯಣಕ್ಕೆ ಮತ್ತಷ್ಟು ಶಕ್ತಿ ಹಾಗೂ ಸ್ಫೂರ್ತಿ ತುಂಬಿವೆ. ನಿಮ್ಮೆಲ್ಲರ ಪ್ರೀತಿ-ಅಭಿಮಾನಕ್ಕೆ ಸದಾ ಋಣಿಯಾಗಿರುತ್ತೇನೆ. ಜನಸೇವೆಯ ಸಂಕಲ್ಪದೊಂದಿಗೆ ನಿಮ್ಮೊಂದಿಗೆ, ನಿಮಗಾಗಿ ನನ್ನ ಪಯಣ ನಿರಂತರ.(2/2)
8
ಸಮಾಜದ ಪ್ರತಿಯೊಂದು ಬೆಳವಣಿಗೆಯನ್ನು ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸುವ ಪತ್ರಕರ್ತರ ಪರಿಶ್ರಮ, ಬದ್ಧತೆ ಮತ್ತು ವೃತ್ತಿಪರ ನಿಷ್ಠೆ ಅಭಿನಂದನಾರ್ಹ. ಪ್ರಜಾಪ್ರಭುತ್ವದ ಆಶಯಗಳನ್ನು ಜೀವಂತವಾಗಿರಿಸುವ ಸಮಸ್ತ ಪತ್ರಕರ್ತ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಹಾರ್ದಿಕ ಶುಭಾಶಯಗಳು. #NationalPressDay
57
ಇಂದು ನನ್ನ ಜನ್ಮದಿನದ ಪ್ರಯುಕ್ತ ಕೊಪ್ಪಳದ ಸುಪ್ರಸಿದ್ಧ ಶ್ರೀ ಗವಿಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಧನ್ಯನಾದೆ. ಪೂಜ್ಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಸದಾ ನನ್ನ ಬದುಕಿಗೆ ಪ್ರೇರಣೆ ಮತ್ತು ಶಕ್ತಿಯಾಗಿರಲಿ ಎಂದು ಪ್ರಾರ್ಥಿಸಿದೆ. @INCKarnataka
79
ನೂರಾರು ಮರಗಳನ್ನು ನೆಟ್ಟು, ಅವುಗಳನ್ನು ಸ್ವಂತ ಮಕ್ಕಳಂತೆ ಪೋಷಿಸಿದ ಮಹಾನ್ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಸ್ಮರಣೆ ಸದಾ ಹಸಿರು. ಪ್ರಕೃತಿಯೇ ನಮ್ಮ ಬದುಕು, ಮರಗಳೇ ನಮ್ಮ ಭವಿಷ್ಯ ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರಿದ ಮಹಾನ್ ಚೇತನಕ್ಕೆ ಅವರ ಪುಣ್ಯ ತಿಥಿಯಂದು ಗೌರವಪೂರ್ವಕ ನಮನಗಳು. #ಸಾಲುಮರದ_ತಿಮ್ಮಕ್ಕ
72
ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಭಾರತದ ಆಡಳಿತ ವ್ಯವಸ್ಥೆಯ ತಳಹದಿಯಾಗಿಸಿದ ಮಹಾನ್ ನಾಯಕ, ಭಾರತದ ಪ್ರಥಮ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರು.(1/2) #ಮಕ್ಕಳ_ದಿನಾಚರಣೆ
1
81
ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು, ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಮುಂದಿನ ಪೀಳಿಗೆಯಲ್ಲಿದೆ ಎಂದು ನಂಬಿದ್ದರು. ಶಿಕ್ಷಣ, ವಿಜ್ಞಾನ ಮತ್ತು ವಿಚಾರಶೀಲತೆಯ ಮೂಲಕ ಬಲಿಷ್ಠ ಭಾರತ ಕಟ್ಟುವ ಅವರ ಕನಸು ಸದಾ ಪ್ರಸ್ತುತ. ನೆಹರು ಅವರ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.(2/2)
16
ನಿನ್ನೆ ಆಳಂದ ತಾಲೂಕಿನ ಮಾದನಹಿಪ್ಪರಗಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಸೌಕರ್ಯ ಅನುದಾನದಡಿ ₹2 ಕೋಟಿ ವೆಚ್ಚದಲ್ಲಿ ಮರಗಮ್ಮ ಹಳ್ಳಕ್ಕೆ ಸೇತುವೆ ಹಾಗೂ ವಿದ್ಯುತ್ ಉಪಕೇಂದ್ರದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದೆ.(1/2)
1
3
117
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ, ರೈತರ ಸಮಸ್ಯೆಗಳು ಹಾಗೂ ಬೆಳೆ ಹಾನಿ ಪರಿಹಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದು, ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದೆ. ಈ ಕಾರ್ಯಕ್ರಮದ ಪತ್ರಿಕಾ ವರದಿ.(2/2)
20