ದಿನಾಂಕ 7/9/26 ರಂದು ಬೆಳಿಗ್ಗೆ 10:00 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ವಿಸಿ ಹಾಲ್‌ನಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಣೆಯ ನಂತರದ ಚಟುವಟಿಕೆಗಳು - ನೋಟಿಸ್ ವಿಚಾರಣೆ ಮತ್ತು ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಮಾನ್ಯತೆ ಪಡೆದ ರಾಜಕೀಯ ಪಕ್ಷದ ಸಭೆಯನ್ನು ನಡೆಸಲಾಯಿತು.
ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ, ಕೋಲಾರ ರವರು ದಿನಾಂಕ: 24/08/2026 ರಂದು ಕರಡು ಮತದಾರರ ಪಟ್ಟಿಯ ಪ್ರಕಟಣೆ ಕುರಿತು ಪತ್ರಿಕಾ ಸುದ್ದಿಘೋಷ್ಠಿ ನಡೆಸಿ, ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳುವಂತೆ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ, ಕೋಲಾರ ರವರು ದಿನಾಂಕ 24/08/2026 ರಂದು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿಯನ್ನು ಹಾಗೂ ಭಾವಚಿತ್ರ ರಹಿತ ಮತದಾರರ ಪಟ್ಟಿಯನ್ನು ವಿತರಿಸಿದರು.
"ದಿನಾಂಕ 21.06.2026 ರಂದು ರಾತ್ರಿ 08:00 ರಿಂದ 09:00 ಗಂಟೆಯವರೆಗೆ ಡಿ.ಡಿ. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಜಿಲ್ಲಾಧಿಕಾರಿಗಳವರ ಪ್ರೇರಣಾದಾಯಕ ಸಂದರ್ಶನವನ್ನು ತಪ್ಪದೇ ವೀಕ್ಷಿಸಿ."
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ – 2026 ಸಂಬಂಧ ದಿನಾಂಕ: 29/05/2026 ರಂದು ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಹೋಬಳಿ ಮಟ್ಟದ ಸಹಾಯಕ ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ – 2026 ಸಂಬಂಧ ದಿನಾಂಕ: 02/6/26 ರಂದು ಜಿಲ್ಲಾ ಮಟ್ಟದಲ್ಲಿ ಡಿಎಲ್‌ಎಂಟಿ (ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್) ಹಾಗೂ ಎಎಲ್ಎಂಟಿ ( ವಿಧಾನ ಸಭಾ ಕ್ಷೇತ್ರದ ಮಾಸ್ಟರ್ ಟ್ರೈನರ್) ಅನ್ನು ಹಮ್ಮಿಕೊಳ್ಳಲಾಯಿತು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ – 2026 ಸಂಬಂಧ ದಿನಾಂಕ: 02/6/26 ರಂದು ಮಾನ್ಯ ಜಿಲ್ಲಾಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಕೋಲಾರ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯ ಸಭಾಂಗಣದಲ್ಲಿ ಪತ್ರಿಕಾ ಸುದ್ದಿಗೋಷ್ಠಿ ಹಾಗೂ ಮಾಧ್ಯಮ ಕಾರ್ಯಗಾರವನ್ನು ಹಮ್ಮಿಕೊಂಡಿದ್ದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ – 2026 ಸಂಬಂಧ ದಿನಾಂಕ: 02/6/26 ರಂದು ಮಾನ್ಯ ಜಿಲ್ಲಾಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಕೋಲಾರ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯ ಸಭಾಂಗಣದಲ್ಲಿ ಮನ್ನಣೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡ ಸಭೆ
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜ್ ನಲ್ಲಿ ನಡೆಯುತ್ತಿರುವ ಜನಗಣತಿ - 2027 ರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು.
ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕರ ಕುಂದು ಕೊರತೆಗಳ ಇಲಾಖೆ ಆದೇಶದಂತೆ ದಿನಾಂಕ: 23/12/2025 ಮಂಗಳವಾರದಂದು ಮಧ್ಯಾಹ್ನ 3:30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ, ಕೋಲಾರ ಇಲ್ಲಿ “ಸುಶಾಸನ ಸಪ್ತಾಹ-ಪ್ರಶಾಸನ ಗ್ರಾಮಗಳ ಕಡೆಗೆ" (Sushasan Saptah – Prashasan Gaon Ki Ore ) ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕೋಲಾರ ಜಿಲ್ಲೆಯಲ್ಲಿನ ಕೆರೆಗಳ ಅಳತೆ ಹಾಗೂ ಸಂರಕ್ಷಣೆ ಮತ್ತು ಅಭಿವೃದ್ದಿ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಅಪೆಕ್ಸ್ ಸಮಿತಿ ಸಭೆ ನಡೆಸಲಾಯಿತು.
































































