ಗಣೇಶ ಹಬ್ಬವನ್ನು ಭಕ್ತಿ, ಶಾಂತಿ ಹಾಗೂ ಸುರಕ್ಷಿತವಾಗಿ ಆಚರಿಸೋಣ. 🙏🌺
ಸಾರ್ವಜನಿಕರ ಸುರಕ್ಷತೆ – ನಮ್ಮ ಆದ್ಯತೆ.
#ಗಣೇಶಚತುರ್ಥಿ #ಸುರಕ್ಷಿತಹಬ್ಬ #ಗಂಗಮ್ಮಗುಡಿಪೊಲೀಸ್ #ಬೆಂಗಳೂರುನಗರಪೊಲೀಸ್ #NorthWestDivision #SafeFestival #HappySociety #BengaluruCityPolice
35
ಶ್ರೀ ರವಿಕುಮಾರ್ ವೈ. ಮಾನ್ಯ, ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿ, ಅನುಮಾನಾಸ್ಪದ ಹಾಗೂ ಅಮಾನ್ಯ ನೋಂದಣಿ ವಾಹನಗಳನ್ನು ಪರಿಶೀಲಿಸಿ, ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸಲಾಯಿತು.
#BengaluruCityPolice #Chikkabanavara #SpecialPatrolling #TrafficEnforcement
49
ಇಂದು ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ವಾಯುವ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ “Preparation of One-Year Training Schedule on Criminal Investigation” ಕಾರ್ಯಾಗಾರ ಆಯೋಜಿಸಲಾಯಿತು.
Dr. Girish Chandra YP, Professor, Ramaiah Medical College ರವರು ಅಪರಾಧ ತನಿಖೆ ಕುರಿತು ತರಬೇತಿ & ಮಾರ್ಗದರ್ಶನ ನೀಡಿದರು.
30
ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ “Preparation of One-Year Training Schedule on Criminal Investigation” ಕಾರ್ಯಾಗಾರ ಆಯೋಜಿಸಲಾಯಿತು.
37 ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿ, ವೈಜ್ಞಾನಿಕ ತನಿಖೆ, ಸಾಕ್ಷ್ಯಾಧಾರಗಳ ಸಂಗ್ರಹಣೆ, ಆಧುನಿಕ ತನಿಖಾ ಕೌಶಲ್ಯಗಳು ಹಾಗೂ Cyber Crime Investigation ಕುರಿತು ತರಬೇತಿ ಪಡೆದರು.
10
🙏 ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಸಭೆ 🚔
ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರೊಂದಿಗೆ ಸಭೆ ನಡೆಸಲಾಯಿತು. ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಾಗೂ ಸುರಕ್ಷಿತವಾಗಿ ಆಚರಿಸುವ ಕುರಿತು ಅಗತ್ಯ ಮಾರ್ಗದರ್ಶನ ನೀಡಲಾಯಿತು.
14
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಠಾಣಾ ಸರಹದ್ದಿನಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು. 🚔
ಕಾಲ್ನಡಿಗೆ ಗಸ್ತು ಮೂಲಕ ಬಾರ್ & ರೆಸ್ಟೊರೆಂಟ್, ಲಾಡ್ಜ್, ಮಸೀದಿ, ದೇವಸ್ಥಾನ, ಚರ್ಚ್ ಹಾಗೂ ಡಾರ್ಕ್ ಏರಿಯಾಗಳನ್ನು ಪರಿಶೀಲಿಸಲಾಯಿತು.
ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸುವಂತೆ ಮನವಿ. 🤝
283
ಪ್ರಾಮಾಣಿಕತೆಗೆ ಮಾದರಿ
ರಸ್ತೆಯಲ್ಲಿ ಬಿದ್ದಿದ್ದ 30 ಗ್ರಾಂ ಚಿನ್ನಾಭರಣವನ್ನು ಠಾಣೆಗೆ ತಂದು ಒಪ್ಪಿಸಿದ ಮಿಥುನ್ ಅವರ ಪ್ರಾಮಾಣಿಕತೆಗೆ ಅಭಿನಂದನೆಗಳು. 👏 ವಾರಸುದಾರರನ್ನು ಪತ್ತೆಹಚ್ಚಿ ಚಿನ್ನಾಭರಣವನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.
#ಪ್ರಾಮಾಣಿಕತೆ #ಮಾನವೀಯತೆ #GoodCitizen
1
15
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುಟ್ಟ ಮಕ್ಕಳೊಂದಿಗೆ ರಾಷ್ಟ್ರೀಯ ಹಬ್ಬವನ್ನು ಆಚರಿಸಿ, ಅವರಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಹಾಗೂ ಜವಾಬ್ದಾರಿಯುತ ನಾಗರಿಕತೆಯ ಅರಿವು ಮೂಡಿಸಲಾಯಿತು. 🇮🇳
#80thIndependenceDay #IndependenceDay2026 #AzadiKaAmritMahotsav #JaiHind #VandeMataram
21
🚫💊 ಮಾದಕ ವ್ಯಸನಕ್ಕೆ ಇಲ್ಲ ಎನ್ನಿ – ಉತ್ತಮ ಭವಿಷ್ಯಕ್ಕೆ ಹೌದು ಎನ್ನಿ!
ನಟ ಶ್ರೀ ಮುರಳಿ ಅವರ ಮಾದಕ ವ್ಯಸನ ವಿರೋಧಿ ಜಾಗೃತಿ ಸಂದೇಶವನ್ನು ವೀಕ್ಷಿಸಿ, ಹಂಚಿಕೊಳ್ಳಿ.
ಪ್ರತಿಯೊಬ್ಬರ ಜಾಗೃತಿಯೇ ಮಾದಕ ವ್ಯಸನ ಮುಕ್ತ ಸಮಾಜದತ್ತ ಒಂದು ಹೆಜ್ಜೆ.
#DrugFreeKarnataka #BedaBro #RISE #SayNoToDrugs
🚫💊 ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ನಮ್ಮ ಠಾಣೆಯ ವತಿಯಿಂದ ವಿವಿದ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
150ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಜಾಗೃತಿ ಜಾಥಾ ನಡೆಸಿ, ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು.
🚫💊 ಮಾದಕ ವಸ್ತುಗಳಿಗೆ ಇಲ್ಲ ಎನ್ನೋಣ, ಉತ್ತಮ ಭವಿಷ್ಯಕ್ಕೆ ಹೌದು ಎನ್ನೋಣ.
19
ನಮ್ಮ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಡಾ. ಅಗರವಾಲ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಿ ಕಣ್ಣಿನ ಪರೀಕ್ಷೆ ನಡೆಸಲಾಯಿತು.
ಈ ಉಪಯುಕ್ತ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಸಹಕರಿಸಿದ ಡಾ. ಅಗರವಾಲ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳು.
13
ನಿನ್ನೆ ನಡೆದ IPL ಫೈನಲ್ ಪಂದ್ಯಾವಳಿಯ ಸಂದರ್ಭದಲ್ಲಿ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಪಾಲನೆಗೆ ನೀಡಿದ ಸಹಕಾರಕ್ಕೆ ಧನ್ಯವಾದಗಳು.
#PoliceBandobast #PublicSafety #IPLFinal #LawAndOrder
24
ಕರ್ತವ್ಯ ಮಾತ್ರವಲ್ಲ, ಮಾನವೀಯತೆಯೂ ನಮ್ಮ ಹೊಣೆಗಾರಿಕೆ.
ಇಂದು ನಮ್ಮ ಪೊಲೀಸ್ ಸಿಬ್ಬಂದಿಯವರು ದಾಹದಿಂದ ಠಾಣೆ ಬಳಿ ಬಂದ ಕರುವಿಗೆ ನೀರು ಕುಡಿಸಿ ಮಾನವೀಯತೆ ಮೆರೆದರು. 🐄💧
#Humanity #PoliceCare
22
'ಮನೆ ಮನೆ ಪೊಲೀಸ್' ಕಾರ್ಯಕ್ರಮದ ಭಾಗವಾಗಿ ,ದಿನಾಂಕ 28/05/2026 ರಂದು ಗಂಗಮ್ಮಗುಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಯವರು,
ಮನೆ ಮನೆಗೆ ಭೇಟಿ ನೀಡಿ ಕಾನೂನು ಮತ್ತು ಸುವ್ಯವಸ್ತೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ವಿಚಾರಿಸಲಾಯಿತು.
8
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಂದು ನಮ್ಮ ಠಾಣಾ ವತಿಯಿಂದ ವಿವಿಧ ಸ್ಥಳಗಳಲ್ಲಿ ಚೆಕ್ ಪಾಯಿಂಟ್‌ಗಳನ್ನು ನೇಮಿಸಿ ವಾಹನ ತಪಾಸಣೆ ನಡೆಸಲಾಯಿತು. ವಾಹನಗಳ ದಾಖಲಾತಿ, ಚಾಲನಾ ಪರವಾನಗಿ ಪರಿಶೀಲಿಸಲಾಯಿತು. ಸಂದೇಹಾಸ್ಪದ ವಾಹನಗಳು ಮತ್ತು ವ್ಯಕ್ತಿಗಳ ಮೇಲೂ ವಿಶೇಷ ನಿಗಾವಹಿಸಿ ಸಾರ್ವಜನಿಕರಲ್ಲಿ ಕಾನೂನು ಪಾಲನೆ ಕುರಿತು ಜಾಗೃತಿ ಮೂಡಿಸಲಾಯಿತು.
11
'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮದ ಭಾಗವಾಗಿ ಇಂದು ನಮ್ಮ ಠಾಣಾ ವತಿಯಿಂದ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ,ಸಾರ್ವಜನಿಕರಿಗೆ :-
-ಸೈಬರ್ ಕ್ರೈಮ್
-ಸರಗಳ್ಳತನ
-ಮಹಿಳಾ ದೌರ್ಜನ್ಯ ತಡೆಗಟ್ಟುವಿಕೆ
-ಮಾದಕ ವಸ್ತುಗಳ ನಿಯಂತ್ರಣ
-ಮಕ್ಕಳ ಸಹಾಯವಾಣಿ 1098
-ಸೈಬರ್ ಸಹಾಯವಾಣಿ 1930
-ತುರ್ತು ಸೇವೆಗೆ 112
ಇತರೆ ಮಾಹಿತಿಯನ್ನು ಒದಗಿಸಲಾಯಿತು.
11


























