
Official twitter account of Madivala Police Station (080-22942568, 9480801624). Dial Namma-112 in case of emergency |Help us serve you better @BlrCityPolice
Bengaluru, India
Joined September 2014
- Tweets648
- Following91
- Followers1.1K
- Likes424
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
🚨 ಉದ್ಯೋಗ ವಂಚನೆ ಬಗ್ಗೆ ಎಚ್ಚರ!
ಹೆಚ್ಚಿನ ಸಂಬಳದ ಆಮಿಷಕ್ಕೆ ಒಳಗಾಗಬೇಡಿ. ಉದ್ಯೋಗಕ್ಕಾಗಿ ಹಣ ಪಾವತಿಸಬೇಡಿ ಹಾಗೂ ವೈಯಕ್ತಿಕ/ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಉದ್ಯೋಗದಾತರನ್ನು ಪರಿಶೀಲಿಸಿ, ವಂಚನೆಯಿಂದ ಸುರಕ್ಷಿತರಾಗಿರಿ!
ಯೋಚಿಸಿ. ಪರಿಶೀಲಿಸಿ. ನಂತರ ಅರ್ಜಿ ಸಲ್ಲಿಸಿ. 🛡️
#JobFraud #CyberAwareness #StaySafe
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
🛡️ ನಿಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳಿ. ಮಾದಕ ವ್ಯಸನವನ್ನು ತಿರಸ್ಕರಿಸಿ. “ಬೇಡ ಬ್ರೋ!” 🚫💊
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಮಾದಕ ವಸ್ತುಗಳಿಂದ ದೂರವಿರಿ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.
ಮಾದಕ ವಸ್ತುಗಳಿಗೆ ನೋ ಹೇಳಿ – ಬೇಡ ಬ್ರೋ!
#SayNoToDrugs #DrugFreeKarnataka #OperationRISE
🤖 Made with AI
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
A warm welcome and best wishes to Sri. C. Vamsi Krishna, IPS, on assuming charge as the Commissioner of Police, South Bengaluru City. He officially took charge at the Koramangala Office
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ! ನಿಮ್ಮ ಬ್ಯಾಂಕ್ ಖಾತೆಯ ವಹಿವಾಟು ವಿವರಗಳನ್ನು ನಿಯಮಿತವಾಗಿ ಪರಿಶೀಲಿಸಿ, ಪ್ರತಿಯೊಂದು ವಹಿವಾಟಿನ ಮೇಲೂ ನಿಗಾ ಇರಿಸಿ ಅನಧಿಕೃತ ವಹಿವಾಟುಗಳು ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಬ್ಯಾಂಕ್ಗೆ ವರದಿ ಮಾಡಿ.
ಸ್ವಲ್ಪ ಎಚ್ಚರಿಕೆ ಕ್ರಮವು ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ವಂಚನೆಯಿಂದ ರಕ್ಷಿಸುತ್ತದೆ.
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಆಗ್ನೇಯ ವಿಭಾಗದ ವ್ಯಾಪ್ತಿಗೆ ಒಳಪಡುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗಳು ಹಾಗೂ ಪೊಲೀಸ್ ಠಾಣೆಗಳ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗಿದೆ.
ಸುರಕ್ಷಿತ ಸಮಾಜ, ಜನಸ್ನೇಹಿ ಪೊಲೀಸ್ ಸೇವೆ – ನಮ್ಮ ಸಂಕಲ್ಪ.
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಬೆಂಗಳೂರು ನಗರದ ಆಡಳಿತಾತ್ಮಕ ಅನುಕೂಲತೆ ಹಾಗೂ ಪೊಲೀಸ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ನೂತನವಾಗಿ “ಪೊಲೀಸ್ ಆಯುಕ್ತರು, ದಕ್ಷಿಣ ಬೆಂಗಳೂರು ನಗರ” ಸ್ಥಾಪಿಸಿ ಅಧಿಕೃತ ರಾಜ್ಯಪತ್ರ ಹೊರಡಿಸಿದೆ. ಈ ನೂತನ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಆಗ್ನೇಯ ವಿಭಾಗವನ್ನು ಸೇರ್ಪಡೆಗೊಳಿಸಲಾಗಿದೆ.
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
⚠️ ವಾಟ್ಸ್ಆ್ಯಪ್ ಬಳಕೆದಾರರಿಗೆ ಎಚ್ಚರಿಕೆ!
ವಾಟ್ಸ್ಆ್ಯಪ್ ವೆಬ್ ಬಳಸಿದ ನಂತರ ಕಡ್ಡಾಯವಾಗಿ ಲಾಗ್ಔಟ್ ಮಾಡಿ. ಇಲ್ಲವಾದರೆ ವಂಚಕರು ನಿಮ್ಮ ಖಾತೆಗೆ ಅನಧಿಕೃತವಾಗಿ ಪ್ರವೇಶಿಸಿ, ನಿಮ್ಮ ಹೆಸರಿನಲ್ಲಿ ಸಂದೇಶಗಳನ್ನು ಕಳುಹಿಸುವ ಅಪಾಯವಿದೆ.
ಎಚ್ಚರಿಕೆಯಿಂದಿರಿ – ಸುರಕ್ಷಿತವಾಗಿರಿ!
#WhatsAppSafety #CyberAwareness #StayAlert
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಬೆಂಗಳೂರು ದಕ್ಷಿಣ ಪೊಲೀಸ್ ಆಯುಕ್ತಾಲಯಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ ಅತ್ತಿಬೆಲೆ ಮತ್ತು ಆನೇಕಲ್ ಪ್ರದೇಶಗಳಿಗೆ ಭೇಟಿ ನೀಡಿ, ಭೌಗೋಳಿಕ ಸ್ಥಿತಿಗತಿ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಪರಿಶೀಲಿಸಿದೆ.
ವಿಶೇಷವಾಗಿ ಸಂಚಾರ ದಟ್ಟಣೆಯ ಸಮಯದಲ್ಲಿ ಹೊಸೂರು ರಸ್ತೆಯ ಚಂದಾಪುರ ಜಂಕ್ಷನ್ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿನ ಸಂಚಾರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದೆ.
ಸಂಚಾರ ದಟ್ಟಣೆ ನಿವಾರಣೆ, ಸುಗಮ ವಾಹನ ಸಂಚಾರ, ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು
#BengaluruSouthPolice #TrafficManagement
Visited Attibele and Anekal, which are newly being brought under the jurisdiction of the Bengaluru South Police Commissionerate, to assess the geographical conditions and existing policing arrangements.
Personally inspected traffic conditions during peak hours, particularly at Chandapura Junction on Hosur Road and other key locations.
Discussed with officers on taking necessary measures to ease traffic congestion, ensure smooth vehicular movement, strengthen crime prevention, and maintain law and order.
#BengaluruSouthPolice #TrafficManagement
@CCP_Blr @Vamsikrishnaips @BlrCityPolice @KarnatakaCops
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ನನಗೆ ಅತೀವ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ.
ಆಳವಾದ ಜವಾಬ್ದಾರಿಯ ಅರಿವಿನೊಂದಿಗೆ, ಬೆಂಗಳೂರಿನ ಜನತೆಯ ಸೇವೆ ಮಾಡಲು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಸುರಕ್ಷಿತ, ಭದ್ರ ಮತ್ತು ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ.
ನಾವೆಲ್ಲರೂ ಒಟ್ಟಾಗಿ, ಸುರಕ್ಷತೆ, ವಿಶ್ವಾಸ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುವ ಬೆಂಗಳೂರನ್ನು ನಿರ್ಮಿಸುವುದನ್ನು ಮುಂದುವರಿಸೋಣ.
I am honoured and privileged to assume charge as the Chief Commissioner of Police, Bengaluru City.
With a deep sense of responsibility, I look forward to serving the people of Bengaluru, strengthening public trust, ensuring the safety and security of every citizen, and working towards a safer, more secure and citizen-friendly city.
Together, let us continue building a Bengaluru where safety, trust and service remain our foremost priorities.
#HonouredToServe #ServingBengaluru #BengaluruCityPolice #PublicSafety #PeopleFirst
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯ ಬಲವರ್ಧನೆ!
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಪಾಲನೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Strengthening Policing Through Coordination!
Sri R. Hithendra, IPS, Chief Commissioner of Police, Bengaluru City, along with the five Commissioners of Police, met Shri Priyank Kharge, Hon’ble Home Minister of Karnataka.
The meeting marked a formal interaction following the restructuring of Bengaluru City Police into five commissionerates, reaffirming the commitment to effective coordination, strengthened law enforcement, public safety and citizen-centric policing.
#BengaluruCityPolice #KarnatakaPolice #PublicSafety #PoliceCoordination
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ದಕ್ಷಿಣ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಶ್ರೀ. ಸಿ. ವಂಶಿ ಕೃಷ್ಣ, ಐಪಿಎಸ್ ಅವರಿಗೆ ಆತ್ಮೀಯ ಸ್ವಾಗತ ಮತ್ತು ಶುಭಾಶಯಗಳು. ಕೋರಮಂಗಲ ಕಚೇರಿಯಲ್ಲಿ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ದಕ್ಷಿಣ ಬೆಂಗಳೂರು ನಗರದ ಮೊದಲ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನಗೆ ಅತ್ಯಂತ ಗೌರವ ಮತ್ತು ಹೆಮ್ಮೆಯ ವಿಷಯ.
ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ನಾನು ಬದ್ಧನಾಗಿದ್ದೇನೆ. ಸಾರ್ವಜನಿಕರ ಸುರಕ್ಷತೆ, ಸುರಕ್ಷಿತ ಮತ್ತು ಸುಗಮ ಸಂಚಾರ, ಮಹಿಳೆಯರ ರಕ್ಷಣೆ, ದೂರುಗಳಿಗೆ ತ್ವರಿತ ಸ್ಪಂದನೆ, ಸಂತ್ರಸ್ತರ ನೋವಿಗೆ ಸ್ಪಂದಿಸುವ ಮಾನವೀಯ ಪೊಲೀಸ್ ಸೇವೆ ಹಾಗೂ ಮಾದಕವಸ್ತು ಮುಕ್ತ ಕರ್ನಾಟಕ ನಿರ್ಮಾಣ ನನ್ನ ಪ್ರಮುಖ ಆದ್ಯತೆಗಳಾಗಿವೆ.
ಜನರ ವಿಶ್ವಾಸವೇ ನಮ್ಮ ಶಕ್ತಿ, ಜನಸೇವೆಯೇ ನಮ್ಮ ಕರ್ತವ್ಯ, ಸುರಕ್ಷತೆಯೇ ನಮ್ಮೆಲ್ಲರ ಜವಾಬ್ದಾರಿ.
ಪ್ರತಿಯೊಬ್ಬ ನಾಗರಿಕರೂ ಮುಂದೆ ಬಂದು ನಮ್ಮೊಂದಿಗೆ ಕೈಜೋಡಿಸಬೇಕು. ನಾವೆಲ್ಲರೂ ಒಟ್ಟಾಗಿ ಸುರಕ್ಷಿತ, ಶಾಂತಿಯುತ ಮತ್ತು ಉತ್ತಮ ಬೆಂಗಳೂರನ್ನು ನಿರ್ಮಿಸೋಣ.
Honoured and privileged to assume charge as the first Commissioner of Police, South Bengaluru City.
Guided by fairness, transparency and accountability, I am committed to ensuring public safety, safe and smooth mobility, prioritising women’s safety, delivering swift responses, promoting sensitive and victim-centric policing, and working towards a Drug-Free Karnataka.
Public trust is our strength, service is our duty, and safety is our shared responsibility.
I invite every citizen to come forward, join hands with us and be an active partner in building a safer, stronger and more secure Bengaluru.
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
📱🔐 ನಿಮ್ಮ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ, ತಕ್ಷಣವೇ ಆ ಮೊಬೈಲ್ನಲ್ಲಿ ಬಳಸುತ್ತಿದ್ದ ಎಲ್ಲಾ ಖಾತೆಗಳ ಪಾಸ್ವರ್ಡ್ಗಳನ್ನು ಬದಲಾಯಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ.
ಎಚ್ಚರಿಕೆಯಿಂದಿರಿ, ಸೈಬರ್ ಸುರಕ್ಷಿತರಾಗಿರಿ!
#CyberSafety #StaySafe #cyberawareness
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
“ಸನ್ಮಿತ್ರ” ಮಾದಕ ವ್ಯಸನದ ಸುಳಿಯಲ್ಲಿ ಸಿಲುಕಿದವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಿ, ಅವರನ್ನು ವ್ಯಸನ ಮುಕ್ತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆರಂಭಿಸಿರುವ ವಿಶೇಷ ಸಾಮಾಜಿಕ ಕಾರ್ಯಕ್ರಮವೇ “ಸನ್ಮಿತ್ರ”.
ಬನ್ನಿ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ!
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
conduct awareness programme in krupanidhi college with 1st year degree students regarding anti ragging, prevention of sexual harrasment and women safety issues with the support of southeast Rani channamma pade team sir.
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
🛍️⚠️ ಆನ್ಲೈನ್ ಆಫರ್ಗಳ ಬಗ್ಗೆ ಎಚ್ಚರ!
ಸೋಷಿಯಲ್ ಮೀಡಿಯಾದಲ್ಲಿ ಆಕರ್ಷಕ ಆಫರ್ಗಳನ್ನು ನೋಡಿ ವಸ್ತುಗಳನ್ನು ಖರೀದಿಸುವ ಮುನ್ನ ಎಚ್ಚರಿಕೆ ವಹಿಸಿ. ನಕಲಿ ಆಫರ್ಗಳು ನಿಮ್ಮನ್ನು ವಂಚಿಸಬಹುದು!
🔍 Think. Verify. Then Buy!
#CyberAwareness #StaySafeOnline #BeCyberSmart #BengaluruCityPolice
🤖 Made with AI
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
🪔🌿 ಪರಿಸರ ಸ್ನೇಹಿ ಹಾಗೂ ಸುರಕ್ಷಿತ ದೀಪಾವಳಿ ಆಚರಿಸೋಣ!
ಹಸಿರು ಪಟಾಕಿಗಳನ್ನು ಮಾತ್ರ ಬಳಸಿ, ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪಟಾಕಿ ಸಿಡಿಸಿ. ಮಾಲಿನ್ಯ ತಡೆದು, ಮಕ್ಕಳು ಹಾಗೂ ಹಿರಿಯರ ಸುರಕ್ಷತೆಗೆ ಆದ್ಯತೆ ನೀಡೋಣ.
🌱 ಹಸಿರು ದೀಪಾವಳಿ – ನಮ್ಮ ಸಂಕಲ್ಪ, ನಮ್ಮ ಜವಾಬ್ದಾರಿ!
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಆಗ್ನೇಯ ವಿಭಾಗದ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಗಸ್ತು ಹಾಗೂ ಗೋಚರತೆ ಹೆಚ್ಚಿಸಿ, ವಾಹನ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ಮೇಲೆ ವಿಶೇಷ ನಿಗಾ ವಹಿಸಿ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಯಿತು.
#PolicePatrolling #PublicSafety #BengaluruCityPolice
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
🪔✨ ಆಡುಗೋಡಿ ಪೊಲೀಸ್ ವಸತಿ ಗೃಹದ ಮಕ್ಕಳೊಂದಿಗೆ ಜಂಟಿ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಮಕ್ಕಳಿಗೆ ಸಿಹಿ ಹಂಚಿ, ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳ ಸಂತೋಷವೇ ಹಬ್ಬದ ನಿಜವಾದ ಬೆಳಕು. 🪔✨
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
Replying to @kmangalaps
@kmangalaps ತಂಡವು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ, ಸುಮಾರು ₹60 ಲಕ್ಷ ಮೌಲ್ಯದ 841 ಗ್ರಾಂ MDMA ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
#DrugFreeKarnataka #SayNoToDrugs #BedaBro #RISE























