
Official twitter account of SG Palya Police Station. (080-22942762). Dial Namma 112 in case of emergency. | Help us to serve you better. | @BlrCityPolice
Joined September 2018
- Tweets596
- Following149
- Followers285
- Likes491
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶ ಹಾಗೂ ಮಾರ್ಗದರ್ಶನದಂತೆ, ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ, ಪೊಲೀಸ್ ಗಸ್ತು (Patrolling) ಹಾಗೂ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಗೋಚರತೆಯನ್ನು (Visibility) ಗಣನೀಯವಾಗಿ ಹೆಚ್ಚಿಸಲಾಯಿತು.
ವಾಹನ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಸಂಶಯಾಸ್ಪದ ವಾಹನಗಳ ಚಲನವಲನದ ಮೇಲೆ ವಿಶೇಷ ನಿಗಾ ವಹಿಸಿ, ಸಾರ್ವಜನಿಕರ ಗರಿಷ್ಠ ಸುರಕ್ಷತೆಗಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು.
#BengaluruCityPolice #SouthEastDivision #PolicePatrolling #PoliceVisibility #NakaBandhi #VehicleChecking #CrimePrevention #PublicSafety
ಗಾಳಿಪಟ ಹಾರಿಸುವಾಗ ಮಾಂಜಾ ದಾರವನ್ನು ಬಳಸಬೇಡಿ. ಮಾಂಜಾ ದಾರ ತಯಾರಿಕೆ, ಮಾರಾಟ, ಸಂಗ್ರಹಣೆ ಅಥವಾ ಬಳಕೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಮಾಂಜಾ ದಾರ ತಯಾರಿಕೆ, ಮಾರಾಟ ಬಳಕೆ ಕಂಡುಬಂದಲ್ಲಿ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ. @BlrCityPolice @DCPSEBCP @DgpKarnataka
🤖 Made with AI
Yesterday night @sgpalyaps
jurisdiction, night patrol officers and staff took measures to prevent criminal activity. They ensured that shops and business establishments closed on time, conducted vehicle checks at checkpoints, and screened suspicious individuals. @DCPSEBCP
ನಿನ್ನೆ ದಿನ ರಾತ್ರಿ @sgpalyaps ವ್ಯಾಪ್ತಿಯಲ್ಲಿ ಅಪರಾಧಿಕ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ಗಸ್ತು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಂಗಡಿ- ಮುಂಗಟ್ಟುಗಳನ್ನು ಸರಿಯಾದ ಸಮಯಕ್ಕೆ ಮುಚ್ಚುವಂತೆ ತಿಳಿಸಿ, ನಾಕಾಬಂದಿ ಮೂಲಕ ವಾಹನ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡಲಾಯಿತು. @DCPSEBCP
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
"ಗೌರಿ ಗಣೇಶ್ ಹಬ್ಬ" ವನ್ನು ಸುರಕ್ಷಿತವಾಗಿ ಹಾಗೂ ಶಾಂತಿಯುತವಾಗಿ ಆಚರಿಸುವ ಹಿನ್ನೆಲೆಯಲ್ಲಿ, ಏಕಗಾವಕ್ಷಿ ಮೂಲಕ ಕಡ್ಡಾಯವಾಗಿ ಇಲಾಖೆಗಳ ಅನುಮತಿ ಪಡೆದು, ಗಣೇಶ್ ಪ್ರತಿಷ್ಠಾಪನೆ ಮಾಡುವ ಸ್ಥಳ, ಬ್ಯಾನರ್‌ಗಳ ಅಳವಡಿಕೆ, ವಿದ್ಯುತ್ ಸಂಪರ್ಕ, ಅಗ್ನಿ ಅವಘಡಗಳ ಮುನ್ನೆಚ್ಚರಿಕೆ, CCTV ಕ್ಯಾಮೆರಾಗಳ ಅಳವಡಿಕೆ, ಸಾರ್ವಜನಿಕರ ಓಡಾಟಕ್ಕೆ ಅಗತ್ಯ ಸ್ಥಳಾವಕಾಶ, ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಮೆರವಣಿಗೆ ನಡೆಸುವುದು ಹಾಗೂ ಧ್ವನಿವರ್ಧಕಗಳ ನಿಗದಿತ ಸಮಯದ ಬಳಕೆ ಸೇರಿದಂತೆ ಇತರೆ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಆಯೋಜಕರು ಹಾಗೂ ವ್ಯವಸ್ಥಾಪಕರು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಅಥವಾ 112ಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
#GowriGaneshFestival #GaneshChaturthi #FestivalSafety #SafeCelebration #PeacefulCelebration #CelebrateSafely #BengaluruCityPolice #SouthEastDivision
ಮಧ್ಯಪ್ರದೇಶದಲ್ಲಿ ಕರ್ತವ್ಯದ ಮೇಲೆ ತೆರಳಿದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ವಿಧಿವಶರಾದ ಆಗ್ನೇಯ ವಿಭಾಗದ ಸಿಇಎನ್ (CEN) ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀ ರವಿ ಕೆ. ಬಿ. ಅವರ ನಿಧನಕ್ಕೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ತೀವ್ರ ಕಂಬನಿ ಮಿಡಿಯುತ್ತದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.
#BengaluruCityPolice
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
ಈದ್ ಮಿಲಾದ್ ಹಬ್ಬದ ಆಚರಣೆ ಹಾಗೂ ಮೆರವಣಿಗೆಯ ಹಿನ್ನೆಲೆಯಲ್ಲಿ @thilaknagaraps ಮತ್ತು @sgpalyaps ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಗಸ್ತು ನಡೆಸಿ, ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.
ಜನದಟ್ಟಣೆ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
#EidMilad #PublicSafety #Security #BengaluruCityPolice #SouthEastDivision
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
ಆಗಸ್ಟ್ 2026ರ ಮಾಸಿಕ #ಜನಸಂಪರ್ಕ ಸಭೆ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆಗಳನ್ನು ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರು ನೇರವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳು, ಸಲಹೆಗಳು ಹಾಗೂ ಅಹವಾಲುಗಳನ್ನು ಹಂಚಿಕೊಂಡಿರುತ್ತಾರೆ.
ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಗಳನ್ನು ಚರ್ಚಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಮ್ಮ ಬದ್ಧತೆ ಸದಾ ಮುಂದುವರಿಯಲಿದೆ.
#JanSamparkaSabhe #CommunityPolicing #PublicGrievance #PublicSafety #PoliceConnect
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
🚨 ಕಿರುಕುಳವನ್ನು ನಿರ್ಲಕ್ಷಿಸಬೇಡಿ – ತಕ್ಷಣ ವರದಿ ಮಾಡಿ.
ಆನ್‌ಲೈನ್‌ನಲ್ಲಿ ಸೈಬರ್ ಕಿರುಕುಳಕ್ಕೆ ಒಳಗಾಗುತ್ತಿದ್ದರೂ ಅಥವಾ ಸಾರ್ವಜನಿಕ ಸ್ಥಳದಲ್ಲಿ ಕಿರುಕುಳವನ್ನು ಎದುರಿಸುತ್ತಿದ್ದರೂ ಮೌನವಾಗಿರಬೇಡಿ. ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣವೇ ಪೊಲೀಸರಿಗೆ ದೂರು ನೀಡಿ.
ಸಮಯಕ್ಕೆ ಸರಿಯಾಗಿ ದೂರು ನೀಡುವುದರಿಂದ ಇಂತಹ ಅಪರಾಧಗಳನ್ನು ತಡೆಗಟ್ಟಲು, ಇತರರನ್ನು ರಕ್ಷಿಸಲು ಹಾಗೂ ಅಪರಾಧಿಗಳನ್ನು ಕಾನೂನಿನ ಮುಂದೆ ತರಲು ಸಹಾಯವಾಗುತ್ತದೆ.
📞 ಸೈಬರ್ ಅಪರಾಧ ಸಹಾಯವಾಣಿ: 1930 (ಸೈಬರ್ ಅಪರಾಧಗಳಿಗೆ ಮಾತ್ರ)
🚨 ತುರ್ತು ಸಹಾಯವಾಣಿ: 112
#ಮಹಿಳಾ_ಸುರಕ್ಷತೆ #WomenSafety #CyberBullying #StopHarassment #CyberSafety #Dial1930 #Namma112 #StaySafe #BengaluruCityPolice #SouthEastDivision
🤖 Made with AI
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
🚨 ಅಪರಿಚಿತರಿಗಾಗಿ ಹಣ ವರ್ಗಾವಣೆ ಮಾಡಬೇಡಿ! 🚨
ಅಪರಿಚಿತರು ಗ್ರಾಹಕರಂತೆ ಪರಿಚಯ ಮಾಡಿಕೊಂಡು, "ಬೇರೆಯವರ ಖಾತೆಯಿಂದ ನನಗೆ ಹಣ ಬರುತ್ತದೆ. ಅದನ್ನು ನಗದು ರೂಪದಲ್ಲಿ ನೀಡಿ ಅಥವಾ ಮತ್ತೊಂದು ಖಾತೆಗೆ ವರ್ಗಾಯಿಸಿ" ಎಂದು ಕೇಳಬಹುದು. ಕೆಲವೊಮ್ಮೆ "ತಪ್ಪಾಗಿ ನಿಮ್ಮ ಖಾತೆಗೆ ಹೆಚ್ಚು ಹಣ ವರ್ಗಾವಣೆಯಾಗಿದೆ, ಅದನ್ನು ನಗದು ರೂಪದಲ್ಲಿ ಹಿಂತಿರುಗಿಸಿ"ಎಂದು ನಂಬಿಸಿ ವಂಚಿಸುತ್ತಾರೆ.
⚠️ ಆ ಹಣವು ಸೈಬರ್ ವಂಚನೆಯಿಂದ ಬಂದ ಹಣ ಆಗಿರಬಹುದು. ಇಂತಹ ಹಣವನ್ನು ಸ್ವೀಕರಿಸಿ ಅಥವಾ ವರ್ಗಾಯಿಸಿದರೆ, ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗುವ ಸಾಧ್ಯತೆ ಇದೆ. ಜೊತೆಗೆ, ನಿಮ್ಮ ಸ್ವಂತ ಹಣವೂ ತನಿಖೆಯಲ್ಲಿ ಸಿಲುಕಬಹುದು.
❌ ತಿಳಿಯದೇ ಮನಿ ಮ್ಯೂಲ್ (Money Mule) ಆಗಬೇಡಿ.
📞 ಸೈಬರ್ ವಂಚನೆ ಕಂಡುಬಂದರೆ ತಕ್ಷಣ 1930 ಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.
#CyberSafety #MoneyMule #StayAlert #1930 #BengaluruCityPolice #SouthEastDivision
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
🚨⚠️ ಆನ್‌ಲೈನ್ ಬುಕ್ಕಿಂಗ್ ಮಾಡುವಾಗ ಬರುವ ನಕಲಿ (Fake) ಬುಕ್ಕಿಂಗ್ ವೆಬ್‌ಸೈಟ್‌ಗಳು, URL ಲಿಂಕ್‌ಗಳು ಹಾಗೂ QR ಸ್ಕ್ಯಾನರ್‌ಗಳ ಬಗ್ಗೆ ಎಚ್ಚರ!
ಹೋಟೆಲ್, ವಿಮಾನ/ರೈಲು ಟಿಕೆಟ್, ಪ್ರವಾಸ ಅಥವಾ ಇತರೆ ಸೇವೆಗಳ ಬುಕ್ಕಿಂಗ್ ಮಾಡುವ ಮೊದಲು ವೆಬ್‌ಸೈಟ್‌ನಲ್ಲಿ ಬರುವ URL ಅನ್ನು ಕಡ್ಡಾಯವಾಗಿ ಪರಿಶೀಲಿಸಿ. ನಕಲಿ ವೆಬ್‌ಸೈಟ್, ಲಿಂಕ್ ಅಥವಾ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.
✅ ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಮೊಬೈಲ್ ಆಪ್‌ಗಳ ಮೂಲಕವೇ ಬುಕ್ಕಿಂಗ್ ಮಾಡಿ.
✅ QR ಕೋಡ್ ಸ್ಕ್ಯಾನ್ ಮಾಡುವ ಮೊದಲು ಅದರ ಮೂಲವನ್ನು ಖಚಿತಪಡಿಸಿಕೊಳ್ಳಿ.
❌ ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
❌ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು, OTP ಅಥವಾ UPI PIN ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
💡 ಸ್ವಲ್ಪ ಎಚ್ಚರಿಕೆ ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ.
📞 ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.
#FakeURL #OnlineBookingScam #CyberSafety #CyberCrime #ThinkBeforeYouClick #SafeOnlineBooking #CyberAwareness #BengaluruCityPolice #SouthEastDivision
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
ಆಗ್ನೇಯ ವಿಭಾಗದ @sgpalyaps ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ, ಸಂಬಂಧಿಸಿದ ದೂರುದಾರರಿಗೆ ಮೊಬೈಲ್ ಗಳನ್ನು ಹಿಂದಿರುಗಿಸಲಾಯಿತು. ಮೊಬೈಲ್‌ಗಳ ಬಗ್ಗೆ ನಾಗರಿಕರು ಸದಾ ಜಾಗರೂಕರಾಗಿರಲು ಕೋರಿದೆ.
ಮೊಬೈಲ್ ಫೋನ್ ಕಳೆದುಹೋದ ಸಂದರ್ಭಗಳಲ್ಲಿ ಸಾರ್ವಜನಿಕರು KSP ಆಪ್‌ನ E-Lost (kspapp.ksp.gov.in/ksp/api/el…) ಸೇವೆಯನ್ನು ಬಳಸಿಕೊಂಡು ದೂರು ದಾಖಲಿಸಬೇಕು. ಜೊತೆಗೆ #CEIR ಪೋರ್ಟಲ್‌ನಲ್ಲಿ (ceir.sancharsaathi.gov.in/) ಮೊಬೈಲ್ (IMEI) ವಿವರಗಳನ್ನು ದಾಖಲಿಸಿ ಆನ್‌ಲೈನ್ ಮೂಲಕ ದೂರು ನೀಡಿದರೆ, ಮೊಬೈಲ್ ಮರುಪಡೆಯಲು ಮತ್ತು ದುರುಪಯೋಗವನ್ನು ತಡೆಯಲು ಸಾಧ್ಯವಾಗುತ್ತದೆ.
#MobileRecovery #CEIR #KSP #PublicAwareness #StayAlert #CyberSafety #PoliceService #SevaMattuSuraksha #SouthEastDivision
#sgpalyaps ವ್ಯಾಪ್ತಿಯಲ್ಲಿನ ವಿವಿಧ ಶಾಲಾ
ಕಾಲೇಜಿನಲ್ಲಿ ಇಂದು ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಾಣಿಕೆ ವಿರೋಧ ದಿನ-2026 ರ
ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಿ, ದೇಶದ ಹೆಮ್ಮೆಯ ಪ್ರಜೆಗಳಾಗಲು ಪ್ರೇರೇಪಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶ. #saynotodrugs
"ನಾಡನ್ನು ಕಟ್ಟಿದ ದೂರದೃಷ್ಟಿಯ ನಾಯಕ, ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಆದರ್ಶ, ಧೈರ್ಯ, ದೂರದೃಷ್ಟಿ ಮತ್ತು ಸೇವಾ ಮನೋಭಾವ ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ. ಕನ್ನಡ ನಾಡು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ.
🛑There is No Concept of - "DIGITAL ARREST" in India
🛑"DIGITAL ARREST" is a common tactic used by Cyber Criminals, posing as Police/CBI/ED
🛑Scammers try to extort Money from victims by threatening to include them as suspects in Criminal Cases like Narcotics, Money Laundering.
✔️To Report Cyber Crime Dial 1930 or file a complaint at cybercrime.gov.in
@BlrCityPolice @DCPSEBCP @seemantsingh96 @acpmicolayout
ಒಂದು ನಿರ್ಧಾರ ನಿಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು. ಮಾದಕ ದ್ರವ್ಯಗಳಿಗೆ ‘ಬೇಡ’ ಎನ್ನಿ. ಆರೋಗ್ಯಕರ ಮತ್ತು ಸುರಕ್ಷಿತ ಭವಿಷ್ಯಕ್ಕೆ ‘ಹೌದು’ ಎನ್ನಿ. 'ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಮತ್ತು ಅಕ್ರಮ ಸಾಗಣೆ ದಿನ'ದಂದು, ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಬೆಂಗಳೂರು ನಗರ ಪೊಲೀಸ್ ಸದಾ ಸನ್ನದ್ಧವಾಗಿದೆ.
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweeted
🌿🚫 ಮಾದಕ ವಸ್ತು ಮುಕ್ತ ಸಮಾಜದತ್ತ ಒಂದು ಹೆಜ್ಜೆ
ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಗೆ ವಿರೋಧಿ ದಿನಾಚರಣೆ
"ಮಾದಕ ವಸ್ತುಗಳಿಗೆ ಇಲ್ಲ ಎನ್ನಿ – ಆರೋಗ್ಯಕರ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸೋಣ."
🌿🚫 A Step Towards a Drug-Free Society
International Day Against Drug Abuse and Illicit Trafficking
"Say No to Drugs – Let's Build a Healthy and Safe Society."
#SayNoToDrugs #DrugFreeSociety #WorldDrugDay #StopDrugAbuse #SafeSociety





























