Official Page of DCP Electronic City BCP. Public safety, Crime prevention alerts, Cyber Fraud alerts, Public and Police Community Building.

Electronic City
Joined September 2025
Include

Only show posts containing:

Exclude

Hide posts containing:

Time range
-
Minimum likes
ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯ ಈ ಶುಭ ಸಂದರ್ಭದಲ್ಲಿ, ಅವರ ಜ್ಞಾನ, ಆದರ್ಶ, ಸತ್ಯ ಮತ್ತು ಧರ್ಮದ ಮಾರ್ಗದರ್ಶನ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಲಿ. ಮಹರ್ಷಿ ವಾಲ್ಮೀಕಿಯವರು ರಚಿಸಿದ ಮಹಾಕಾವ್ಯ ರಾಮಾಯಣವು ಮಾನವೀಯ ಮೌಲ್ಯಗಳು, ಕರ್ತವ್ಯನಿಷ್ಠೆ ಮತ್ತು ಧರ್ಮದ ಮಹತ್ವವನ್ನು ಸಾರುತ್ತದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ. ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು
1
407
🪁 ಮಾಂಜಾ ದಾರ ಬಳಕೆ ಬೇಡ — ಜೀವ ಉಳಿಸಿ, ಸುರಕ್ಷತೆ ಕಾಪಾಡಿ! ಗಾಳಿಪಟ ಹಾರಿಸುವಾಗ ನಿಷೇಧಿತ ಹಾಗೂ ಅಪಾಯಕಾರಿ ಮಾಂಜಾ ದಾರವನ್ನು ಬಳಸಬೇಡಿ. ಪಕ್ಷಿಗಳು, ಪ್ರಾಣಿಗಳು ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯವಾಗದಂತೆ ಜವಾಬ್ದಾರಿಯಿಂದ ಆಚರಿಸಿ.
1
1
31
⚠️ ಮಂಜಾ ದಾರ ಬಳಸಿ ಗಾಳಿಪಟ ಹಾರಿಸುವುದು ಪ್ರಾಣಕ್ಕೆ ಅಪಾಯಕಾರಿ! ಗಾಳಿಪಟ ಹಾರಿಸಲು ಬಳಸುವ ಮಂಜಾ ದಾರವು ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಮಕ್ಕಳು ಹಾಗೂ ಪಕ್ಷಿಗಳ ಜೀವಕ್ಕೆ ಅಪಾಯ ಉಂಟುಮಾಡಬಹುದು. ಈ ದಾರ ಕುತ್ತಿಗೆಗೆ ಸಿಲುಕಿದರೆ ಗಂಭೀರ ಗಾಯಗಳಾಗುವ ಅಥವಾ ಪ್ರಾಣಹಾನಿಯಾಗುವ ಸಾಧ್ಯತೆ ಇದೆ. ಮಂಜಾ ದಾರ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಮಂಜಾ ದಾರವನ್ನು ಬಳಸಿ ಗಾಳಿಪಟ ಹಾರಿಸಬಾರದು. ನಿಯಮಗಳನ್ನು ಪಾಲಿಸಿ, ಇತರರ ಜೀವಕ್ಕೂ ಬೆಲೆ ಕೊಡಿ. 🙏 ನಿಮ್ಮ ಸಂಭ್ರಮ ಮತ್ತೊಬ್ಬರ ಜೀವಕ್ಕೆ ಅಪಾಯವಾಗದಿರಲಿ. ಜವಾಬ್ದಾರಿಯುತವಾಗಿ ವರ್ತಿಸಿ — ಜೀವ ಉಳಿಸಿ
1
91
🚫ವಾಹನದ ಸುರಕ್ಷತೆ◀️ *ವಾಹನವನ್ನು ಯಾವಾಗಲೂ ಲಾಕ್ ಮಾಡಿ. ಸುರಕ್ಷಿತ ಹಾಗೂ ಬೆಳಕಿರುವ ಸ್ಥಳಗಳಲ್ಲಿ ವಾಹನ ನಿಲ್ಲಿಸಿ. *ಹ್ಯಾಂಡಲ್ ಲಾಕ್ ಜೊತೆಗೆ ಹೆಚ್ಚುವರಿ ಭದ್ರತಾ ಲಾಕ್ ಬಳಸಿ. *ವಾಹನದ ಕೀಗಳನ್ನು ಸುರಕ್ಷಿತವಾಗಿಡಿ. ವಾಹನದ ನೋಂದಣಿ ದಾಖಲೆಗಳನ್ನು ಸುರಕ್ಷಿತವಾಗಿಡಿ.
1
1
45
Please mention the exact location and call 112 for emergency police assistance.
13
ಪೊಲೀಸ್ ಸ್ಮರಣಾ ದಿನ – ಅಕ್ಟೋಬರ್ 21 🇮🇳 ದೇಶದ ಜನರ ಸುರಕ್ಷತೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಾ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗ ಮಾಡಿದ ವೀರ ಪೊಲೀಸ್ ಹುತಾತ್ಮರಿಗೆ ನಮ್ಮ ಹೃದಯಪೂರ್ವಕ ನಮನಗಳು. ಪೊಲೀಸ್ ಹುತಾತ್ಮರ ಧೈರ್ಯ, ತ್ಯಾಗ ಮತ್ತು ಸೇವೆ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿರಲಿ. ವೀರ ಹುತಾತ್ಮರಿಗೆ ಶತಶತ ನಮನಗಳು.
101
ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! 🌺🙏 ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದುಷ್ಟಶಕ್ತಿಯ ವಿರುದ್ಧ ಶಿಷ್ಟಶಕ್ತಿಯ ವಿಜಯವನ್ನು ಸಾರುವ ಈ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ. ಎಲ್ಲರಿಗೂ ಶುಭವಾಗಲಿ, ಸರ್ವರಿಗೂ ಒಳಿತಾಗಲಿ. 💐✨
1
139
ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್‌ಗಳನ್ನು KSP E-Lost ಹಾಗೂ CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಇಂದು ವಾರಸುದಾರರಿಗೆ ಹಿಂತಿರುಗಿಸಲಾಯಿತು. @DCP_ECITY @BlrCityPolice @ableecitybcp
2
3
141
ಈ ದಿನ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಜಗದೀಶ್ ಆರ್ ಅವರ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯಲ್ಲಿರುವ ಮೆಡಿಕಲ್ ಶಾಪ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಔಷಧಿಗಳ ದುರುಪಯೋಗ ತಡೆಗಟ್ಟುವುದು ಹಾಗೂ ನಿಯಮಾನುಸಾರ ಔಷಧಿಗಳ ಮಾರಾಟ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು.
1
1
65
Please visit the Office of the Deputy Commissioner of Police, Electronic City Division, located in Hebbagodi, to share your grievances
1
64
ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಯ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು. ಅಪರಿಚಿತ ವ್ಯಕ್ತಿಗಳು ಯಾವುದೇ ವೇಷದಲ್ಲಿ ಬಂದರೂ ಅವರ ವರ್ತನೆಯ ಬಗ್ಗೆ ಗಮನವಿರಲಿ. ಮಕ್ಕಳನ್ನು ಅಪರಿಚಿತರೊಂದಿಗೆ ಒಂಟಿಯಾಗಿ ಬಿಡಬೇಡಿ ಹಾಗೂ ಅಪರಿಚಿತರು ನೀಡುವ ಆಹಾರ, ಉಡುಗೊರೆ ಅಥವಾ ಆಮಿಷಗಳಿಗೆ ಮರುಳಾಗದಂತೆ ಮಕ್ಕಳಿಗೆ ತಿಳಿಸಿ. ಮಹಿಳೆಯರು ಅಪರಿಚಿತರಿಂದ ಅನುಚಿತ ವರ್ತನೆ ಎದುರಾದಲ್ಲಿ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಸಹಾಯ ಪಡೆಯಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ತುರ್ತು ಪರಿಸ್ಥಿತಿಯಲ್ಲಿ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ. ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ – ಸಾರ್ವಜನಿಕರ ಸಹಕಾರ ನಮ್ಮ ಶಕ್ತಿ.
2
1
112
ಇತ್ತೀಚಿನ ದಿನಗಳಲ್ಲಿ ಕಳ್ಳರು ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು, ಮದುವೆಯ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಮನೆಯ ಬಾಗಿಲು ತೆರೆಯಿಸಿ ಒಳನುಗ್ಗಿ ಕಳ್ಳತನ ಮಾಡುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಅಪರಿಚಿತರು ಮನೆಗೆ ಬಂದಾಗ ಅವರ ಗುರುತು ಮತ್ತು ಉದ್ದೇಶವನ್ನು ಖಚಿತಪಡಿಸಿಕೊಳ್ಳಿ. ಮನೆಯ ಬಾಗಿಲನ್ನು ತಕ್ಷಣ ತೆರೆಯದೆ ಜಾಗರೂಕರಾಗಿರಿ. ಮನೆಯ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಎಚ್ಚರಿಕೆಯೇ ನಿಮ್ಮ ಮನೆಯ ಸುರಕ್ಷತೆ. ಜಾಗೃತರಾಗಿರಿ, ಸುರಕ್ಷಿತವಾಗಿರಿ.
1
119
▶️ಪಬ್‌ಗಳು, ಅಪ್ರಾಪ್ತ ವಯಸ್ಕರು ಹಾಗೂ ರೌಡಿ ಶೀಟರ್‌ಗಳ ತಪಾಸಣೆ◀️ ಈ ದಿನ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಜಗದೀಶ್ ಆರ್. ಅವರ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯಲ್ಲಿರುವ ಪಬ್‌ಗಳಲ್ಲಿ ತಪಾಸಣೆ, ರೌಡಿ ಶೀಟರ್‌ಗಳ ಚಟುವಟಿಕೆಗಳ ಮೇಲೂ ನಿಗಾ ವಹಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರಿಶೀಲನೆ ಕೈಗೊಳ್ಳಲಾಯಿತು.
1
1
52