Pinned Tweet
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes!
An incredible story of a people’s movement: 1.5 crore trees planted, raising forest cover from just 0.17% to 2%.
A true testament to political will, systemic action & the power of collective participation.
Proud that Vijayapura’s green success is inspiring the world!
My heartfelt thanks to all the stakeholders and the people of Vijayapura.
nytimes.com/card/2025/09/02/…
ನಾಡಿನ ನೆಲ-ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸಮಾಜವಾದಿ ಚಿಂತಕ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಹಾಗೂ ಕೃಷಿ ಕಾರ್ಮಿಕರು, ರೈತರು ಮತ್ತು ಗ್ರಾಮೀಣ ಜನತೆಯ ಏಳಿಗೆಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಜನ್ಮದಿನದಂದು ಗೌರವದ ನಮನಗಳು.
ಆಶ್ರಯ, ಆರಾಧನಾ, ಅಕ್ಷಯ ಸೇರಿದಂತೆ ಹಲವು ಜನಪರ ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅನನ್ಯ. ಅವರ ಜನಪರ ಚಿಂತನೆಗಳು ಹಾಗೂ ಸಮಾಜಮುಖಿ ಕಾರ್ಯಗಳು ಸದಾ ಸ್ಮರಣೀಯ.
#Bangarappa
ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಚಿಂತನೆಗಳು
ನಮ್ಮ ಹಿಂದಿನ ಪೀಳಿಗೆಗೆ ಹೋಲಿಸಿದರೆ ಇಂದಿನ ಪೀಳಿಗೆ ಸಾಕಷ್ಟು ಬದಲಾಗಿದೆ. ಇಂದಿನ ಪೀಳಿಗೆಗೆ ಹೋಲಿಸಿದರೆ ಮುಂದಿನ ಪೀಳಿಗೆ ಮತ್ತಷ್ಟು ಬದಲಾವಣೆಗಳಿಗೆ ತೆರೆದುಕೊಳ್ಳುವುದು ಸಹಜ. ಆದರೆ, ಮುಂದಿನ ಪೀಳಿಗೆಯವರು ಎಲ್ಲವನ್ನೂ ಬಿಟ್ಟುಬಿಟ್ಟಿದ್ದಾರೆ ಎಂದು ಇಂದಿನ ಹಿರಿಯರು ಬೇಸರಿಸಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಬದಲಾವಣೆ ಎಂಬುದು ಜಗದ ನಿಯಮ!
#SiddeshwaraSwamiji
ಆದಿಕವಿ ವಾಲ್ಮೀಕಿ ಮಹರ್ಷಿಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ, ನಾಡಿನ ಸಮಸ್ತ ಜನತೆಗೆ #ವಾಲ್ಮೀಕಿಜಯಂತಿ ಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಅವರು ರಚಿಸಿದ ‘ರಾಮಾಯಣ’ ಜಗತ್ತಿನ ಮೊಟ್ಟಮೊದಲ ಮಹಾಕಾವ್ಯವಾಗಿದ್ದು, ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಅಮರ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ.
ವಾಲ್ಮೀಕಿ ಮಹರ್ಷಿಗಳ ತಪೋಬಲ, ಜ್ಞಾನ ಮತ್ತು ಬೋಧನೆಗಳು ನಮ್ಮೆಲ್ಲರ ಬದುಕಿಗೆ ಸದಾ ದಾರಿದೀಪವಾಗಲಿ.
#ValmikiJayanti #ಮಹರ್ಷಿವಾಲ್ಮೀಕಿ
ಬಸವಕಲ್ಯಾಣದ ಭಾಲ್ಕಿ ಶಾಖಾ ಮಠಕ್ಕೆ ಭೇಟಿ ನೀಡಿ, ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮಹಾಸ್ವಾಮಿಗಳು ಹಾಗೂ ಇಳಕಲ್ಲ ಚಿತ್ತರಗಿ ಮಠದ ಪೂಜ್ಯ ಗುರುಮಹಾಂತ ಶ್ರೀಗಳನ್ನು ಭೇಟಿಯಾಗಿ, ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡೆ.
ಕೆಲಕಾಲ ಶ್ರೀಮಠದಲ್ಲಿ ಪೂಜ್ಯ ಗುರುಗಳ ಸಾನ್ನಿಧ್ಯದಲ್ಲಿದ್ದು, ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚಿಸಿದೆ.
ಬಸವಾದಿ ಶರಣರು ಸಾರಿದ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಬಸವಣ್ಣನವರ ದೂರದೃಷ್ಟಿಯ ಚಿಂತನೆಗಳ ಫಲವಾಗಿ ರೂಪುಗೊಂಡ ಅನುಭವ ಮಂಟಪವು ಮುಕ್ತ ಚರ್ಚೆ, ವಿಚಾರ ವಿನಿಮಯ ಮತ್ತು ಸಮಾನತೆಯ ತತ್ವಗಳಿಗೆ ವೇದಿಕೆಯಾಗಿ, ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಪ್ರಸಿದ್ಧಿ ಪಡೆದಿದೆ.
ಇಂದು ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪಕ್ಕೆ ಭೇಟಿ ನೀಡಿ, ಈ ಐತಿಹಾಸಿಕ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ವೀಕ್ಷಿಸಿದೆ.
#ಅನುಭವಮಂಟಪ
ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಸಾರುವ ‘ಕಲ್ಯಾಣ ಪರ್ವ’ ರಜತ ಮಹೋತ್ಸವದಲ್ಲಿ ಭಾಗಿ!
ವಿಶ್ವಗುರು ಬಸವಣ್ಣನವರ ವಿಚಾರಧಾರೆ, ಶರಣರ ವಚನ ಸಾಹಿತ್ಯ ಹಾಗೂ ಸಮಾನತೆಯ ಆಶಯಗಳಿಗೆ ಸಾಕ್ಷಿಯಾದ ಐತಿಹಾಸಿಕ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ ಕಲ್ಯಾಣ ಪರ್ವದ ರಜತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಸಂತಸ ತರಿಸಿತು.
ಲಿಂಗೈಕ್ಯ ಡಾ. ಮಾತೆ ಮಹಾದೇವಿಯವರ ನೇತೃತ್ವದಲ್ಲಿ 2001ರಲ್ಲಿ ಆರಂಭವಾದ ಕಲ್ಯಾಣ ಪರ್ವವು 25ನೇ ವರ್ಷಕ್ಕೆ ಕಾಲಿಟ್ಟು ರಜತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ.
ಜಾತಿ, ವರ್ಗ, ಲಿಂಗದ ಭೇದಗಳನ್ನು ಮೀರಿ ಎಲ್ಲರಿಗೂ ಸಮಾನ ಗೌರವ, ಕಾಯಕಕ್ಕೆ ಘನತೆ ಹಾಗೂ ದಾಸೋಹದ ಮೂಲಕ ಸಮಾಜದ ಒಳಿತನ್ನು ಸಾರಿದ ಬಸವಣ್ಣನವರ ಕ್ರಾಂತಿಕಾರಿ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ.
12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ, ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಮುನ್ನಡೆದ ಅನುಭವ ಮಂಟಪವು ಎಲ್ಲ ವರ್ಗಗಳ ಜನರ ಆಶೋತ್ತರಗಳಿಗೆ ಧ್ವನಿಯಾದ ವೈಚಾರಿಕ ವೇದಿಕೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮುಕ್ತ ಚಿಂತನೆಯ ಆಶಯಗಳಿಗೆ ಭದ್ರ ಬುನಾದಿ ಹಾಕಿದ ಶರಣರ ಈ ಪರಂಪರೆ ಇಂದಿಗೂ ನಮಗೆ ದಾರಿದೀಪವಾಗಿದೆ.
ಬಸವಣ್ಣನವರ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ, ಮುಂದಿನ ಪೀಳಿಗೆಗೂ ಈ ಮಹಾನ್ ಪರಂಪರೆಯನ್ನು ಪರಿಚಯಿಸಿ, ಸಮಾನತೆ ಮತ್ತು ಸಹಬಾಳ್ವೆಯ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಹೊಣೆಗಾರಿಕೆ.
ಮ.ನಿ. ಪ್ರ. ಮಹಾಜಗದ್ಗುರು ಡಾ. ಗಂಗಾಮಾತೆ, ಪರಮಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ವಿಧಾನಪರಿಷತ್ತಿನ ಸದಸ್ಯರುಗಳು, ಹಾಲಿ ಹಾಗೂ ಮಾಜಿ ಶಾಸಕರುಗಳು ಸ್ಥಳೀಯ ಮುಖಂಡರು, ಶರಣ ಬಂಧುಗಳು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಸವಭಕ್ತರು ಉಪಸ್ಥಿತರಿದ್ದು, ಸಮಾರಂಭದ ಮೆರಗು ಹೆಚ್ಚಿಸಿದರು.
ಬಸವ ತತ್ವವೇ ಬದುಕಿನ ಬೆಳಕು; ಸಮಾನತೆಯ ಸಮಾಜವೇ ನಮ್ಮ ಸಂಕಲ್ಪ!
Investment to Impact. Proposals to Reality
Poddar’s ₹1,000 crore pipe manufacturing unit in Vemagal, Kolar, inaugurated in just over a year from approval, is a testament to Karnataka’s commitment to turning investment proposals into action.
With 3,000+ direct jobs and 60% local workforce, this project strengthens regional growth and creates meaningful opportunities for our people.
My congratulations to the Poddar family and the entire team for the swift execution of this project. Thank you for partnering with Karnataka's growth journey and contributing to industrial progress and job creation.
#PoddarPipes
ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಘಟಕಕ್ಕೆ ಚಾಲನೆ
ಹೂಡಿಕೆ ಪ್ರಸ್ತಾವನೆಗಳು ಕೇವಲ ಕಾಗದದ ಮೇಲಿನ ಒಪ್ಪಂದಗಳಾಗದೆ, ಕೈಗಾರಿಕೆಗಳಾಗಿ ರೂಪುಗೊಂಡು ಉದ್ಯೋಗ ಸೃಷ್ಟಿಸಬೇಕು ಎಂಬುದೇ ನಮ್ಮ ಸಂಕಲ್ಪ!
₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಘಟಕವು ಮಾತುಕತೆಯಿಂದ ಕಾರ್ಯರೂಪಕ್ಕೆ ಬಂದಿರುವುದು ನಮ್ಮ ಬದ್ಧತೆಗೆ ಸಾಕ್ಷಿ.
ಹೂಡಿಕೆಗಳಿಗೆ ವೇಗ, ಕೈಗಾರಿಕೆಗಳಿಗೆ ಉತ್ತೇಜನ, ಯುವಜನತೆಗೆ ಉದ್ಯೋಗ-ಇದೇ ನಮ್ಮ ಆದ್ಯತೆ!
#PoddarPipes
Poddar’s ₹1,000 Crore Eco-Friendly Plumbing Pipe Facility Inaugurated: 3,000 Direct Jobs
Inaugurated Poddar Plumbing Systems’ new facility at Vemgal Industrial Area in Kolar district. This ₹1,000 crore investment will create 3,000 direct jobs, strengthen the local economy and manufacture quality plumbing pipes for domestic and export markets.
Our government allotted land for the project on February 24, 2025, handed over the site in April and laid the foundation stone in July. Its inauguration in October 2026 demonstrates our commitment to helping investments move swiftly from approval to operations.
Vemgal is emerging as a major manufacturing hub, with companies such as Krones, Airbus, Poland’s TZMO and M Zero establishing their presence. Poddar’s facility adds further momentum to this growth.
The facility will also house a skill training centre. I urged the company to prioritize employment for members of land-losing families and ensure that local residents account for at least 60% of its workforce.
I congratulate Chairman Shri Deepak Poddar, CEO Shri Varun Poddar, their family and the entire team on this milestone.
Our commitment remains firm: investment agreements must translate into industries, jobs and opportunities for our people.
#PoddarPipes
₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ
ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ!
2025ರಲ್ಲಿ ಪ್ರಸ್ತಾವನೆಗೆ ಅನುಮೋದನೆ: 2026ರ ಅಕ್ಟೋಬರ್ ನಲ್ಲಿ ಉದ್ಘಾಟನೆ!
3,000 ನೇರ ಉದ್ಯೋಗಗಳ ಸೃಷ್ಟಿ| ಸ್ಥಳೀಯ ಆರ್ಥಿಕತೆಗೆ ಬಲ
ವೇಮಗಲ್ (ಕೋಲಾರ ಜಿಲ್ಲೆ): ಇಲ್ಲಿನ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ಸ್ ಉದ್ಯಮ ಸಮೂಹವು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಪರಿಸರ ಸ್ನೇಹಿ ಕಾರ್ಖಾನೆಯನ್ನು ಉದ್ಘಾಟಿಸಿ, ಸಂಸ್ಥೆಯ ಅಧ್ಯಕ್ಷರು ಹಾಗೂ ಘಟಕ ಸ್ಥಾಪಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದೆ.
ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪೊದ್ದಾರ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿ, 2025ರ ಫೆಬ್ರವರಿ 24ರಂದು ಜಾಗ ಹಂಚಿಕೆ ಮಾಡಿದೆವು. ಅದೇ ವರ್ಷದ ಏಪ್ರಿಲ್ ನಲ್ಲಿ ನಿವೇಶನ ಹಸ್ತಾಂತರ, ಜುಲೈನಲ್ಲಿ ಶಂಕುಸ್ಥಾಪನೆ ಮಾಡಿದೆವು. ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಈ ಸಂಕೀರ್ಣ ಕಾರ್ಯಾರಂಭ ಮಾಡಿದೆ. ಇದು ನಮ್ಮ ಕೈಗಾರಿಕಾಸ್ನೇಹಿ ನೀತಿಗೆ ಉದಾಹರಣೆಯಾಗಿದ್ದು ಇಲ್ಲಿ 3 ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ.
ಕಳೆದ ಒಂದೆರಡು ವರ್ಷಗಳಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕ್ರೋನ್ಸ್ ಬಾಟ್ಲಿಂಗ್ ಘಟಕ, ಎಚ್-125 ಮಾದರಿಯ ಹೆಲಿಕಾಪ್ಟರ್ ತಯಾರಿಸುವ ಏರ್ ಬಸ್ ಘಟಕ, ಪೋಲೆಂಡ್ ಮೂಲದ ಟಿಜೆಡ್ಎಂಒ ಉದ್ಯಮ, ಎಮ್ ಝೀರೋ ಕಂಪನಿ ಮುಂತಾದವು ತಮ್ಮ ತಯಾರಿಕಾ ಚಟುವಟಿಕೆ ಆರಂಭಿಸಿವೆ. ಪೊದ್ದಾರ್ ಸಮೂಹದ ಸ್ಥಾವರದಲ್ಲಿ ತಯಾರಿಸುವಂತಹ ಪೈಪ್ ಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುವುದು. ಇದು ನಮ್ಮ ನೂತನ ಕೈಗಾರಿಕಾ ನೀತಿಗೆ ಪೂರಕವಾಗಿದೆ.
ಈ ಘಟಕದಲ್ಲಿ ಕೌಶಲ್ಯ ತರಬೇತಿ ಕೇಂದ್ರವೂ ಇರಲಿದೆ. ಕಂಪನಿಯ ಮಾಲೀಕರು ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಆದ್ಯತೆಯ ಮೇಲೆ ಉದ್ಯೋಗ ಕೊಡಬೇಕು. ಒಟ್ಟಾರೆಯಾಗಿ ಕನಿಷ್ಠ ಶೇ.60ರಷ್ಟು ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು.
ಪೊದ್ದಾರ್ ಕಂಪನಿಯು ಪ್ಲಂಬಿಂಗ್ ಮತ್ತಿತರ ಚಟುವಟಿಕೆಗಳಿಗೆ ಬೇಕಾದ ಗುಣಮಟ್ಟದ ಪೈಪುಗಳನ್ನು ತಯಾರಿಸಲಿದೆ. ಪೊದ್ದಾರ್ ಕುಟುಂಬಸ್ಥರು ಆಶೀರ್ವಾದ್ ಪೈಪ್ ಸ್ಥಾಪಕರು ಕೂಡ. ಆಶೀರ್ವಾದ್ ನಿಂದ ಹೊರ ಬಂದಿರುವ ಅವರು 8 ವರ್ಷಗಳ ಬಳಿಕ ತಮ್ಮ ಕುಟುಂಬವಾಗಿರುವ ಪೊದ್ದಾರ್ ಹೆಸರಿನಲ್ಲೇ ಹೊಸ ಬ್ರ್ಯಾಂಡ್ ಆರಂಭಿಸಿರುವುದು ಉತ್ತಮ ಪ್ರಯತ್ನ.
ಇಂದಿನ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದೀಪಕ್ ಪೊದ್ದಾರ್, ಸಿಇಒ ಅವರಾದ ಶ್ರೀ ವರುಣ್ ಪೊದ್ದಾರ್ ಹಾಗೂ ಅವರ ಪರಿವಾರದ ಸದಸ್ಯರು, ಕೋಲಾರ ಶಾಸಕರಾದ ಶ್ರೀ ಕೊತ್ತನೂರು ಮಂಜುನಾಥ್, ಮಾಜಿ ಉಪ ಸಭಾಪತಿಯವರಾದ ಶ್ರೀವಿ.ಆರ್. ಸುದರ್ಶನ್, ಸ್ಥಳೀಯ ಮುಖಂಡರು ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.
ಹೂಡಿಕೆ ಒಪ್ಪಂದಗಳು ಕೇವಲ ಕಾಗದಕ್ಕೆ ಸೀಮಿತವಾಗದೆ, ಕಾರ್ಯರೂಪಕ್ಕೆ ಬರುವಂತೆ ಮಾಡುವ ನಮ್ಮ ಬದ್ಧತೆ ಅಚಲ!
#PoddarPipes
Facebook
ಕರ್ನಾಟಕ–ಜಪಾನ್ ಕೈಗಾರಿಕಾ ಬಾಂಧವ್ಯಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಕಾಗೋಶಿಮಾ ಪ್ರಾಂತ್ಯದ ಗವರ್ನರ್ ಅವರೊಂದಿಗೆ ಚರ್ಚೆ!
ಜಪಾನ್ ನ ಕಾಗೋಶಿಮಾ ಪ್ರಾಂತ್ಯದ ಗವರ್ನರ್ ಶ್ರೀ ಕೊಯಿಚಿ ಶಿಯೋತಾ ಹಾಗೂ ಜಪಾನ್ನ ಕಾನ್ಸುಲ್ ಜನರಲ್ ಶ್ರೀ ಹಿರೋಷಿ ನವಾಟಾ ಅವರೊಂದಿಗೆ ನಡೆದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದೆ.
ಈ ಸಂದರ್ಭದಲ್ಲಿ ಮಾತನಾಡುತ್ತಾ, ಕರ್ನಾಟಕ ಮತ್ತು ಜಪಾನ್ ನಡುವಿನ ಬಾಂಧವ್ಯಕ್ಕೆ ಹಲವು ದಶಕಗಳ ಇತಿಹಾಸವಿದೆ. ಟೊಯೊಟಾ, ನಿಡೆಕ್, ಹೋಂಡಾ, ಹಿಟಾಚಿ ಸೇರಿದಂತೆ ಜಪಾನ್ ನ ಅನೇಕ ಪ್ರಮುಖ ಕಂಪನಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂಬುದನ್ನು ವಿವರಿಸಿದೆ.
ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ರೊಬೋಟಿಕ್ಸ್ ಹಾಗೂ ಕೈಗಾರಿಕಾ ಸ್ವಯಂಚಾಲನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಲಭ್ಯವಿರುವ ವಿಫುಲ ಅವಕಾಶಗಳು, ಕೈಗಾರಿಕೆಗಳಿಗೆ ಪೂರಕವಾದ ಮೂಲಸೌಕರ್ಯ ಹಾಗೂ ರಾಜ್ಯದ ಹೂಡಿಕೆ ಸ್ನೇಹಿ ವಾತಾವರಣದ ಕುರಿತು ಮಾಹಿತಿ ಹಂಚಿಕೊಂಡೆ.
ಜಪಾನ್ ನ ಉದ್ಯಮಗಳೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸಿ, ನಾವೀನ್ಯತೆ, ತಂತ್ರಜ್ಞಾನ ವಿನಿಮಯ ಹಾಗೂ ಹೊಸ ಹೂಡಿಕೆಗಳ ಮೂಲಕ ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಆಶಯವನ್ನು ವ್ಯಕ್ತಪಡಿಸಿದೆ.
Strengthening Karnataka–Japan Industrial Ties
Had the pleasure of joining Mr. Kōichi Shiota, Hon’ble Governor of Kagoshima-Japan, and Mr. Hiroshi Nawata, Hon'ble Consul General of Japan, for a lunch meeting.
Our discussions focused on strengthening Karnataka’s longstanding industrial partnership with Japan. Leading Japanese companies, including Toyota, Nidec, Honda and Hitachi, have contributed significantly to our state’s industrial growth and employment generation.
I highlighted Karnataka’s investment opportunities in semiconductors, electronics, robotics and industrial automation, supported by robust infrastructure and an investor-friendly ecosystem.
We look forward to deepening cooperation in innovation, technology exchange and new investments to accelerate industrial growth and create more employment opportunities in Karnataka.
Women’s Basketball League Asia 2026 (FIBA WBLA-2026) ಟೂರ್ನಿಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳ ಗೌರವಾರ್ಥ ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಔತಣಕೂಟದಲ್ಲಿ, ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರೊಂದಿಗೆ ಪಾಲ್ಗೊಂಡಿದ್ದೆ.
ಭಾರತೀಯ ಬಾಸ್ಕೆಟ್ಬಾಲ್ ಫೆಡರೇಶನ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಫೆಡರೇಶನ್ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಟಿ. ಗುರುಮೂರ್ತಿ, ಫಿಬಾ ಏಷ್ಯಾ ಅಧ್ಯಕ್ಷರು- ವಿಧಾನಪರಿಷತ್ ಸದಸ್ಯರೂ ಆದ ಡಾ. ಗೋವಿಂದರಾಜು, ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ಕ್ರೀಡಾಪಟುಗಳ ಸಾಧನೆಗೆ ಪ್ರೋತ್ಸಾಹ ನೀಡುವುದು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಕ್ರೀಡಾ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಮಿಂಚಲಿ, ನಾಡಿನ ಕೀರ್ತಿ ಜಗತ್ತಿನಾದ್ಯಂತ ಬೆಳಗಲಿ!
#FIBA @CMofKarnataka @DKShivakumar @DrParameshwara @Iam_KGovindaraj @Raghumurthy_INC
ದೂರದೃಷ್ಟಿಯ ಆಡಳಿತಗಾರ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ಜನ್ಮದಿನದ ಗೌರವ ನಮನಗಳು!
ಮೈಸೂರು ಸಂಸ್ಥಾನದ ದಿವಾನರಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಸೇವೆ ಸಲ್ಲಿಸಿದ ಸರ್ ಮಿರ್ಜಾ ಇಸ್ಮಾಯಿಲ್ ಅವರು ರಾಜ್ಯದ ಕೈಗಾರಿಕೆ, ಮೂಲಸೌಕರ್ಯ ಹಾಗೂ ಜನಜೀವನದ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಭದ್ರಾವತಿಯ ಕಾಗದದ ಕಾರ್ಖಾನೆ, ಮಂಡ್ಯದ ಸಕ್ಕರೆ ಕಾರ್ಖಾನೆ, KRS ಉದ್ಯಾನದ ಅಭಿವೃದ್ಧಿ ಹಾಗೂ ಬೆಂಗಳೂರಿನ ನೀರು ಪೂರೈಕೆ ವ್ಯವಸ್ಥೆಯ ವಿಸ್ತರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ದೂರದೃಷ್ಟಿ ಮತ್ತು ಅಭಿವೃದ್ಧಿಪರ ಚಿಂತನೆಗಳು ಮೈಸೂರು ಸಂಸ್ಥಾನದ ಪ್ರಗತಿಗೆ ಭದ್ರ ಬುನಾದಿ ಹಾಕಿದವು.
ಮಾತೃಭಾಷೆ ಕನ್ನಡವಲ್ಲದಿದ್ದರೂ ಕನ್ನಡ ಭಾಷೆಯನ್ನು ಕಲಿತು, ಪದ್ಯಗಳನ್ನು ರಚಿಸುವಷ್ಟು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ಅವರು, ಕರ್ನಾಟಕ ಏಕೀಕರಣದ ಪರವಾಗಿಯೂ ತಮ್ಮ ಒಲವನ್ನು ವ್ಯಕ್ತಪಡಿಸಿದ್ದರು.
ಕೈಗಾರಿಕಾ ಪ್ರಗತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕನ್ನಡ ನಾಡು-ನುಡಿಯ ಮೇಲಿನ ಅಭಿಮಾನವನ್ನು ತಮ್ಮ ಕಾರ್ಯಗಳ ಮೂಲಕ ಪ್ರತಿಬಿಂಬಿಸಿದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಗಳು ಇಂದಿಗೂ ಸ್ಮರಣೀಯ.
#sirmirzaismail
ಹುಬ್ಬಳ್ಳಿ NGEF ಸಂಸ್ಥೆಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಮಹತ್ವದ ಸಭೆ!
ಬೆಂಗಳೂರಿನ ಖನಿಜ ಭವನದಲ್ಲಿ ಇಂದು ಹುಬ್ಬಳ್ಳಿ NGEF ಕಾರ್ಖಾನೆಯ ಆಡಳಿತ ಮಂಡಳಿ ಸಭೆ ನಡೆಸಿದೆ.
ವಿಶ್ವದರ್ಜೆಯ ಗುಣಮಟ್ಟ ಹಾಗೂ ದೀರ್ಘ ಬಾಳಿಕೆಗೆ ಹೆಸರುವಾಸಿಯಾದ ಟ್ರಾನ್ಸ್ಫಾರ್ಮರ್ಗಳ ಉತ್ಪಾದನೆಯಲ್ಲಿ ಗುರುತಿಸಿಕೊಂಡಿರುವ NGEF ಸಂಸ್ಥೆಯು ಕೈಗಾರಿಕಾ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ.
ಸಂಸ್ಥೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವುದು, ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದು ಹಾಗೂ ಭವಿಷ್ಯದ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು.
NGEF ಸಂಸ್ಥೆಯನ್ನು ಅಭಿವೃದ್ಧಿಯ ಹೊಸ ಪಥದತ್ತ ಮುನ್ನಡೆಸುವ ಮೂಲಕ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡುವ ಆಶಯ ಹೊಂದಲಾಗಿದೆ.
#NGEF
ಮುಖ್ಯಮಂತ್ರಿಗಳ ಗೃಹಕಚೇರಿ ‘ಕೃಷ್ಣಾ’ದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡುವ ಕುರಿತು ಇಂದು ನಡೆದ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರೊಂದಿಗೆ ಪಾಲ್ಗೊಂಡು, ಅರ್ಹ ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ ಅಗತ್ಯದ ಸಲಹೆಗಳನ್ನು ನೀಡಿದೆ.
ಸಭೆಯಲ್ಲಿ ಇಂಧನ ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಶಿವರಾಜ್ ಎಸ್. ತಂಗಡಗಿ, ಸಲಹಾ ಸಮಿತಿ ಸದಸ್ಯರಾದ ಶ್ರೀಮತಿ ಜಯಮಾಲಾ, ಶ್ರೀ ಎಸ್. ನಾರಾಯಣ್, ಶ್ರೀ ಸಾಧು ಕೋಕಿಲ, ಶ್ರೀ ಪುರುಷೋತ್ತಮ ಬಿಳಿಮಲೆ, ಶ್ರೀ ನಾಗರಾಜ್ ಮೂರ್ತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
@CMofKarnataka @DKShivakumar @DrParameshwara @thekjgeorge @sstangadagi



























































