Yasir Hasan (@yhpfi) profile picture
Karnataka, India
Joined July 2013
Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)Photo by Yasir Hasan (@yhpfi)
#SaveAtikurLife ಅತೀಕುರ್ರಹ್ಮಾನ್, ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಪರವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಯೋಗಿ ಸರಕಾರದಿಂದ ಕರಾಳ #UAPA ಸುಳ್ಳು ಪ್ರಕರಣದಲ್ಲಿ ಸಿಲುಕಿಸಲ್ಪಟ್ಟ ವಿದ್ಯಾರ್ಥಿ ನಾಯಕ. ಗಂಭೀರ ಹೃದಯ ಕಾಯಿಲೆಯಿಂದ ಬಳಲು ತ್ತಿದ್ದರೂ #styanswamy ಯಂತೆ ಸತತವಾಗಿ ಜಾಮೀನು ನಿರಾಕರಿಸಲ್ಪಡುತ್ತಿರುವ ಅಮಾಯಕ.
ಹಿಜಾಬ್ ಗೆ ನಿರಾಕರಣೆ-ಗಣೇಶೋತ್ಸವಕ್ಕೆ ಅವಕಾಶ. ಶಾಲಾ-ಕಾಲೇಜುಗಳಲ್ಲಿ ಈ ರೀತಿ ತಾರತಮ್ಯ ಮಾಡಲು ಫ್ಯಾಶಿಸ್ಟ್ ಮನೋಸ್ಥಿತಿಯ ಸಚಿವರಿಂದ ಮಾತ್ರ ಸಾಧ್ಯ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳ ಮನದಲ್ಲಿ ವಿಷ ಬಿತ್ತುವ ಇಂತಹ ಶಿಕ್ಷಣ ಸಚಿವರು ಶಿಕ್ಷಣ ವ್ಯವಸ್ಥೆಗೆ ಮಾರಕ. ಪೋಷಕ ವರ್ಗ ಇಂತಹ ಮನೋಸ್ಥಿತಿಗಳ ಬಗ್ಗೆ ಜಾಗೃತವಾಗಬೇಕು. #ResignBCNagesh
Karnataka Education Minister says "Ganesh Utsav" OK "#Hijab" Not OK! Permission has been granted to perform Ganesh Utsav in govt schools by Karnataka govt. Isn't this contempt of court? No uniformity? Media awake?
6
337
344
ಸರ್ವರಿಗೂ ಸಮಾನ ನ್ಯಾಯ, ಸಮಾನ ಹಕ್ಕುಗಳು, ನಿರ್ಭೀತಿಯ ಬದುಕು ದೊರಕಿಸುವುದೇ ಸ್ವಾತಂತ್ರ್ಯದ ಪರಿಕಲ್ಪನೆ. 75ರ ಸಂಭ್ರಮದಲ್ಲಿರುವ ಭಾರತ ಸಿಂಹಾವಲೋಕನ ನಡೆಸುವ ಅಗತ್ಯವಿದೆ. ಕ್ರಮಿಸಿದ ದೂರ ಬಹಳಷ್ಟು, ಸಾಧಿಸಿರುವುದು ಅತ್ಯಲ್ಪ. ಸ್ವಾತಂತ್ರ್ಯದ ಪರಿಕಲ್ಪನೆಯ ಸಾಕಾರದತ್ತ ನಮ್ಮ ಪ್ರಯತ್ನ ನಿರಂತರವಾಗಿರಲಿ. #SaveTheRepublic #IndiaAt75
2
91
1
182
ಜಿ.ರಾಜಶೇಖರ್ ಹೋರಾಟಗಾರರು ಮಾತ್ರವಲ್ಲ ಅವರೋರ್ವ ಸತ್ಯದ ವಕ್ತಾರರಾಗಿದ್ದರು. ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿದ್ದ ಅವರು, ಸದಾ ದಮನಿತರ ಪರವಾಗಿ ಧ್ವನಿ ಎತ್ತಿದರು. ದೇಶಕ್ಕೆ ಮಾರಕವಾದ ಹಿಂದುತ್ವ ಫ್ಯಾಶಿಸಂ ಅನ್ನು ಪರಿಚಯಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನ್ಯಾಯ, ಸಮಾನತೆಯ ಭಾರತದ ಕನಸಿನ ಸಾಕಾರಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ.
217
1
288
ಬಹುಕೋಟಿ ಬಂಡವಾಳ ಹೂಡಿರುವ ಲಕ್ನೋದ ಲುಲು ಮಾಲ್ ಸಂಘಪರಿವಾರದ ಬೆದರಿಕೆಗೆ ಒಳಗಾಗಿದೆ. ದ್ವೇಷ ತುಂಬಿದ ಹಿಂದುತ್ವ ಮತ್ತು ರಾಜ್ಯದ ಅಭಿವೃದ್ಧಿಯನ್ನು ಜೊತೆಯಾಗಿ ಕೊಂಡೊಯ್ಯುವುದು ಖಂಡಿತಾ ಅಸಾಧ್ಯ. ಸಂಘಪರಿವಾರದ ಅಶಾಂತಿ ಹರಡುವ ಇಂತಹ ಕೃತ್ಯಗಳು ಹೂಡಿಕೆದಾರರನ್ನು ತಡೆದು ದೇಶದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮವನ್ನಷ್ಟೇ ಉಂಟು ಮಾಡುತ್ತವೆ.
365
1
389
NIA, EDಯಂತಹ ತನಿಖಾ ಏಜೆನ್ಸಿಗಳನ್ನು ಛೂ ಬಿಟ್ಟು PFIಯನ್ನು ದಮನಿಸುವ ಪ್ರಯತ್ನ ನಿರಂತರವಾಗಿ ನಡೆಸಲಾಯಿತು. ಆದರೆ ಕಾನೂನುಬದ್ಧವಾಗಿ ಕಾರ್ಯಾಚರಿಸುತ್ತಿರುವ PFI ವಿರುದ್ಧ ಈವರೆಗೆ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗಿಲ್ಲ. ಈಗ ಬಿಹಾರ ಪೊಲೀಸರ RSS ಪ್ರಾಯೋಜಿತ ಷಡ್ಯಂತ್ರವೂ ಇದೇ ರೀತಿ ವಿಫಲವಾಗಲಿದೆ. #BiharPoliceKaJhoot #IndiaWithPFI
29
505
2
557
Continued existence of Crony Capitalists like Pai is an indication of utter failure of Indian state. "Indian state" is weak in dealing with PFI, because PFI has done nothing Contrary to Law. Presence of PFI affirms Rule of Law.
Continued existence of PFI is indication of utter failure of Indian state.Very inclusive!Why is Indian state so weak in dealing with such radical violent entities?Why is the Rule of law so weak? Why is Justice so delayed,so ineffective? ⁦@AmitShah⁩ firstpost.com/opinion/contin…
2
218
2
246
ಈಡಿ – ಐಟಿ ಸ್ವತಂತ್ರ ಸಂಸ್ಥೆಗಳು RSS -ಬಿಜೆಪಿಯ ಪಂಜರದ ಗಿಣಿಯಾಗಿ ಮಾರ್ಪಟ್ಟಿರುವುದು ಈಗ ಗುಟ್ಟಾಗಿ ಉಳಿದಿಲ್ಲ. #RSSನ್ನು ಪ್ರಬಲವಾಗಿ ಎದುರಿಸುತ್ತಿರುವ #PFIಯನ್ನು ಗುರಿಪಡಿಸಿ ಈಡಿ ಕಾರ್ಯಾಚರಿಸುತ್ತಿದೆ. ಈ ದಾಳಿಗಳು #RSSನ್ನು ವಿರೋಧಿಸಿದ ಕಾರಣಕ್ಕೆಂದಾದರೆ ಅದು ಇನ್ನಷ್ಟು ತೀಕ್ಷ್ಣವಾಗಿ ಮುಂದುವರೆಯುತ್ತದೆ. #PFIJhukegaNahi
6
342
5
431
ತಾಜ್ ಮಹಲ್ ಬಗ್ಗೆ ಅಲಹಾಬಾದ್ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಹಸಿ ಸುಳ್ಳು,ಕಟ್ಟು ಕಥೆ,ಕಲ್ಪನೆಗಳ ಆಧಾರದ ದೂರುಗಳನ್ನು ಕೋರ್ಟ್ ಗಳು ವಿಚಾರಣೆಗೆ ಪರಿಗಣಿಸುತ್ತಿರುವುದು ಆತಂಕಕಾರಿಯಾಗಿದೆ. ಬಾಬರಿ ಮಸೀದಿಯಲ್ಲಿ ರಾತ್ರೋ ರಾತ್ರಿ ಮೂರ್ತಿ ಇಟ್ಟವರಿಗೆ ತಾಜ್ ಮಹಲ್ ನ 20 ಕೋಣೆಗಳ ರಹಸ್ಯ ಭೇದಿಸುವ ನೆಪದಲ್ಲಿ ಮೂರ್ತಿ ಇಡುವುದು ಕಷ್ಟದ ಕೆಲಸವಲ್ಲ
1
197
3
263
ಕಾರ್ಯಕರ್ತರನ್ನು ಹತ್ಯೆಗೈಯ್ಯುವ ಮೂಲಕ PFI ಅನ್ನು ಹೋರಾಟ ರಂಗದಿಂದ ಹಿಂದೆ ಸರಿಸಬಹುದು ಎಂದು RSS ಭಾವಿಸಿದಂತಿದೆ. ಒಂದು ವೇಳೆ ಅಂತಹ ಕನಸನ್ನು ಕಾಣುತ್ತಿದ್ದರೆ, ಅದು ಕನಸಾಗಿಯೇ ಉಳಿಯಲಿದೆ. ತ್ಯಾಗ, ಸಮರ್ಪಣೆ ಇಲ್ಲದೇ ಹೋರಾಟ ದಡ ಮುಟ್ಟಲಾರದು. ಹಾಗೆಯೇ ಹೋರಾಟದ ಹಾದಿಯಲ್ಲಿ ಹರಿದ ಹುತ್ತಾತ್ಮರ ರಕ್ತವೂ ವ್ಯರ್ಥವಾಗಲಾರದು. #RSSTerrorism
20
465
4
627
40% ಹಗರಣದ ಗುರುತರ ಆರೋಪ ಹೊಂದಿರುವ BJP, ತನ್ನದು ಭ್ರಷ್ಟ ಜನರ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಹಿಂದೆ 40% ಗಂಭೀರ ಆರೋಪ ಕೇಳಿ ಬಂದಾಗಲೇ ಭ್ರಷ್ಟರ ವಿರುದ್ಧ ಸಮರ್ಪಕ ತನಿಖೆ ನಡೆಸಿದ್ದರೆ ಈಗ ಒಂದು ಸಾವನ್ನಾದರೂ ತಡೆಯಬಹುದಿತ್ತು. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಒಟ್ಟು ಸರಕಾರವೇ ಹೊಣೆ. #EshwarappaMustResign
9
475
4
562
ಮುಸ್ಲಿಂ ವಿರೋಧಿ ಭಾವನೆ ಕೆರಳಿಸುತ್ತಾ ಕರ್ನಾಟಕದಲ್ಲಿ ಕೋಮು ದ್ವೇಷ ಹರಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ದಿನೇ ದಿನೇ‌ ಹದಗೆಡುತ್ತಿದ್ದರೂ ಸರಕಾರ ನಿಷ್ಕ್ರಿಯವಾಗಿದೆ. ರಾಜ್ಯದ ಗೃಹ ಸಚಿವರೂ ಸುಳ್ಳು ಹೇಳಿಕೆ ನೀಡುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ನ್ಯಾಯಾಂಗ ಕೂಡಲೇ ಮಧ್ಯಪ್ರವೇಶಿಸಿ ಅರಾಜಕ ಸ್ಥಿತಿಗೆ ಕಡಿವಾಣ ಹಾಕಬೇಕು.
11
600
2
694
ಸತ್ಯ, ನ್ಯಾಯದ ಮತ್ತೊಂದು ಹೆಸರೇ ಶಹೀದ್ ನೌಶಾದ್ ಖಾಶಿಂಜಿ. ದಮನಿತರ ಧ್ವನಿಯಾಗಿದ್ದ ಅವರು, ಹಿಂದುತ್ವ ಫ್ಯಾಶಿಸ್ಟರು ಮತ್ತು ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಸದಾ ಸಿಂಹಸ್ವಪ್ನವಾಗಿದ್ದರು. ಅಡ್ವೊಕೇಟ್ ಖಾಶಿಂಜಿ ಅವರು ಧೂರ್ತರ ಗುಂಡೇಟಿಗೆ ಬಲಿಯಾಗಿ ವರುಷ 13 ಸಂದರೂ ನ್ಯಾಯಕ್ಕಾಗಿ ಅವರು ಹಚ್ಚಿದ ಹೋರಾಟದ ಕಿಚ್ಚು ಮಾತ್ರ ಇನ್ನೂ ಜೀವಂತವಾಗಿದೆ.
9
385
2
504
ಆಡಳಿತ ವೈಫಲ್ಯ ಮುಚ್ಚಿ ಹಾಕಲು ಹಿಜಾಬ್ ವಿವಾದ ಹುಟ್ಟು ಹಾಕಿದ BJP, ಅದರ ಸಮರ್ಥನೆಗೆ ಟೊಂಕ ಕಟ್ಟಿ ನಿಂತಿತು. ಈಗ @BCNagesh_bjp ಹಿಜಾಬ್ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಹೈಕೋರ್ಟ್ ತೀರ್ಪನ್ನು ದುರ್ವ್ಯಾಖ್ಯಾನಿಸಿ ಜನರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಹಿಜಾಬ್, BJPಯ ರಾಜಕೀಯ ಆಡಂಬೋಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹೈಕೋರ್ಟ್‌ ಆದೇಶದ ಕುರಿತು ತಪ್ಪು ಹೇಳಿಕೆ ಹಿಂಪಡೆಯಲು ಸಚಿವ ನಾಗೇಶ್‌ಗೆ ನೋಟಿಸ್‌ ಜಾರಿ ಮಾಡಿದ ಎಐಎಲ್‌ಎಜೆ #HighCourt prasthutha.com/ailaj-asks-ed…
2
334
3
385
ತಮ್ಮ ವೃತ್ತಿ ಧರ್ಮವನ್ನು ಎತ್ತಿ ಹಿಡಿದ ಗದಗದ ಐವರು ಶಿಕ್ಷಕರು, ಪರೀಕ್ಷಾ ಕೇಂದ್ರದ ಇಬ್ಬರು ಮುಖ್ಯ ಅಧೀಕ್ಷಕರನ್ನು ಅಮಾನತು ಮಾಡಿರುವುದು ಖಂಡನಾರ್ಹ. SSLC ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿರುವಾಗ ಮತ್ತೆ ಸ್ಕಾರ್ಫ್ ವಿಚಾರ ಕೆದಕುತ್ತಿರುವ ವ್ಯವಸ್ಥೆಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದಿರುವುದನ್ನು ಸ್ಪಷ್ಟಪಡಿಸುತ್ತದೆ.
4
418
2
462
She was suspended despite clarifying that the HC ruling on Hijab was only for students & not teachers & other officials. This again proves the issue was never about uniforms. The ruling has in fact sanctioned the othering & humiliation of Muslim women. https://teapaw.org/t.co/B2a1ke1ipf
2
339
2
424
ಉಡುಪಿ ನಗರಸಭೆ ಆಡಳಿತ ನಿಷ್ಪಕ್ಷಪಾತವಾಗಿ ಕಾರ್ಯಾಚರಿಸಿದ್ದರೆ, ಇಂದು ಹಲವು ಕಟ್ಟಡಗಳು ನೆಲಸಮವಾಗಬೇಕಿತ್ತು. ಆದರೆ ಹಿಜಾಬ್ ಹಕ್ಕಿನ ಪರವಾಗಿ ಮತ್ತು ಸ್ಥಳೀಯ ಶಾಸಕ ಹಾಗೂ BJP ನಾಯಕರ ಸ್ವಾರ್ಥ, ದ್ವೇಷ ರಾಜಕೀಯ ವಿರುದ್ಧ ಧ್ವನಿ ಎತ್ತಿದ ಏಕೈಕ ಕಾರಣಕ್ಕೆ SDPI ಜಿಲ್ಲಾಧ್ಯಕ್ಷರ ಒಡೆತನದ ಹೊಟೇಲನ್ನು ದುರುದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ.
ಬಾಡಿಗೆ ಕಟ್ಟಡದಲ್ಲಿದ್ದ ನನ್ನ ಹೋಟೆಲ್‌ ನೆಲಸಮ ಅದು ನನ್ನ ಮೇಲಿನ ರಾಜಕೀಯ ದ್ವೇಷ ಸಾಧನೆಯೇ ಹೊರತು ಕಟ್ಟಡ ಅವರಿಗೆ ವಿಷಯವಲ್ಲ. ಆದರೆ ಬೆದರಿಕೆಯ ಮೂಲಕ ಫ಼್ಯಾಶಿಸ್ಟರ ವಿರುದ್ಧದ ಹೋರಾಟದಿಂದ ನಾನು ಹಿಂದೆ ಸರಿಯುವೆನೆಂಬ ಕನಸನ್ನು ಬಿಟ್ಟು ಬಿಡಿ, ಅದು ಕನಸಾಗಿಯೇ ಉಳಿಯಲಿದೆ. ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಪ್ರಖರವಾಗಲಿದೆ,‌ ನೆನಪಿಡಿ.
4
447
3
503
ವಿಜಯಪುರದಲ್ಲಿ 12 ವರ್ಷದ ಬಾಲಕನನ್ನು ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿದ ಘಟನೆ ನಡೆದಿದ್ದರೂ, ಪೊಲೀಸ್ ಇಲಾಖೆ ಮೌನವಾಗಿದೆ. ಪೋಕ್ಸೋ ದಾಖಲಿಸಲು ಪೊಲೀಸರು ಮೇಲಧಿಕಾರಿಗಳ ಸಲಹೆ ಪಡೆಯುತ್ತಿದ್ದಾರಂತೆ! ದುರ್ಬಲ ಸಮುದಾಯಗಳ ವಿರುದ್ಧ ಕಠಿಣವಾಗಿ ವರ್ತಿಸುವ ಪೊಲೀಸರು ಪ್ರಭಾವೀ ವರ್ಗದ ವ್ಯಕ್ತಿಗಳ ಅಪರಾಧ ಕೃತ್ಯಗಳ ಬಗ್ಗೆ ಮೃದು ಧೋರಣೆ ತಾಳುವುದೇಕೆ?
#ವಿಜಯಪುರ: 12 ವರ್ಷದ ಬಾಲಕನನ್ನು ಬೆತ್ತಲೆಗೊಳಿಸಿ ಚಿತ್ರ ಹಿಂಸೆ; ಇನ್ನೂ ‘#ಪೋಕ್ಸೋ’ ದಾಖಲಿಸದ ಪೊಲೀಸರು! ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ, ಬೆತ್ತಲೆಗೊಳಿಸಿ, ಗುಪ್ತಾಂಗಕ್ಕೆ ಬಣ್ಣ ಹಾಗೂ ಸುಟ್ಟ ಆಯಿಲ್ ಎರಚಿ, ವಿಕೃತವಾಗಿ #ಹಲ್ಲೆ ನಡೆಸಲಾಗಿದೆ #NaanuGauri #Vijayapura #Child https://teapaw.org/t.co/JtzuzDZw0X
8
533
2
576
ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಶರ್ಫುದ್ದೀನ್ ಸಾಬ್, ಬಡ್ಡಿರಹಿತ ಸಾಲ ಸಂಸ್ಥೆಯ ಮೂಲಕ ಬಡವರ ಮನೆ ಬೆಳಗಲು ಶ್ರಮಿಸಿದ ವ್ಯಕ್ತಿ. ಅವರು ಸಮುದಾಯ, ಸಾಮಾಜಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಸಜ್ಜನ ವ್ಯಕ್ತಿತ್ವ, ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದ ಅವರ ಅಗಲುವಿಕೆ ಅತೀವ ದುಃಖ ತಂದಿದೆ. https://teapaw.org/t.co/LhLlNuOoeM
10
272
2
340
ದಲಿತ ಮಹಿಳೆ ದಾನೇಶ್ವರಿಯನ್ನು ಕ್ರೂರವಾಗಿ ಸುಟ್ಟು ಕೊಂದ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ದಲಿತರನ್ನು ನಿಕೃಷ್ಟರನ್ನಾಗಿ ಕಾಣುವ ಮನೋಸ್ಥಿತಿಯಿಂದ ಮಾತ್ರವೇ ಇಂತಹ ದುಷ್ಕೃತ್ಯ ನಡೆಸಲು ಸಾಧ್ಯ. ಈ ಬರ್ಬರ ಘಟನೆ #Dalitfiles ಗೆ ಹೊಸ ಸೇರ್ಪಡೆಯಾಗಿದೆ. ಕೊಲೆಗಡುಕನನ್ನು ಕೂಡಲೇ ಬಂಧಿಸಿ ಈ ದಲಿತ ಮಹಿಳೆಯ ಸಾವಿಗೆ ನ್ಯಾಯ ಕಲ್ಪಿಸಬೇಕಾಗಿದೆ.
3
599
3
673