LINGAYATH OFFICIAL (@AkhandLINGAYATH) header
LINGAYATH OFFICIAL (@AkhandLINGAYATH) profile picture

ಬಸವಣ್ಣ || ಶರಣ ತತ್ವಗಳ ಅನುಷ್ಠಾನ #ಲಿಂಗಾಯತಧರ್ಮ #LingayatReligion

ಬಸವ-ನಾಡು
Joined September 2021
Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)Photo by LINGAYATH OFFICIAL (@AkhandLINGAYATH)
ಎಚ್ಚರ 🚨 134 ಕಾಂಗ್ರೆಸ್ ಸೀಟ್ ಅಲ್ಲಿ ಅತೀ ಹೆಚ್ಚು (34) ನಮ್ಮ ಲಿಂಗಾಯತ ಸಮಾಜ ಕೊಟ್ಟಿದೆ ಅನ್ನೋದು ಕಾಂಗ್ರೆಸ್ ಮರೆಯಬಾರದ !! ನಮ್ಮ ಸಮಾಜ ಗಮನಿಸುತ್ತಿದ್ದೆ, ಸೂಕ್ತ ಸ್ಥಾನ ಮಾನ ನೀಡದಿದ್ದರೆ ಸರಿಯಾದ ಉತ್ತರ ನೀಡಬೇಕಾಗುತ್ತದೆ ಎಚ್ಚರ !! @MBPatil @RahulGandhi @kharge @eshwar_khandre @siddaramaiah @DKShivakumar @INCIndia @INCKarnataka @BJP4India @BJP4Karnataka @narendramodi @BYVijayendra @AsianetNewsSN @tv9kannada @cnnbrk @News18Kannada @KannadaPrabha @OneindiaKannada @tv5newsnow
9
14
6
90
7,103
LINGAYATH OFFICIAL retweeted
Dr. M.M. Kalburgi’s ideals, writings and unwavering courage to speak the truth continue to inspire us all. My tributes to him on his birth anniversary #DrMMKalburgi @INCMumbai @INCMaharashtra
1
36
LINGAYATH OFFICIAL retweeted
ನಾಡಿನ ಹೆಮ್ಮೆಯ ವಿದ್ವಾಂಸ, ಸಂಶೋಧಕ ಹಾಗೂ ವಿಚಾರವಾದಿಗಳಾದ ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಕನ್ನಡ ಭಾಷೆ ಮತ್ತು ಬಸವಣ್ಣನವರ ತತ್ವಾದರ್ಶಗಳನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಅವರು, ಶಾಸನಶಾಸ್ತ್ರ, ಇತಿಹಾಸ, ಸಾಹಿತ್ಯ, ಛಂದಸ್ಸು ಸೇರಿದಂತೆ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಮೇಧಾವಿ ಅವರು. ಕನ್ನಡ ಸಾರಸ್ವತ ಲೋಕಕ್ಕೆ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಡಾ. ಎಂ.ಎಂ. ಕಲಬುರ್ಗಿ ಅವರ ಕೊಡುಗೆ ಅನನ್ಯ ಮತ್ತು ಅಮೂಲ್ಯವಾದುದು. ಅವರ ವೈಚಾರಿಕ ಚಿಂತನೆಗಳು ಹಾಗೂ ಜ್ಞಾನಸಂಪತ್ತು ಸದಾ ಸ್ಮರಣೀಯ. #DrMMKalaburgi
8
28
797
ನಾನೂ ಬದುಕಿರುವುದೇ "ಬಸವಣ್ಣ ಮತ್ತು ಕನ್ನಡಕ್ಕಾಗಿ" ಎಂದು ಉದ್ಘರಿಸಿದ ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಲಿಂಗೈಕ್ಯ ಡಾ|| ಎಂ ಎಂ ಕಲ್ಬುರ್ಗಿ ಅವರ ಜನನ ಜಾಗೃತಿ ದಿನವಿಂದು. ವಿದ್ಯಾರ್ಥಿಗಳಿಗೆ : ನಾನು ಅವರ ಗುರು, ಅವರು ನನ್ನ ದೇವರು ಹೇಳಿದ ಮಹಾ ಚೇತನ, ಬದುಕಿನುದ್ದಕ್ಕೂ ಬಸವಾದಿ ಶರಣರ ಸಾಹಿತ್ಯ ಸಂಪಾದನೆ ಮಾಡಿದ್ದ ಮಹನೀಯ..
9
29
401
ಗೂoಡಾಗಳಿಂದ ಹತ್ಯೆಗೀಡಾದ ಲಿಂ. ಡಾ. ಎಂ. ಎಂ. ಕಲ್ಬುರ್ಗಿ ಅವರ 88ನೇ ಜನ್ಮದಿನದಂದು, ಗೃಹ ಸಚಿವರಾದ ಶ್ರೀ @PriyankKharge ಅವರಲ್ಲಿ ನಮ್ಮ ವಿನಂತಿಯೇನೆಂದರೆ, ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಿರಿ ಹಂತಕರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕೆಂದು ನಾವು ಆಗ್ರಹಿಸುತ್ತೇವೆ. @DKShivakumar
4
5
97
On the eve of 88th B'day of Late Dr M M Kalburgi, who was killed by the goons. The case is not moving, we request home minister Shri @PriyankKharge sir to expedite the process and take case to it's logical conclusion We DEMAND TOUGHEST PUNISHMENT for the Killers @DKShivakumar
3
2
85
LINGAYATH OFFICIAL retweeted
ಸಂಶೋಧನೆಯನ್ನೇ ಉಸಿರಾಗಿಸಿಕೊಂಡ ಕನ್ನಡದ ಧೀಮಂತ ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರ ಜನ್ಮದಿನದ ಗೌರವಪೂರ್ವಕ ನಮನಗಳು. ವಚನ ಸಾಹಿತ್ಯ, ಶಾಸನಶಾಸ್ತ್ರ ಮತ್ತು ಕನ್ನಡ ಭಾಷೆಯ ಆಳವಾದ ಅಧ್ಯಯನದ ಮೂಲಕ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಸಂಶೋಧಕರು ಹಾಗೂ ಚಿಂತಕರು. #MMKalburgi #KannadaLiterature #VachanaSahitya #Tribute #IYCKarnataka
8
8
150
LINGAYATH OFFICIAL retweeted
ವಚನ ಸಾಹಿತ್ಯ ಮತ್ತು ಕನ್ನಡ ಸಂಶೋಧನಾ ಲೋಕಕ್ಕೆ ಹೊಸ ದಿಕ್ಕು ತೋರಿದ ಧೀಮಂತ ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರ ಜನ್ಮದಿನದ ಗೌರವಪೂರ್ವಕ ನಮನಗಳು. ಕನ್ನಡ ಭಾಷೆ, ಶಾಸನಶಾಸ್ತ್ರ ಮತ್ತು ವಚನ ಸಾಹಿತ್ಯದ ಅಧ್ಯಯನಕ್ಕೆ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟ ಇವರು, ನಾಡಿನ ಶ್ರೇಷ್ಠ ಚಿಂತಕರು ಹಾಗೂ ಸಂಶೋಧಕರು. #MMKalburgi #VachanaSahitya
1
7
5
48
LINGAYATH OFFICIAL retweeted
ಕನ್ನಡದ ಹಿರಿಯ ಸಂಶೋಧಕ, ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರ ಜನ್ಮದಿನದ ಸ್ಮರಣೆ. ಕನ್ನಡ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಅವರ ಅಮೂಲ್ಯ ಕೊಡುಗೆ ಸದಾ ಸ್ಮರಣೀಯ. #BookBrahma #MMKalburgi #KannadaLiterature #Manuscriptology #FolkLiterature #VachanaSahitya #Epigraphy #ShasanaSampada
2
6
138
LINGAYATH OFFICIAL retweeted
ಸಂಶೋಧನೆಯನ್ನೇ ಉಸಿರಾಗಿಸಿಕೊಂಡ ಕನ್ನಡದ ಧೀಮಂತ ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರ ಜನ್ಮದಿನದ ಗೌರವಪೂರ್ವಕ ನಮನಗಳು. ವಚನ ಸಾಹಿತ್ಯ, ಶಾಸನಶಾಸ್ತ್ರ ಮತ್ತು ಕನ್ನಡ ಭಾಷೆಯ ಆಳವಾದ ಅಧ್ಯಯನದ ಮೂಲಕ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಸಂಶೋಧಕರು ಹಾಗೂ ಚಿಂತಕರು. - @MLAAbbayyaHD72 #MMKalburgi
4
4
86
LINGAYATH OFFICIAL retweeted
एम. एम. कलबुर्गी प्रसिद्ध कन्नड़ साहित्यकार, विद्वान एवं हम्पी विश्वविद्यालय के पूर्व कुलपति थे। साहित्य और शोध के क्षेत्र में उनका योगदान सदैव स्मरणीय रहेगा। #MMKalburgi #KannadaLiterature #Jayanti #tehelka #tehelkanews #tehelkaglobal
2
1
23
Dr. M.M. Kalburgi's ideals, writings and unwavering courage to speak the truth continues to inspire all of us. Tributes to the great writer, scholar and rationalist on his birth anniversary. 🙏 #MMKalburgi
4
15
265
ಕಾಯಕಯೋಗಿ, ಮಹಾಪ್ರಸಾದಿ, ಶತಾಯುಷಿ ಪೂಜ್ಯಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರ 137ನೇ ಜಯಂತಿ ಮಹೋತ್ಸವ. 🙏 1908 ರಲ್ಲಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಆಗಿನ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶ್ರಯದಲ್ಲಿ ಇದ್ದುಕೊಂಡು ವೇದ, ಸಂಸ್ಕೃತ ಸೇರಿ ವಚನಾಧ್ಯಯನ ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ ಸದ್ಗುರು ಸಿದ್ಧಾರೂಢರ ಪ್ರವಚನವನ್ನು ಆಲಿಸಿದರು. ಅಲ್ಲಿಂದ ಶಿವಬಸವ ಮರಿದೇವರು 1910 ರಲ್ಲಿ ಶಿವಯೋಗಮಂದಿರಕ್ಕೆ ತೆರಳಿ ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಹನ್ನೆರಡು ವರ್ಷ ಅಧ್ಯಯನ ಮಾಡಿ ತಮ್ಮ ನಯ, ವಿನಯ, ಸರಳ-ಸಜ್ಜನಿಕೆಗಳಿಂದ ಪೂಜ್ಯರ ಕೃಪಾಶೀರ್ವಾದದಲ್ಲಿ ತಯಾರಾದರು. ನಂತರ 1922 ರಂದು ನಾಗನೂರಿಗೆ ಬಂದ ಸ್ವಾಮೀಜಿ ನೋಡ ನೋಡುತ್ತಿದ್ದಂತೆ ಜನಸಾಮಾನ್ಯರ ಸ್ವಾಮೀಜಿಯಾಗಿ ಬೆಳೆದರು. ಸುದೀರ್ಘ 72 ವರ್ಷಗಳ ಕಾಲ ರುದ್ರಾಕ್ಷಿಮಠವನ್ನು ಹೆಮ್ಮರವಾಗಿ ಬೆಳೆಸಿ, ಸೆ.9 1994 ರಂದು ಡಾ.ಶಿವಬಸವ ಸ್ವಾಮೀಜಿ ಲಿಂಗೈಕ್ಯರಾದರು. 1908 ರಲ್ಲಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಆಗಿನ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶ್ರಯದಲ್ಲಿ ಇದ್ದುಕೊಂಡು ವೇದ, ಸಂಸ್ಕೃತ ಸೇರಿ ವಚನಾಧ್ಯಯನ ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ ಸದ್ಗುರು ಸಿದ್ಧಾರೂಢರ ಪ್ರವಚನವನ್ನು ಆಲಿಸಿದರು. ಅಲ್ಲಿಂದ ಶಿವಬಸವ ಮರಿದೇವರು 1910ರಲ್ಲಿ ಶಿವಯೋಗಮಂದಿರಕ್ಕೆ ತೆರಳಿ ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಹನ್ನೆರಡು ವರ್ಷ ಅಧ್ಯಯನ ಮಾಡಿ ತಮ್ಮ ನಯ, ವಿನಯ, ಸರಳ-ಸಜ್ಜನಿಕೆಗಳಿಂದ ಪೂಜ್ಯರ ಕೃಪಾಶೀರ್ವಾದದಲ್ಲಿ ತಯಾರಾದರು. ನಂತರ 1922 ರಂದು ನಾಗನೂರಿಗೆ ಬಂದ ಸ್ವಾಮೀಜಿ ನೋಡ ನೋಡುತ್ತಿದ್ದಂತೆ ಜನಸಾಮಾನ್ಯರ ಸ್ವಾಮೀಜಿಯಾಗಿ ಬೆಳೆದರು. ಸುದೀರ್ಘ 72 ವರ್ಷಗಳ ಕಾಲ ರುದ್ರಾಕ್ಷಿಮಠವನ್ನು ಹೆಮ್ಮರವಾಗಿ ಬೆಳೆಸಿ, ಸೆ.9 1994 ರಂದು ಡಾ.ಶಿವಬಸವ ಸ್ವಾಮೀಜಿ ಲಿಂಗೈಕ್ಯರಾದರು.ರು. 1908 ರಲ್ಲಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಆಗಿನ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶ್ರಯದಲ್ಲಿ ಇದ್ದುಕೊಂಡು ವೇದ, ಸಂಸ್ಕೃತ ಸೇರಿ ವಚನಾಧ್ಯಯನ ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ ಸದ್ಗುರು ಸಿದ್ಧಾರೂಢರ ಪ್ರವಚನವನ್ನು ಆಲಿಸಿದರು. ಅಲ್ಲಿಂದ ಶಿವಬಸವ ಮರಿದೇವರು 1910 ರಲ್ಲಿ ಶಿವಯೋಗಮಂದಿರಕ್ಕೆ ತೆರಳಿ ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಹನ್ನೆರಡು ವರ್ಷ ಅಧ್ಯಯನ ಮಾಡಿ ತಮ್ಮ ನಯ, ವಿನಯ, ಸರಳ-ಸಜ್ಜನಿಕೆಗಳಿಂದ ಪೂಜ್ಯರ ಕೃಪಾಶೀರ್ವಾದದಲ್ಲಿ ತಯಾರಾದರು. ನಂತರ 1922 ರಂದು ನಾಗನೂರಿಗೆ ಬಂದ ಸ್ವಾಮೀಜಿ ನೋಡ ನೋಡುತ್ತಿದ್ದಂತೆ ಜನಸಾಮಾನ್ಯರ ಸ್ವಾಮೀಜಿಯಾಗಿ ಬೆಳೆದರು. ಸುದೀರ್ಘ 72 ವರ್ಷಗಳ ಕಾಲ ರುದ್ರಾಕ್ಷಿಮಠವನ್ನು ಹೆಮ್ಮರವಾಗಿ ಬೆಳೆಸಿ, ಸೆ.9 1994 ರಂದು ಡಾ.ಶಿವಬಸವ ಸ್ವಾಮೀಜಿ ಲಿಂಗೈಕ್ಯರಾದರು.
2
14
267
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ! ಮಾಲೆಗಾರನೇಸು ಭಕ್ತನಾದರೆಯೂ ಬಾವಿಯ ಬೊಮ್ಮನ ಹಂಗ ಬಿಡ! ಬಣಜಿಗನೇಸು ಭಕ್ತನಾದರೆಯೂ ಒಟ್ಟಿಲ ಬೆನಕನ ಹಂಗ ಬಿಡ! ಕಂಚುಗಾರನೇಸು ಭಕ್ತನಾದರೆಯೂ ಕಾಳಿಕಾದೇವಿಯ ಹಂಗ ಬಿಡ! ನಾನಾವ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ, ಕೂಡಲಸಂಗಮದೇವಾ!
1
18
182
ಚಳುವಳಿಯಿಂದ ಧರ್ಮದೆಡೆಗೆ: ಬಸವಣ್ಣನವರ ತತ್ವಗಳ ಸಾರ್ವಕಾಲಿಕ ಪಯಣ. ಬಸವಣ್ಣ ಮತ್ತು ಶರಣರು ಸಮಾನತೆಯ ಸಮಾಜ ಕಟ್ಟಲು ಚಳುವಳಿ ಹೂಡಿದರೆ, ಆ ಕ್ರಾಂತಿಕಾರಿ ತತ್ವಗಳು ಕಾಲಗರ್ಭದಲ್ಲಿ ಕರಗಿಹೋಗದೆ ಸಾರ್ವಕಾಲಿಕವಾಗಿ ಉಳಿಯಲು ಅನುಯಾಯಿಗಳು ಅವುಗಳಿಗೆ ಸ್ವತಂತ್ರ ಧರ್ಮದ ಚೌಕಟ್ಟು ನೀಡಿದ ಇತಿಹಾಸದ ಒಳನೋಟ. ಪ್ರಸ್ತುತ ಸಮಾಜದಲ್ಲಿ ಧರ್ಮ, ಪಂಥ ಮತ್ತು ಆಚರಣೆಗಳ ಕುರಿತು ತೀವ್ರವಾದ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಇತಿಹಾಸದ ಪುಟಗಳನ್ನು, ಅದರಲ್ಲೂ ವಿಶೇಷವಾಗಿ 12ನೇ ಶತಮಾನದ ಕರ್ನಾಟಕದ ಶರಣ ಚಳುವಳಿಯನ್ನು ಗಮನಿಸಿದರೆ ಒಂದು ಮಹತ್ವದ ಸತ್ಯ ಗೋಚರಿಸುತ್ತದೆ. ಜಗತ್ತಿನ ಯಾವುದೇ ಮಹಾಪುರುಷರು ಅಥವಾ ಸಮಾಜ ಸುಧಾರಕರು "ನಾನೊಂದು ಪ್ರತ್ಯೇಕ ಧರ್ಮವನ್ನು ಕಟ್ಟುತ್ತೇನೆ" ಎಂಬ ಘೋಷಣೆಯೊಂದಿಗೆ ಹೊರಟವರಲ್ಲ. ಬದಲಾಗಿ, ತಮ್ಮ ಕಾಲದ ಸಾಮಾಜಿಕ ಅಸಮಾನತೆ, ಮೂಢನಂಬಿಕೆ ಮತ್ತು ಶೋಷಣೆಯ ವಿರುದ್ಧ ಬಂಡೆದ್ದು, ಮನುಕುಲಕ್ಕೆ ನೆಮ್ಮದಿಯ ಬದುಕಿನ ದಾರಿ ತೋರಿಸಿದವರು. ಆದರೆ ಕಾಲ ಸರಿದಂತೆ ಅವರ ಅನುಯಾಯಿಗಳು ಆ ವಿಚಾರಗಳಿಗೆ ಸಾಂಸ್ಥಿಕ ರೂಪ ನೀಡಿ ಪ್ರತ್ಯೇಕ ಧರ್ಮ ಅಥವಾ ಪಂಥಗಳನ್ನಾಗಿ ಮಾರ್ಪಡಿಸಿದರು. ಬಸವಣ್ಣ ಮತ್ತು ಶರಣ ಚಳುವಳಿ: ಸಮಾನತೆಯ ಕ್ರಾಂತಿ 12ನೇ ಶತಮಾನದಲ್ಲಿ ಬಸವಣ್ಣನವರು ಆರಂಭಿಸಿದ ವಚನ ಮತ್ತು ಶರಣ ಚಳುವಳಿಯ ಮೂಲ ಉದ್ದೇಶ ಕೇವಲ ಹೊಸ ಧರ್ಮದ ಸ್ಥಾಪನೆಯಾಗಿರಲಿಲ್ಲ; ಅದು 'ಮನುಷ್ಯತ್ವದ ಪುನರುತ್ಥಾನ' ಮತ್ತು ಸಾಮಾಜಿಕ ನ್ಯಾಯದ ಹೋರಾಟವಾಗಿತ್ತು. ಅಂದಿನ ವೈದಿಕ ಪರಂಪರೆಯಲ್ಲಿದ್ದ ಜಾತಿ ತಾರತಮ್ಯ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಮತ್ತು ಯಜ್ಞ-ಯಾಗಾದಿಗಳ ಆಡಂಬರವನ್ನು ಬಸವಣ್ಣನವರು ನೇರವಾಗಿ ಪ್ರಶ್ನಿಸಿದರು. “ಇವನಾರವ, ಇವನಾರವ, ಇವನಾರವನೆಂದೆಣಿಸದಿರಯ್ಯಾ; ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆಣಿಸಯ್ಯಾ” ಎಂಬ ಅವರ ವಚನವು ಜಾತಿ-ಮತಗಳ ಗಡಿ ಮೀರಿದ ವಿಶ್ವಬಂಧುತ್ವವನ್ನು ಸಾರಿತು. ಕಲ್ಯಾಣದ 'ಅನುಭವ ಮಂಟಪ' ಧಾರ್ಮಿಕ ಪೀಠವಾಗಿರಲಿಲ್ಲ; ಅದು ಜಾತಿ, ಲಿಂಗ ಮತ್ತು ವರ್ಗಭೇದವಿಲ್ಲದೆ ಪ್ರತಿಯೊಬ್ಬರೂ ಮುಕ್ತವಾಗಿ ಚರ್ಚಿಸುವ, ಅನುಭವ ಹಂಚಿಕೊಳ್ಳುವ ಪ್ರಜಾಸತ್ತಾತ್ಮಕ ವೇದಿಕೆಯಾಗಿತ್ತು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಹರಳಯ್ಯ, ಡೋಹರ ಕಕ್ಕಯ್ಯ ಮೊದಲಾದ ವಿವಿಧ ಹಿನ್ನೆಲೆಯ ಶರಣರು ಒಂದೇ ವೇದಿಕೆಯಲ್ಲಿ ಸಂವಾದ ನಡೆಸಿದರು. "ಕಾಯಕವೇ ಕೈಲಾಸ" ಎಂಬ ತತ್ವದ ಮೂಲಕ ದುಡಿಮೆಯ ಘನತೆಯನ್ನು ಎತ್ತಿಹಿಡಿದು, ಯಾವುದೇ ಕಾಯಕವೂ ಮೇಲಲ್ಲ-ಕೀಳಲ್ಲ ಎಂಬ ಸಂದೇಶವನ್ನು ನೀಡಿದರು. ಹಾಗೆಯೇ, ಜಾಗತಿಕ ಇತಿಹಾಸದಲ್ಲೂ ಗೌತಮ ಬುದ್ಧ ದುಃಖ ನಿವಾರಣೆಯ 'ಅಷ್ಟಾಂಗ ಮಾರ್ಗ'ವನ್ನು ಬೋಧಿಸಿದರೆ, ಗುರು ನಾನಕ್ ಅವರು ದೇವರ ಏಕತ್ವ ಮತ್ತು ಸಮಾನತೆಯ ಭಕ್ತಿ ಮಾರ್ಗವನ್ನು ತೋರಿಸಿದರು; ಯೇಸು ಕ್ರಿಸ್ತ ಪ್ರೀತಿ ಮತ್ತು ಕ್ಷಮೆಯ ಮಹತ್ವವನ್ನು ಸಾರಿದರು. ಇವರೆಲ್ಲರೂ ತಮ್ಮ ಕಾಲದ ಕೊಳೆಯನ್ನು ತೊಳೆಯಲು 'ವಿಚಾರಗಳನ್ನು' ನೀಡಿದರೇ ಹೊರತು, ಹೊಸ ಗೋಡೆಗಳನ್ನು ಕಟ್ಟಲು ಅಲ್ಲ. ತತ್ವಗಳ ಸಾರ್ವಕಾಲಿಕತೆಗೆ 'ಸ್ವತಂತ್ರ ಧರ್ಮದ ಚೌಕಟ್ಟು' ಏಕೆ ಅವಶ್ಯ? ಸಮಾಜ ಸುಧಾರಕರ ಕ್ರಾಂತಿಕಾರಿ ವಿಚಾರಗಳು ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಾಗದೆ, ತಲೆಮಾರುಗಳವರೆಗೆ ಸಾರ್ವಕಾಲಿಕವಾಗಿ ಉಳಿಯಬೇಕಾದರೆ ಅವುಗಳಿಗೆ ಸ್ವತಂತ್ರ ಮಾನ್ಯತೆ ಹಾಗೂ ಸಾಂಸ್ಥಿಕ (ಧರ್ಮದ) ಚೌಕಟ್ಟು ಅತ್ಯಗತ್ಯವಾಗುತ್ತದೆ. ಇಲ್ಲದಿದ್ದರೆ, ಕಾಲಕ್ರಮೇಣ ಆ ಸುಧಾರಣಾ ವಿಚಾರಗಳು ಹಳೆಯ ಸಂಪ್ರದಾಯದ ಒಳಗೇ ಕರಗಿಹೋಗುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಅನುಯಾಯಿಗಳು ಕೈಗೊಂಡ ಕ್ರಮಗಳು ಮಹತ್ವದ್ದಾಗಿವೆ: • ವಿಚಾರಗಳ ಸಂರಕ್ಷಣೆ ಮತ್ತು ದಾಖಲೀಕರಣ: ಸುಧಾರಕರ ಕಾಲಾನಂತರ ಅವರ ಅಮೂಲ್ಯ ತತ್ವಗಳು ನಶಿಸಿಹೋಗಬಾರದು ಎಂಬ ದೂರದೃಷ್ಟಿಯಿಂದ ಅನುಯಾಯಿಗಳು ಬೋಧನೆಗಳನ್ನು ಸಂಗ್ರಹಿಸಿದರು. ಬಸವಣ್ಣ ಮತ್ತು ಶರಣರ ಅನುಭಾವದ ನುಡಿಗಳು 'ವಚನ ಸಾಹಿತ್ಯ'ವಾಗಿ ಸಂರಕ್ಷಿಸಲ್ಪಟ್ಟವು; ಬುದ್ಧನ ಬೋಧನೆಗಳು 'ತ್ರಿಪಿಟಕ'ಗಳಾದವು; ಗುರು ನಾನಕ್ ಮತ್ತು ನಂತರದ ಗುರುಗಳ ಬೋಧನೆಗಳು 'ಗುರು ಗ್ರಂಥ ಸಾಹಿಬ್' ಆದವು. • ತಾತ್ವಿಕ ಸ್ವಾತಂತ್ರ್ಯ ಮತ್ತು ಅಸ್ತಿತ್ವದ ರಕ್ಷಣೆ: ಯಾವುದೇ ಸುಧಾರಣಾ ಚಳುವಳಿಯು ತಾನು ವಿರೋಧಿಸಿದ ಮೂಲ ಸಂಪ್ರದಾಯದ ಅಡಿಯಲ್ಲೇ ಉಳಿದರೆ, ಕಾಲಾನಂತರ ಹಳೆಯ ವ್ಯವಸ್ಥೆಯು ಆ ಹೊಸ ವಿಚಾರಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಂಡು ಅದರ ಮೂಲ ಆಶಯವನ್ನೇ ನಾಶಪಡಿಸುತ್ತದೆ. ಹೀಗಾಗಿ, ತತ್ವಗಳಿಗೆ ಸ್ವತಂತ್ರ ಮಾನ್ಯತೆ ಮತ್ತು ಪ್ರತ್ಯೇಕ ಅಸ್ತಿತ್ವ (Independent Identity) ನೀಡುವುದು ಅನಿವಾರ್ಯವಾಯಿತು. • ಸಂಘಟಿತ ವ್ಯವಸ್ಥೆಯ ನಿರ್ಮಾಣ: ಸಮಾನತೆಯ ಮೌಲ್ಯಗಳನ್ನು ನಿರಂತರವಾಗಿ ಜನಸಾಮಾನ್ಯರಿಗೆ ತಲುಪಿಸಲು ಮಠಗಳು, ವಿಹಾರಗಳು, ಚರ್ಚ್‌ಗಳು ಮತ್ತು ಗುರುದ್ವಾರಗಳಂತಹ ಸಾಂಸ್ಥಿಕ ವ್ಯವಸ್ಥೆಗಳು ನೆರವಾದವು. ಲಿಂಗದೀಕ್ಷೆ, ವಿಶಿಷ್ಟ ಚಿಹ್ನೆಗಳು ಮತ್ತು ನಿಯಮಗಳೊಂದಿಗೆ ಸ್ವತಂತ್ರ ಧರ್ಮದ ಚೌಕಟ್ಟು ರೂಪುಗೊಂಡಿದ್ದರಿಂದಲೇ ಇಂದಿಗೂ ನಾವು 12ನೇ ಶತಮಾನದ ವಚನ ತತ್ವಗಳನ್ನು ಜೀವಂತವಾಗಿ ಕಾಣಲು ಸಾಧ್ಯವಾಗಿದೆ. ಇಂದಿನ ವಿಪರ್ಯಾಸ ಧರ್ಮದ ಚೌಕಟ್ಟು ತತ್ವಗಳ ರಕ್ಷಣೆಗೆ ಪೂರಕವಾಗಿದ್ದರೂ, ಇಲ್ಲಿ ಎದುರಾದ ಅತ್ಯಂತ ದೊಡ್ಡ ವಿಪರ್ಯಾಸವೆಂದರೆ—ಯಾವ ಕಂದಾಚಾರ, ಜಾತಿ-ಪಂಥದ ಬಿಗುಮಾನ ಮತ್ತು ಆಡಂಬರದ ಆಚರಣೆಗಳನ್ನು ವಿರೋಧಿಸಿ ಬಸವಣ್ಣ ಮತ್ತು ಶರಣರು ಹೋರಾಡಿದರೋ, ಕಾಲಕ್ರಮೇಣ ಅವೇ ಅಂಶಗಳು ಹೊಸದಾಗಿ ರೂಪುಗೊಂಡ ಸಂಸ್ಥೆಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡವು. ವಿಚಾರದ ಜೀವಂತಿಕೆಗಿಂತ ಬಾಹ್ಯ ಆಚರಣೆ ಮತ್ತು ಗುರುತಿನ ರಾಜಕಾರಣಕ್ಕೆ ಹೆಚ್ಚು ಮಹತ್ವ ಸಿಗುವಂತಾಯಿತು. ಕೊನೆಯ ಮಾತು ಮಹಾಪುರುಷರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು 'ವಿಚಾರ' ಎಂಬ ಬೆಳಕನ್ನು ನೀಡಿದರು; ಆ ಬೆಳಕು ಶಾಶ್ವತವಾಗಿ ಉಳಿಯಲು ಮತ್ತು ಸಾರ್ವಕಾಲಿಕವಾಗಿ ಬೆಳಗಲು ಅನುಯಾಯಿಗಳು 'ಸ್ವತಂತ್ರ ಧರ್ಮ' ಎಂಬ ಚೌಕಟ್ಟನ್ನು ನಿರ್ಮಿಸಿದರು. ಇಂದಿನ ಚರ್ಚೆಗಳ ನಡುವೆ ನಾವು ಗಮನಿಸಬೇಕಾದ ಸಮತೋಲನದ ಅಂಶವೆಂದರೆ—ತತ್ವಗಳ ರಕ್ಷಣೆಗೆ ಚೌಕಟ್ಟು ಎಷ್ಟು ಮುಖ್ಯವೋ, ಆ ಚೌಕಟ್ಟಿನೊಳಗಿರುವ ಸಮಾನತೆ, ಕಾಯಕ ಮತ್ತು ಮಾನವೀಯತೆಯ ಮೂಲ 'ವಿಚಾರ'ವನ್ನು ಜೀವಂತವಾಗಿಡುವುದೂ ಅಷ್ಟೇ ಮುಖ್ಯ. ಶರಣರ ಆಶಯದಂತೆ ಧರ್ಮವು ಮನುಷ್ಯನನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು, ಪ್ರತ್ಯೇಕಿಸುವ ಗೋಡೆಯಾಗಬಾರದು. — ಬಯಲು ಬಯಲನೆ ಬಿತ್ತಿ ತಂಡ
6
31
351
ASHA workers are hired under national health mission which is a union government's initiative and has a cost split up of 60:40 between union and state governments respectively. Despite this, the union pays 2000 and state pays 5000 monthly honorarium to the ASHA workers. These AC room legislators, from time to time, upgrade their allowances, benefits and salaries while the grass root workers are struggle for daily survival. 15000 is too little when we look at the Article 38 of constitution which directs the government to decrease the income inequalities. Already Karnataka faces huge injustice when it comes to tax redistribution from the Union govt. It would be sensible on part of state govt to demand 9000 monthly honorarium to the ASHA workers from Union govt and 6000 they've to pay from the state budget. @CMofKarnataka
1
6
20
494
ಸಾಂಸ್ಕೃತಿಕ ನಾಯಕನ ಗೌರವ ರಕ್ಷಣೆಗೆ ಕಠಿಣ ಕಾನೂನು ಅಗತ್ಯವಲ್ಲವೇ? ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಇರುವಂತಹ ಸಾಂವಿಧಾನಿಕ ಗೌರವದಂತೆಯೇ, ಕರ್ನಾಟಕ ಸರ್ಕಾರವು ಮಹಾಮಾನವತಾವಾದಿ, ವಿಶ್ವಗುರು ಬಸವಣ್ಣನವರನ್ನು ಅಧಿಕೃತವಾಗಿ 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿ ಗೌರವಿಸಿದೆ. ಕಳೆದ ೮೦೦ ವರ್ಷಗಳಿಂದಲೂ ವಚನ ಸಾಹಿತ್ಯ ಮತ್ತು ಬಸವಾದಿ ಶರಣರ ತತ್ವಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿ ಹಾಗೂ ಅಪಪ್ರಚಾರಗಳನ್ನು ತಡೆಯಲು ಒಂದು ನಿರ್ದಿಷ್ಟ ನೀತಿ ಸಂಹಿತೆ ಮತ್ತು ಕಠಿಣ ಕಾನೂನಿನ ಅಗತ್ಯವಿದೆ. ಬಸವಣ್ಣನವರು ಸ್ಥಾಪಿಸಿದ 'ಅನುಭವ ಮಂಟಪ'ವನ್ನು ಜಗತ್ತಿನ ಪ್ರಪ್ರಥಮ ಸಂಸತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೆಮ್ಮೆಯಿಂದ ಸ್ಮರಿಸಿದ್ದಾರೆ. ಅಷ್ಟೇ ಅಲ್ಲದೆ, ಜಗತ್ತನ್ನೇ ಆಳಿದ ಬ್ರಿಟಿಷ್ ಸಂಸತ್ತಿನ ಮುಂಭಾಗದಲ್ಲೇ ಬಸವಣ್ಣನವರ ಪುತ್ಥಳಿ ಸ್ಥಾಪನೆಯಾಗಿರುವುದು, ಬಸವಾದಿ ಶರಣರ ವಿಚಾರಧಾರೆಗಳ ಸಾರ್ವಕಾಲಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಆದರೆ, "ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲ" ಎಂಬಂತೆ, ಇತ್ತೀಚಿನ ದಿನಗಳಲ್ಲಿ ಬಸವ ತತ್ವ ವಿರೋಧಿಗಳ ಉಪಟಳ ಮಿತಿಮೀರುತ್ತಿದೆ. ಇಂತಹ ಅಪಪ್ರಚಾರಗಳಿಗೆ ಕಡಿವಾಣ ಹಾಕಿ, ವಚನ ಸಾಹಿತ್ಯದ ನೈಜ ಆಶಯಗಳನ್ನು ರಕ್ಷಿಸುವುದು ಘನ ಕರ್ನಾಟಕ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮೊದಲಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಸಂಪ್ರದಾಯವಾದಿಗಳ ಅಸಹನೆ, ಕರ್ನಾಟಕ ಸರ್ಕಾರವು ಬಸವಣ್ಣನವರನ್ನು 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿದ ಮೇಲಂತೂ ತಾರಕಕ್ಕೇರಿದೆ: ಹಿಂದಿನ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳಲ್ಲಿ ವಚನಕಾರರ ಕುರಿತು ವಿವಾದಾತ್ಮಕ ಮಾಹಿತಿಗಳನ್ನು ಸೇರಿಸಿ, ವಚನ ಸಾಹಿತ್ಯಕ್ಕೆ ಅಪಚಾರ ಎಸಗುವ ಪ್ರಯತ್ನ ನಡೆಯಿತು. ಕಳೆದ ಕೆಲವು ತಿಂಗಳುಗಳ ಹಿಂದೆ 'ವಚನ ದರ್ಶನ' ಕೃತಿಯ ಮೂಲಕ ವಿವಾದ ಸೃಷ್ಟಿಸಲಾಯಿತು. ಲಿಂಗಾಯತ ಮಠಾಧಿಪತಿಗಳ ಸಮಾವೇಶಗಳ ವಿರುದ್ಧವೂ ಅಪಪ್ರಚಾರ ನಡೆಸಲಾಯಿತು. ಪ್ರಸ್ತುತ, ರವಿ ಹಂಜ ಅವರ 'ಬಸವಮಂಟಪ' ಕುರಿತ ವಿವಾದಾತ್ಮಕ ಬರಹಗಳು ಮತ್ತೆ ಚರ್ಚೆಗೆ ಗ್ರಾಸವಾಗಿವೆ. ಇವೆಲ್ಲವನ್ನೂ ಗಮನಿಸಿದಾಗ, ಬಸವಣ್ಣನವರ ವಿಚಾರಧಾರೆಗಳು ಪಟ್ಟಭದ್ರ ಹಿತಾಸಕ್ತಿಗಳಿಗೆ ಎಂದಿಗೂ ಜೀರ್ಣಿಸಿಕೊಳ್ಳಲಾಗದ ಸಾರ್ವಕಾಲಿಕ ಮದ್ದಿನಂತಿವೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ, ತಾನೇ ಘೋಷಿಸಿದ 'ಸಾಂಸ್ಕೃತಿಕ ನಾಯಕ'ನ ಸ್ಥಾನಮಾನದ ಘನತೆಯನ್ನು ಕಾಪಾಡುವ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ. ಆದ್ದರಿಂದ, ಮುಂಬರುವ ಡಿಸೆಂಬರ್‌ನ ಚಳಿಗಾಲದ ಅಧಿವೇಶನದಲ್ಲೇ ಕರ್ನಾಟಕ ಸರ್ಕಾರವು ಈ ಕುರಿತು ಗಂಭೀರ ಚಿಂತನೆ ನಡೆಸಬೇಕು. 'ಸಾಂಸ್ಕೃತಿಕ ನಾಯಕ'ನ ಪಟ್ಟಕ್ಕೆ ಚ್ಯುತಿ ತರುವವರ ಹಾಗೂ ವಚನ ಸಾಹಿತ್ಯವನ್ನು ತಿರುಚಿ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ಮಸೂದೆಯನ್ನು ಜಾರಿಗೆ ತರಬೇಕು ಎಂಬುದು ಬಸವಣ್ಣನವರನ್ನು ಅಪ್ಪಿಕೊಂಡ ಸಮಸ್ತ ಕನ್ನಡಿಗರ ಆಶಯವಾಗಿದೆ. - ಬಯಲು ಬಯಲನೆ ಬಿತ್ತಿ ತಂಡ
4
19
333
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡುವುದೆ, ಕೂಡಲಸಂಗಮದೇವಾ? 🙏
2
16
1
188
4,634
ಶಂಕರ ಬಿದರಿ ಅವರ ರಾಜೀನಾಮೆ ಬೇಕು! ರವಿ ಹಂಜ್ ಅವರ ವಿವಾದಾತ್ಮಕ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾದಾಗ ಕಾಟಾಚಾರಕ್ಕೆ ಖಂಡಿಸುವುದು ಎಷ್ಟು ಸರಿ? ಪೂರ್ವಾಪರ ಯೋಚನೆ ಇಲ್ಲವೇ?: ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕೃತಿಯ ತಿರುಳು ಮತ್ತು ಲೇಖಕರ ಹಿನ್ನೆಲೆಯನ್ನು ವಿಚಾರಿಸಬೇಕಾಗಿತ್ತಲ್ಲವೇ? ಸಮಾಜದ ಪ್ರತಿಷ್ಠಿತ ಸಂಸ್ಥೆಯ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು, ವೇದಿಕೆಯ ಮೇಲೆ 'ಬಸವದ್ರೋಹಿ'ಯನ್ನು ಹೊಗಳುವ ಮುನ್ನ ಕಿಂಚಿತ್ತಾದರೂ ವಿವೇಚನೆ ಬೇಡವೇ? ಉತ್ತರದಾಯಿತ್ವದ ಕೊರತೆ: ಸಮಾಜದ ಜನ ವಿರೋಧ ವ್ಯಕ್ತಪಡಿಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು, "ನೀವು ಬೇಕಾದರೆ ಸ್ವತಂತ್ರ ಧರ್ಮ ಮಾಡಿಕೊಳ್ಳಿ" ಎಂದು ಉಡಾಫೆಯ ಉತ್ತರ ನೀಡುವುದು ಸರಿಯೇ? ನೀವು ಇಡೀ ಸಮುದಾಯಕ್ಕೆ ಉತ್ತರದಾಯಿಗಳಾಗಿದ್ದೀರಿ ಎಂಬುದನ್ನು ಮೊದಲು ನೆನಪಿನಲ್ಲಿಡಿ. ಕಠಿಣ ಕ್ರಮಗಳೆಲ್ಲಿ?: ಕೃತಿಯಲ್ಲಿನ ಆಘಾತಕಾರಿ ಅಂಶಗಳು ಹೊರಬಂದ ಮೇಲೂ, ರಾಜ್ಯಾಧ್ಯಕ್ಷರಾಗಿ ಸಂಸ್ಥೆಯ ವತಿಯಿಂದ ಅಧಿಕೃತ ಪತ್ರಿಕಾ ಪ್ರಕಟಣೆ (Press Note) ಯಾಕೆ ಹೊರಡಿಸಲಿಲ್ಲ? ಕೇವಲ ಬಾಯಿಮಾತಿನ ಖಂಡನೆಯಿಂದ ಏನು ಪ್ರಯೋಜನ? ಮೌನವೇಕೆ?: ರವಿ ಹಂಜ್ ಅವರಿಗೆ ಪಂಚಪೀಠದವರು ನೀಡಿದ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಲು ಯಾಕೆ ಮುಂದಾಗಲಿಲ್ಲ? ವೀರಶೈವ ಮಹಾಸಭೆಯ ವತಿಯಿಂದ ಕಾನೂನು ಪ್ರಕರಣ ದಾಖಲಿಸುವ ಕೆಲಸವನ್ನು ಯಾಕೆ ಮಾಡಲಿಲ್ಲ? ನಿಮ್ಮ ವೈಫಲ್ಯವನ್ನು ಸಮಾಜದ ನಾಯಕರು ಪ್ರಶ್ನಿಸಿದರೆ, "ರಾಜಕೀಯ ಏಳಿಗೆಗಾಗಿ ಆರೋಪ ಮಾಡುತ್ತಿದ್ದೀರಿ" ಎಂದು ಅವರ ಮೇಲೆಯೇ ಗೂಬೆ ಕೂರಿಸಲು ಹೊರಟಿದ್ದೀರಿ. ಅಷ್ಟಕ್ಕೂ ನಿಮಗೆ ಬಸವದ್ರೋಹಿಗಳ ಮೇಲೆ ಇಷ್ಟೊಂದು ಮೋಹವೇಕೆ? ನಿಮ್ಮಿಂದ ಸಮಾಜಕ್ಕೆ ಯಾವುದೇ ಒಳಿತಾಗುವುದಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ನೈತಿಕ ಹೊಣೆ ಹೊತ್ತು ಕೂಡಲೇ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಿರಿ!
9
17
114
2,384
ವಚನ ಪಿತಾಮಹ ಫ. ಗು. ಹಳಕಟ್ಟಿಯವರ ತ್ಯಾಗ, ಸಾಧನೆ ಮತ್ತು ಶರಣರ ವಚನ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಅವರು ನಡೆಸಿದ ಅವಿಸ್ಮರಣೀಯ ಹೋರಾಟದ ಸ್ಪೂರ್ತಿದಾಯಕ ಜೀವನಗಾಥೆ. 🙏📚🌺
20
1
74
945